ಆರೋಗ್ಯ

300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ

Srinivas Rao BV
ಯುನೈಟೆಡ್ ನೇಷನ್ಸ್: ಜಗತ್ತಿನಾದ್ಯಂತ 300 ಮಿಲಿಯನ್ ಗಿಂತಲೂ ಹೆಚ್ಚು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ. 
ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಏಜೆನ್ಸಿಯೊಂದು ಈ ವರದಿಯನ್ನು ಬಿಡುಗಡೆ ಮಾಡಿದ್ದು, ಮಾನಸಿಕ ಆರೋಗ್ಯ ವೃದ್ಧಿಗೊಳಿಸುವ ವಿಧಾನಗಳ ಬಗ್ಗೆ ಎಲ್ಲಾ ರಾಷ್ಟ್ರಗಳು ಗಂಭೀರವಾಗಿ ಚಿಂತಿಸುವಂತೆ ಮಾಡಿದ್ದು, ತ್ವರಿತವಾಗಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ವರದಿ ಹೇಳಿದೆ. 
2005-2015 ರ ನಡುವೆ ಖಿನ್ನತೆಗೊಳಗಾಗಿರುವವರ ಸಂಖ್ಯೆ ಶೇ.18 ರಷ್ಟು ಏರಿಕೆಯಾಗಿದ್ದು, ಖಿನ್ನತೆಯನ್ನು ದೂರ ಮಾಡಲು ಪರಿಹಾರ ಕಂಡುಕೊಳ್ಳುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಡಿಪ್ರೆಶನ್: ಲೆಟ್ಸ್ ಟಾಕ್ ಎಂಬ ವರ್ಷ ಅವಧಿಯ ಅಭಿಯಾನ ಹಮ್ಮಿಕೊಂಡಿದೆ. 
ಏ.7 ರಂದು ವಿಶ್ವ ಆರೋಗ್ಯ ದಿನಾಚರಣೆಯಾಗಿದ್ದು, ಇದನ್ನೇ ಪ್ರಮುಖವಾಗಿರಿಸಿಕೊಂಡು ವಿಶ್ವಸಂಸ್ಥೆ ಖಿನ್ನತೆ ಬಗೆಹರಿಸಲು ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಆತ್ಮಹತ್ಯೆಗೆ ಖಿನ್ನತೆ ಪ್ರಮುಖವಾದ ಕಾರಣವಾಗಿದೆ. ಖಿನ್ನತೆಯಿಂದಲೇ ಪ್ರತಿ ವರ್ಷ ಸಾವಿರಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಖಿನ್ನತೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವುದು ಡಿಪ್ರೆಶನ್: ಲೆಟ್ಸ್ ಟಾಕ್ ಅಭಿಯಾನದ ಪ್ರಮುಖ ಉದ್ದೇಶ ಎಂದು ವಿಶ್ವ ಸಂಸ್ಥೆ ತಿಳಿಸಿದೆ. 
SCROLL FOR NEXT