ಆರೋಗ್ಯ

ಪುರುಷರೇ, ಮೂಳೆಗಳ ಸದೃಢ ಆರೋಗ್ಯಕ್ಕಾಗಿ ಜಿಮ್ ಮಾಡಿ

Srinivas Rao BV
ನ್ಯೂಯಾರ್ಕ್: ಪ್ರತಿರೋಧ ತರಬೇತಿ, ವಿವಿಧ ರೀತಿಯ ಜಿಗಿತಗಳಂತಹ ಕಠಿಣ ವ್ಯಾಯಾಮ ಮಾಡುವುದರಿಂದ ಪುರುಷರ ಮೂಳೆಗಳು ಸದೃಢವಾಗಲಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಹೇಳಿದೆ. 
ಒಂದು ವರ್ಷ ಕಠಿಣ ವ್ಯಾಯಾಮ ಮಾಡುವುದರಿಂದ ಮೂಳೆಗಳಲ್ಲಿ ತಯಾರಾಗುವ ಹಾನಿಕಾರಕ ಪ್ರೋಟೀನ್ ಅಂಶಗಳನ್ನು ತಗ್ಗಿಸಿ, ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿರುವ ಐಜಿಎಫ್-1 ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನಾ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪುರುಷರು ಹೆಚ್ಚು ವ್ಯಾಯಾಮ ಮಾಡುವುದು ಮೂಳೆಗಳು ಸದೃಢಗೊಳ್ಳುವುದಕ್ಕೆ ಸಹಕಾರಿಯಾಗಿದೆ ಎಂದು ಜರ್ನಲ್ ಬೋನ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ. 
ಹೆಚ್ಚಿನ ಜನರು ದೈಹಿತವಾಗಿ ಆರೋಗ್ಯವಾಗಿರುತ್ತಾರೆ. ತೂಕ ಹೆಚ್ಚಿಸಿಕೊಳ್ಳುವುದನ್ನು ತಡೆಗಟ್ಟಲು, ಹೃದಯ ಸಂಬಂಧಿ ಸಮಸ್ಯೆ, ಮಧುಮೇಹವನ್ನು ತಡೆಗಟ್ಟಲು ವ್ಯಾಯಾಮ ಮಾಡುವುದು ಅತ್ಯಗತ್ಯ ಎಂಬುದು ಜನರಿಗೂ ತಿಳಿದಿದೆ, ಆದರೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಕಠಿಣ ವ್ಯಾಯಾಮ ಮಾಡಬೆಕು ಎಂದು ಕೊಲಂಬಿಯಾದಲ್ಲಿರುವ ಮಿಸ್ಸೌರಿ ವಿಶ್ವವಿದ್ಯಾಲಯ ತಜ್ಞರು ಹೇಳಿದ್ದಾರೆ. 
ಕಡಿಮೆ ಮೂಳೆ ದ್ರವ್ಯರಾಶಿ ಹೊಂದಿರುವ 25-60 ವರ್ಷದವರೆಗಿನ ಪುರುಷರನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಒಂದು ಗುಂಪು ಪ್ರತಿರೋಧ ತರಬೇತಿ ಸೇರಿದಂತೆ  ಕಠಿಣ ವ್ಯಾಯಾಮ ಮಾಡಿತ್ತು. ಮತ್ತೊಂದು ಗುಂಪು ವಿವಿಧ ರೀತಿಯ ಜಿಗಿತಗಳಂತಹ ಕಠಿಣ ವ್ಯಾಯಾಮ ಮಾಡಿತ್ತು. 12 ತಿಂಗಳ ನಂತರ ಮೂಳೆಗಳಲ್ಲಿ ಉತ್ಪಾದನೆಯಾಗುವ ಹಾನಿಕಾರಕ ಪ್ರೋಟೀನ್ ಅಂಶ ಕಡಿಮೆಯಾಗಿರುವುದು ಕಂಡುಬಂದಿತ್ತು ಎಂದು ಮಿಸ್ಸೌರಿ ವಿಶ್ವವಿದ್ಯಾಲಯ ತಜ್ಞರು ಹಿಂಟನ್ ಮಾಹಿತಿ ನೀಡಿದ್ದಾರೆ. 
SCROLL FOR NEXT