ಆರೋಗ್ಯ

ಅಪರೂಪದ ಜನ್ಮದತ್ತ ರೋಗ ಲಕ್ಷಣಕ್ಕೆ ಕನ್ನಡಿಗ ವೈದ್ಯ "ನಲ್ಲೇಗೌಡ" ಹೆಸರು!

Srinivasamurthy VN

ಬೆಂಗಳೂರು: ಅಪರೂಪದ ಜನ್ಮದತ್ತ ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ ಮಾಡಲಾಗಿದೆ.

ಕೈ ಎಲುಬುಗಳು ನಾಪತ್ತೆಯಾಗಿರುವುದು, ಹೆಬ್ಬೆರಳು ಇಲ್ಲದಿರುವುದು, ಎರಡು ಮೂತ್ರ ವಿಸರ್ಜನಾ ನಾಳಗಳಿರುವುದು, ಕಿಡ್ನಿ ಮತ್ತು ಹೃದಯ ಅಸಹಜ ಸ್ಥಳದಲ್ಲಿರುವುದು ಮುಂತಾದ ಲಕ್ಷಣವುಳ್ಳ ಜನ್ಮದತ್ತ ಕಾಯಿಲೆಯೊಂದನ್ನು  ಕರ್ನಾಟಕ ಮೂಲದ ವೈದ್ಯ ನಲ್ಲೇಗೌಡ ಅವರು ಮೊದಲ ಬಾರಿಗೆ ಪತ್ತೆ ಮಾಡಿದ್ದರು. ಅಲ್ಲದೆ ಅದರ ಬಗ್ಗೆ ನಲ್ಲೇಗೌಡ ಅವರು ಲೇಖನ ಬರೆದಿದ್ದರು. ನಲ್ಲೇಗೌಡ ಅವರ ಈ ವಿಶಿಷ್ಠ ಲೇಖನಕ್ಕೆ ಜಾಗತಿಕ ಮನ್ನಣೆ ದೊರಕಿದ್ದು, ಇದೇ  ಮೊದಲ ಬಾರಿಗೆ ಈ ರೋಗ ಲಕ್ಷಣವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ರೋಗ ಲಕ್ಷಣವನ್ನು ‘ನಲ್ಲೇಗೌಡ ಸಿಂಡ್ರೋಮ್‌ (ಲಕ್ಷಣ)' ಎಂದು ನಾಮಕರಣ ಮಾಡಲಾಗಿದೆ.

ಚಿತ್ರದುರ್ಗದ ಹೊಳಲ್ಕೆರೆಯ ಡಾ. ಮಲ್ಲಿಕಾರ್ಜುನ ನಲ್ಲೇಗೌಡ ಅವರು, ಪ್ರಸ್ತುತ ಅಮೆರಿಕದ ಕೊಲೊರಾಡೊದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2002ರಲ್ಲಿ ಡಾ. ನಲ್ಲೇಗೌಡ ದೆಹಲಿಯ ಎಐಐಎಂಎಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ  ಬಾಲಕನೊಬ್ಬ ಹಲವು ಸಮಸ್ಯೆಗಳೊಂದಿಗೆ ಚಿಕಿತ್ಸೆಗೆ ಬಂದಿದ್ದ. ಆ ಬಾಲಕನಿಗೆ ತ್ರಿಜ್ಯದ ರೀತಿಯಲ್ಲಿ ಜೋಡಿಸಲ್ಪಟ್ಟಿದ್ದ ಕೈಗಳಿದ್ದವು, ಆತನ ಕಣ್ಣುಗಳ ನಡುವೆ ದೂರ ಹೆಚ್ಚಿತ್ತು. ಆತನ ಹೃದಯ ಬಡಿತ ಎದೆಯ ಬಲಭಾಗದಲ್ಲಿ  ಕೇಳಿಸುತಿತ್ತು. ಆತನಿಗೆ ಎರಡು ಮೂತ್ರ ವಿಸರ್ಜನಾ ನಾಳಗಳಿದ್ದವು. ಹೃದಯ ಬಲಭಾಗದಲ್ಲಿತ್ತು. ಈ ಬಗ್ಗೆ ಸಂಶೋಧನೆ ನಡೆಸಿದ್ದ ನಲ್ಲೇಗೌಡ, ರೋಗದ ಲಕ್ಷಣ ಪತ್ತೆ ಹಚ್ಚಿದ್ದರು.

SCROLL FOR NEXT