ಫುಟ್ಬಾಲ್ 
ಆರೋಗ್ಯ

ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ: ವರದಿ

ಯುವ ಜನತೆಗೆ ಒಂದು ಸಿಹಿ ಸುದ್ದಿ. ನಿತ್ಯ ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ವರದಿಯೊಂದು ಹೇಳಿದೆ...

ವಾಷಿಂಗ್ಟನ್: ಯುವ ಜನತೆಗೆ ಒಂದು ಸಿಹಿ ಸುದ್ದಿ. ನಿತ್ಯ ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ವರದಿಯೊಂದು ಹೇಳಿದೆ. 
ಈಜುಗಾರರು, ಸೈಕ್ಲಿಸ್ಟ್ಸ್ ಮತ್ತು ಯುವ ಫುಟ್ಬಾಲ್ ಆಟಗಾರರನ್ನು ಸಮೀಕ್ಷೆಗೆ ತೆಗೆದುಕೊಳ್ಳಲಾಯಿತು. ಇದರಲ್ಲಿ ಈ ಎರಡು ಆಟಗಳಿಗಿಂತ ಫುಟ್ಬಾಲ್ ಆಟಗಾರರ ಮೂಳೆ ಬೆಳವಣಿಗೆ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ವಾಷಿಂಗ್ಟನ್ ಯುನಿವರ್ಸಿಟಿಯೊಂದು ವರದಿ ಮಾಡಿದೆ. 
ಹದಿಹರೆಯದಲ್ಲಿ ಯುವಕರ ಬೆಳವಣಿಗೆ ಪ್ರಮುಖ ಅವಧಿಯಾಗಿದ್ದು ಈ ವೇಳೆ ಯುವಕರ ಮೂಳೆ ಬೆಳವಣಿಗೆಯಿಂದ ಅವರು ಶಕ್ತಿಶಾಲಿಗಳಾಗುತ್ತಾರೆ. ಹೀಗಾಗಿ ಯುವ ಜನತೆ ಹೆಚ್ಚಾಗಿ ಫುಟ್ಬಾಲ್ ಆಟವನ್ನು ಆಡುವುದು ಉತ್ತಮ ಎಂದು ಯುನಿವರ್ಸಿಟಿ ಸಲಹೆ ನೀಡಿದೆ. 
ಈಜುಗಾರಿಕೆ ಮತ್ತು ಸ್ಲೈಕ್ಲಿಂಗ್ ಮಾಡುವುದರಿಂದ ದೇಶದ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದರೆ ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಈಜು ಮತ್ತು ಸ್ಲೈಕ್ಲಿಂಗ್ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 
ಇದೊಂದು ಸುದೀರ್ಘ ಸಂಶೋಧನೆಯಾಗಿದ್ದು ಇದಕ್ಕಾಗಿ 12-14 ವಯೋಮಿತಿಯ 116 ಯುವಕರನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಇದರಲ್ಲಿ ಮೂರು ರೀತಿಯಲ್ಲಿ ಸಂಶೋಧನೆಗಳನ್ನು ಮಾಡಲಾಯಿತು. ಮೂಳೆ ಖನಿಜಾಂಶ, ಸೊಂಟದ ಬೆನ್ನೆಲುಬು, ತೊಡೆಯೆಲುಬಿನ ಕುತ್ತಿಗೆ ಭಾಗಗಳಲ್ಲಿ ಮೂಳೆ ಬೆಳವಣಿಗೆ ಕ್ರಮವಾಗಿ ಹೆಚ್ಚಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್‌ನಲ್ಲಿ ಚರ್ಚೆಗೆ ನಾವು ಸಿದ್ಧ': ಕೇಂದ್ರ ಆರೋಗ್ಯ ಸಚಿವ JP Nadda

Jantar Mantar ನಲ್ಲಿ ಮತ್ತೆ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಕಲ್ಲು ತೂರಾಟ, ಟೋಲ್ಸ್ಟಾಯ್ ಮಾರ್ಗ್‌, ಸಂಸದ್ ಮಾರ್ಗ್‌ನಲ್ಲಿ ಉದ್ವಿಗ್ನತೆ, 5 ಪೊಲೀಸರಿಗೆ ಗಾಯ

ಕರ್ನಾಟಕದಲ್ಲಿ 44.84 ಲಕ್ಷ ಮತದಾರರ ಹಕ್ಕಿಗೆ ಕುತ್ತು? ಪಟ್ಟಿಯಿಂದ ಕೈಬಿಡುವ ಸಾಧ್ಯತೆ!

ಉಪವಾಸ ಅಂತ್ಯಗೊಳಿಸುವುದಕ್ಕೆ ಷರತ್ತು ವಿಧಿಸಿದ ಸೋನಮ್ ವಾಂಗ್‌ಚುಕ್

ಬೆಂಗಳೂರು ಬೈಕ್ ಸವಾರರೇ ಎಚ್ಚರ: ಪಾದಚಾರಿ ಮಾರ್ಗದಲ್ಲಿ ಬೈಕ್ ಚಲಾಯಿಸಿದರೆ 5 ಸಾವಿರ ರೂ ದಂಡ!