ಆರೋಗ್ಯ

ಸೋಡಾ ಸೇವನೆಯಿಂದ ಗರ್ಭಧಾರಣೆಯ ಸಾಧ್ಯತೆ ಕಡಿಮೆ

Srinivas Rao BV
ಸೋಡಾ ಅಥವಾ ಸಕ್ಕರೆ ಅಂಶ ಹೊಂದಿರುವ ಪಾನೀಯಗಳನ್ನು ದಿನಕ್ಕೊಮ್ಮೆ ಸೇವಿಸುವುದು ಗರ್ಭಧಾರಣೆಯ ಸಾಧ್ಯತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ಎಚ್ಚರಿಸಿದೆ. 
ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳನ್ನು ಪ್ರತಿ ನಿತ್ಯ ಸೇವಿಸುವುದರಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಧ್ಯತೆ ಶೇ.33 ರಷ್ಟು ಕಡಿಮೆಯಾಗುತ್ತದೆ ಎಂದು ಬೋಸ್ಟನ್ ವಿಶ್ವವಿದ್ಯಾನಿಲಯದ ಪಬ್ಲಿಕ್ ಹೆಲ್ತ್ ವಿಭಾಗ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. 
ಪ್ರತಿದಿನ ಸೋಡಾ ಸೇವಿಸುವುದರಿಂದ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಧ್ಯತೆ ಶೇ.25 ರಷ್ಟು ಕಡಿಮೆಯಾದರೆ ಪುರುಷರಲ್ಲಿ ಶೇ.33 ರಷ್ಟು ಕಡಿಮೆಯಾಗುತ್ತದೆ. ಸಂತಾನೋತ್ಪತ್ತಿ ಸಾಧ್ಯತೆ ಕುಗ್ಗುವುದು ಹಾಗೂ ಸೋಡಾ ಸೇವಿಸುವುದಕ್ಕೂ ಸಕಾರಾತ್ಮಕ ಸಂಬಂಧವಿದೆ ಎಂದು ಅಧ್ಯಯನ ತಂಡದಲ್ಲಿದ್ದ ಎಲಿಜಬೆತ್ ಹ್ಯಾಚ್ ಹೇಳಿದ್ದಾರೆ.    
ಸಂತಾನಕ್ಕಾಗಿ ಯತ್ನಿಸುತ್ತಿರುವವರು ಈ ರೀತಿಯ ಪಾನಿಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಎಂದು ಅಧ್ಯಯನ ತಂಡ ಸಲಹೆ ನೀಡಿದ್ದು, ಅಧ್ಯಯನ ವರದಿ ಎಪಿಡೆಮಿಯಾಲಜಿ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. 
SCROLL FOR NEXT