ಆರೋಗ್ಯ

ಹಣ್ಣು, ತರಕಾರಿ, ಧಾನ್ಯ ಸೇವನೆಯಿಂದ ಮಹಿಳೆಯರಲ್ಲಿ ಮೂಳೆ ಮುರಿತ ಅಪಾಯ ಕಡಿಮೆ

Sumana Upadhyaya
ನ್ಯೂಯಾರ್ಕ್: ತರಕಾರಿ, ಹಣ್ಣು, ಮೀನು, ಧಾನ್ಯಗಳು ಇತ್ಯಾದಿಗಳನ್ನು ಮಹಿಳೆಯರು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಮೂಳೆಗಳು ಬಲಿಷ್ಠಗೊಂಡು ಮೂಳೆ ಮುರಿತವಾಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಹೆಚ್ಚು ಉರಿಯೂತದ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.
ಅತಿ ಹೆಚ್ಚು ಮಸಾಲೆ ಪದಾರ್ಥ ಸೇವನೆ, ಉರಿಯೂತದ ಪದಾರ್ಥಗಳನ್ನು ಸೇವಿಸುವುದರಿಂದ ಮಹಿಳೆಯರ ದೇಹದ ಮೂಳೆಗಳ ಶಕ್ತಿ ಕಡಿಮೆಯಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಹೆಚ್ಚಿನ ಉರಿಯೂತದ ಪದಾರ್ಥಗಳನ್ನು ಸೇವಿಸುವ ಮಹಿಳೆಯರಲ್ಲಿ ಸೊಂಟದ ಮೂಳೆ ಮುರಿತವಾಗುವ ಪ್ರಮಾಣ ಶೇಕಡಾ 50ರಷ್ಟು ಅಧಿಕವಾಗಿದೆ. ಅದರಲ್ಲೂ 63 ವರ್ಷಕ್ಕಿಂತ ಕೆಳಗಿನ ಮಹಿಳೆಯರಲ್ಲಿ ಅದು ಹೆಚ್ಚು ಎಂದು ಆರ್ಚರ್ಡ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟೊನ್ಯಾ ಆರ್ಚರ್ಡ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕೆ ಮಹಿಳೆಯರು ಮೂರು ತಿಂಗಳ ಕಾಲ ಸೇವಿಸುವ 32 ಆಹಾರ ಪದಾರ್ಥಗಳನ್ನು ಪರೀಕ್ಷಿಸಲಾಗಿತ್ತು. ಮಹಿಳೆಯರಲ್ಲಿ ಋತುಬಂಧ ನಿಂತ ಮೇಲೆ ಮೂಳೆಗಳ ಶಕ್ತಿ ಕಡಿಮೆಯಾಗುತ್ತದೆ ಮತ್ತು ಬೇಗನೆ ಮೂಳೆ ಮುರಿತವಾಗುತ್ತದೆ ಎಂದು ಆರ್ಚರ್ಡ್ ಹೇಳುತ್ತಾರೆ.
ಈ ಅಧ್ಯಯನ ಬೋನ್ ಅಂಡ್ ಮಿನರಲ್ ರಿಸರ್ಚ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
SCROLL FOR NEXT