ಆರೋಗ್ಯ

ಹಿಮ್ಮಡಿ ನೋವು ಮತ್ತು ಅದಕ್ಕೆ ಪರಿಹಾರಗಳು

Sumana Upadhyaya

ಹಿಮ್ಮಡಿ ನೋವಿನಿಂದ ಬಳಲುವವರು ಅನೇಕ ಮಂದಿ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾಗುವ ನೋವು ನಂತರ ತೀವ್ರವಾಗಿ ಕಾಡುವ ಸಾಧ್ಯತೆಯಿದೆ. ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಇರುವ ನೋವು ಸ್ವಲ್ಪ ಹೊತ್ತಿನವರೆಗೆ ಇರುತ್ತದೆ ಎಂದು ಹೇಳುವವರನ್ನು ನಾವು ಕೇಳುತ್ತೇವೆ.

ಅನೇಕ ಕಾರಣಗಳಿಂದ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು. ಅಂದರೆ ಕಾಲಿನ ಹಿಂಭಾಗಕ್ಕೆ ಗಾಯವಾಗುವುದು ಅಥವಾ ಏಟು ಸಂಭವಿಸುವುದು.

ಇನ್ನುಳಿದ ಕಾರಣಗಳೆಂದರೆ:

  • ಪ್ಲಾಂಟರ್ ಫ್ಯಾಸಿಯಾಗೆ ಗಾಯವಾಗುವುದು.
  • ಗಟ್ಟಿಯಾದ ಮತ್ತು ಪಾದಕ್ಕೆ ಸರಿಯಾಗಿ ಹೊಂದದಿರುವ ಪಾದರಕ್ಷೆಗಳನ್ನು ಧರಿಸುವುದರಿಂದ
  • ಹಿಮ್ಮಡಿಯ ಚರ್ಮದ ದೌರ್ಬಲ್ಯ
  • ಪಾದ ಅಥವಾ ಹಿಮ್ಮಡಿ ಸಂಧಿಸುವಲ್ಲಿ ಆರ್ಥ್ರಿಟೀಸ್
  • ಹಿಮ್ಮಡಿಯ ಹೊರ ಅಥವಾ ಒಳ ಭಾಗಗಳಲ್ಲಿ ನರಗಳಲ್ಲಿ ತುರಿಕೆ
  • ಹಿಮ್ಮಡಿ ಮೂಳೆಯ ಮುರಿತದಿಂದ ಹಿಮ್ಮಡಿ ನೋವು ಕಾಣಿಸಬಹುದು.
  • ಅತಿಯಾದ ತೂಕ
ಪ್ಲಾಂಟರ್ ಫೇಸಿಟಿಸ್ ಎಂದರೇನು?
ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?
  • ಅತಿಯಾದ ತೂಕದಿಂದ ಹಿಮ್ಮಡಿಗೆ ಹೊರೆಯಾಗುವುದು ಹೆಚ್ಚು. ಹೀಗಾಗಿ ದೇಹ ತೂಕದ ಮೇಲೆ ಗಮನವಿರಬೇಕು.
  • ಹಿಮ್ಮಡಿಗೆ ಹಿತವಾಗುವ ಪಾದರಕ್ಷೆ ಧರಿಸಿದರೆ ಒಳ್ಳೆಯದು.
  • ಸರಳ ವ್ಯಾಯಾಮಗಳನ್ನು ಮನೆಯಲ್ಲಿ ಮಾಡುತ್ತಿರಿ.
  • ವೈದ್ಯರ ಸಲಹೆ ಪಡೆದು ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಿ.
  • ಹಿಮ್ಮಡಿ ನೋವು ಸರಳ ಮದ್ದುಗಳಿಂದ ಕಡಿಮೆಯಾಗದಿದ್ದರೆ ತಜ್ಞರ ಸಲಹೆ ಪಡೆಯುವುದು ಉತ್ತಮ, ಅತಿಯಾದ ತೂಕ ಕಡಿಮೆ ಮಾಡುವುದು, ಪಾದಕ್ಕೆ ಸರಿಹೊಂದುವ ಪಾದರಕ್ಷೆಗಳನ್ನು ಧರಿಸುವುದು ಉತ್ತಮ
SCROLL FOR NEXT