ಆರೋಗ್ಯ

ಯೋಗಾಸನದ ಸಲಹಸೂತ್ರಗಳನ್ನು ಪ್ರಚುರಪಡಿಸಲಿರುವ ಏಮ್ಸ್

Sumana Upadhyaya
ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್) ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಯೋಗಾಸನದ ಮಾರ್ಗದರ್ಶನಗಳನ್ನು ಜನತೆಗೆ ನೀಡಲಿದೆ. ಈ ಯೋಗಾಸನಗಳ ಮೂಲಕ ಜನರು ಕೆಲವು ನಿರ್ದಿಷ್ಟ ರೋಗಗಳನ್ನು ಪರಿಹರಿಸಬಹುದು. 
ಪ್ರಾಚೀನ ಭಾರತೀಯ ಆಧ್ಯಾತ್ಮಿಕ ಶಿಸ್ತಿನ ಮೂಲಕ ಕೆಲವು ರೋಗಗಳನ್ನು ಗುಣಪಡಿಸಲು ಯೋಗಾಸನಗಳು ಜನರಿಗೆ ಬಹಳ ಉಪಯೋಗವಾಗುತ್ತಿದ್ದು, ಇದನ್ನು ಜನತೆಗೆ ಪ್ರಚುರಪಡಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದರು.
ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಎಸ್-ವ್ಯಾಸ, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಏಮ್ಸ್ ನಲ್ಲಿ ಆಂತರಿಕ ಔಷಧಿ ಮತ್ತು ಸಂಶೋಧನೆಗೆ ಹಲವು ರೋಗಗಳಿಗೆ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಲು ಸಾಕ್ಷ್ಯಾಧಾರಗಳ ಆಧಾರಿತ ಸಂಶೋಧನೆಗಳನ್ನು ನಡೆಸುತ್ತಿದೆ.
ಎಲ್ಲಾ ರೋಗಗಳಿಗೂ ಎಲ್ಲಾ ರೀತಿಯ ಯೋಗಾಭ್ಯಾಸ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಹೊಂದಿಕೆಯಾಗುವುದಿಲ್ಲ. ಹೀಗಾಗಿ ನಾವು ವಿಸ್ತಾರವಾದ ಗುಣಮಟ್ಟದ ಯೋಗ ಶಿಷ್ಟಾಚಾರಗಳಿಗೆ ಹಲವು ರೋಗಗಳನ್ನು ಗುಣಪಡಿಸಲು ಮತ್ತು ಚಿಕಿತ್ಸೆ ನೀಡಲು ಸಾಕ್ಷ್ಯಾಧಾರ ಆಧಾರಿತ ಸಂಶೋಧನೆ ಮಾಡುತ್ತಿದ್ದೇವೆ ಎಂದು ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೆರಿಯಾ ತಿಳಿಸಿದ್ದಾರೆ. 
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾತನಾಡಿದ ಅವರು, ರೋಗಿಗಗಳು ನಿಯಮಿತವಾಗಿ ಯೋಗ ಮಾಡುವುದರಿಂದ ಔಷಧಿ ಸೇವನೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ತೀವ್ರ ತಲೆನೋವಿಗೆ ಕಾರಣವಾಗುವ ಮೈಗ್ರೇನ್ ನ್ನು ಯೋಗದಿಂದ ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ಏಮ್ಸ್ ಯಾದೃಚ್ಛಿಕ ಅಧ್ಯಯನವನ್ನು ಕೈಗೊಂಡಿದೆ.
ದೇಹದಲ್ಲಿ ಮತ್ತು ಮೆದುಳಿನಲ್ಲಿರುವ ಕೆಲವು ರಾಸಾಯನಿಕಗಳು ಯೋಗಾಸನದಿಂದ ಧನಾತ್ಮಕ ಪರಿಣಾಮ ಬೀರುವುದರಿಂದ ಮೈಗ್ರೇನ್ ನ್ನು ಕಡಿಮೆ ಮಾಡಬಹುದು. ಸಿರೊಟೋನಿನ್, ಮೈಗ್ರೇನ್ಗಳನ್ನು ನಿವಾರಿಸುವ ಮೂಲಕ ಮಿದುಳಿನ ರಕ್ತ ನಾಳಗಳನ್ನು ಬಿಗಿಗೊಳಿಸುತ್ತದೆ.
SCROLL FOR NEXT