ಆರೋಗ್ಯ

ಮಹಿಳೆಯರಿಗೆ ಪುರುಷರಿಗಿಂತ ಆಯಸ್ಸು ಹೆಚ್ಚು ಏಕೆ?

Vishwanath S
ನ್ಯೂಯಾರ್ಕ್: ಜೈವಿಕವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದು ಇದರಿಂದಾಗಿಯೇ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂಬ ಅಂಶ ಬಹಿರಂಗಗೊಂಡಿದ್ದು ಮಹಿಳೆಯರು ಲೈಂಗಿಕವಾಗಿ ದುರ್ಬಲಳು ಎಂಬ ಕಲ್ಪನೆಯನ್ನೇ ಪ್ರಶ್ನಿಸುವಂತಿದೆ.
ಮಹಿಳೆಯರು ಸಾಮಾನ್ಯ ಕಾಲದಲ್ಲಿ ಪುರುಷರಿಗಿಂತ ಹೆಚ್ಚು ಬದುಕುತ್ತಾರೆ ಅಂತಲ್ಲ. ಆದರೆ ಕ್ಷಾಮಗಳು ಮತ್ತು ಸಾಂಕ್ರಾಮಿಕ ರೋಗಗಳಂತಹ ಕೆಟ್ಟ ಸಂದರ್ಭಗಳಲ್ಲಿ ಸಹ ಬದುಕುಳಿಯುವ ಸಾಧ್ಯತೆ ಹೆಚ್ಚಿವೆಯಂತೆ. 
ಮಹಿಳೆಯರಿಗೆ ಹೆಚ್ಚಿನ ಜೀವಿತಾವಧಿ ಏಕೆಂದರೆ ಅವರು ಪ್ರೌಢಾವಸ್ಥೆಗಿಂತ ಶೈಶವಾವಸ್ಥೆಯಲ್ಲಿ ಹೆಚ್ಚಾಗಿ ಬದುಕುಳಿಯುವ ಪ್ರಯೋಜನವನ್ನು ಹೊಂದಿರುತ್ತಾರೆ. ಇನ್ನು ಪ್ರತಿಕೂಲ ಕಾಲದಲ್ಲಿ ನವಜಾತ ಗಂಡು ಶಿಶುಗಳಿಗಿಂತ ಹೆಚ್ಚು ನವಜಾತ ಹೆಣ್ಣು ಶಿಶುಗಳು ಬದುಕುಳಿಯುವುದು ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. 
ಇನ್ನು ಎರಡೂ ಲಿಂಗಗಳಲ್ಲೂ ಮರಣ ಪ್ರಮಾಣವು ಇದ್ದೇ ಇರುತ್ತವೆ. ಆದರೆ ಮಹಿಳೆಯರು ಪುರುಷರಿಗಿಂತ ಸರಾಸರಿ ಆರು ತಿಂಗಳಿನಿಂದ ನಾಲ್ಕು ವರ್ಷಗಳವರೆಗೆ ಹೆಚ್ಚು ಕಾಲ ಜೀವಿಸುತ್ತಾರೆ. 
ಮಹಿಳೆಯರಲ್ಲಿ ವಿಶೇಷವಾಗಿ ಮದಜನಕ (ಈಸ್ಟ್ರೋಜೆನ್)ದಂತಹ ಜೆನೆಟಿಕ್ಸ್ ಅಥವಾ ಹಾರ್ಮೋನುಗಳನ್ನು ಹೊಂದಿದ್ದು ಈ ಕಾರಣದಿಂದಾಗಿ ಅವರಲ್ಲಿ ಜೈವಿಕ ಅಂಶಗಳನ್ನು ಹೆಚ್ಚಿವೆ. ಇವು  ಮಹಿಳೆಯರ ದೇಹವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಂತಹ ಪ್ರತಿರಕ್ಷಿತ ರಕ್ಷೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ನಮ್ಮ ಈ ಸಂಶೋಧನೆಯಿಂದ ಜೀವಿತಾವಧಿ ಕುರಿತಂತ ಮಹತ್ತರ ಅಂಶಗಳು ಬೆಳಕಿಗೆ ಬಂದಿವೆ ಎಂದು ಅಮೆರಿಕದ ಡರ್ಹಾಮ್ ನ ಡ್ಯುಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವರ್ಜೀನಿಯಾ ಜರುಲ್ಲಿ ಹೇಳಿದ್ದಾರೆ. 
SCROLL FOR NEXT