ಸಂಗ್ರಹ ಚಿತ್ರ 
ಆರೋಗ್ಯ

ಭಾರತೀಯ ಹೆಣ್ಮಕ್ಕಳು ಮುಂಚಿತವಾಗಿ ಪ್ರೌಢಾವಸ್ಥೆ ತಲುಪುತ್ತಿರುವುದು ಏಕೆ?

ಹರೆಯಕ್ಕೆ ಬರುವುದು ಅಥವಾ ಪ್ರೌಢಾವಸ್ಥೆಗೆ ಬರುವುದು ಎಂದರೆ ಹುಡುಗಿಯರು ದೈಹಿಕವಾಗಿ ಪ್ರೌಢರಾಗಿ, ಲೈಂಗಿಕವಾಗಿ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಗಳಿಸುವುದು ಎಂದು ಅರ್ಥ...

ಹರೆಯಕ್ಕೆ ಬರುವುದು ಅಥವಾ ಪ್ರೌಢಾವಸ್ಥೆಗೆ ಬರುವುದು ಎಂದರೆ ಹುಡುಗಿಯರು ದೈಹಿಕವಾಗಿ ಪ್ರೌಢರಾಗಿ, ಲೈಂಗಿಕವಾಗಿ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಗಳಿಸುವುದು ಎಂದು ಅರ್ಥ. 
12 ರಿಂದ 18ರ ನಡುವಿನ ತಾರುಣ್ಯ ಅಥವಾ ಹದಿಹರೆಯದ ವಯೋಮಾನ ಎನ್ನುವುದು ಜೀವನದ ಅತ್ಯಂತ ಸವಾಲಿನ ಕಾಲಾವಧಿ ಎಂದೇ ಹೇಳಬಹುದು. ಹರೆಯಕ್ಕೆ ಬರುವ ವಯಸ್ಸಿನ ಮೇಲೆ ವಂಶವಾಹಿ ಮತ್ತು ಪಾರಿಸರಿಕ ಕಾರಣಗಳೆರಡೂ ಪ್ರಭಾವ ಬೀರುತ್ತವೆ. 
ಆಡು ಮಾತಿನಲ್ಲಿ ಪ್ರೌಢಾವಸ್ಥೆಯನ್ನು ಮೈನರೆಯುವುದು ಎಂದೂ ಕೂಡ ಕರೆಯುವುದುಂಟು. ಹೈಪೋಥಾಲಮಸ್, ಪಿಟ್ಯುಟರಿ ಗ್ರಂಥಿ, ಆಡ್ರಿನಲಾ, ಗೊನಾಡ್ಸ್ ಎಂಬ ಹರೆಯಕ್ಕೆ ಬರುವುದಕ್ಕೆ ಕಾರಣವಾಗುವ ಗ್ರಂಥಿಗಳ ಮಾಗುವಿಕೆಯ ಜೊತೆಗೆ ಸಂಬಂಧ ಹೊಂದಿದ್ದು, ಹರೆಯಕ್ಕೆ ಬರುವುದು ಹಲವಾರು ದೈಹಿಕ ಬದಲಾವಣೆಗಳ ಸರಣಿಯನ್ನೂ ಒಳಗೊಂಡಿಗೆ. ಈ ಅವಧಿಯಲ್ಲಿ ಹೆಣ್ಣು ಮಕ್ಕಳ ಮನೋಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತವೆ. 
ಹರೆಯಕ್ಕೆ ಬರುವ ಪ್ರಕ್ರಿಯೆಯು ವ್ಯಕ್ತಿಗತವಾಗಿ ವಿಭಿನ್ನ ವಯಸ್ಸಿನಲ್ಲಿ ಸಂಭವಿಸುತ್ತದೆ. ಬಾಲಕಿಯರಲ್ಲಿ ಸಾಮಾನ್ಯವಾಗಿ ಹರೆಯಕ್ಕೆ ಬರುವುದು 12 ರಿಂದ 16ವರ್ಷ ವಯೋಮಾನಗಳ ನಡುವೆ ಸಂಭವಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಬಾಲಕಿಯರು ಈ ಹಿಂದೆ ದಾಖಲಾಗಿರುವುದಕ್ಕಿಂತ ಮುಂಚಿತವಾಗಿಯೇ ಹರೆಯಕ್ಕೆ ಬರುತ್ತಿದ್ದಾರೆ. ಈ ರೀತಿಯ ಪರಿವರ್ತನೆಗೆ ಪೌಷ್ಟಿಕಾಂಶ ಹಾಗೂ ಇತರೆ ಪಾರಿಸರಿಕ ಪ್ರಭಾವಗಳೂ ಕೂಡ ಕಾರಣವಾಗಿರುತ್ತವೆ. 
ಭಾರತೀಯ ಹೆಣ್ಣು ಮಕ್ಕಳು ಅವಧಿಗೂ ಮುನ್ನವೇ ಹರೆಯಕ್ಕೆ ಬರುತ್ತಿದ್ದು, ಇದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ಅರಿಯಲು ಫೆಡರೇಶನ್ ಆಫ್ ಒಬೆಸ್ಟೆಟ್ರಿಕ್ಸ್ ಆ್ಯಂಡ್ ಗೈನೊಕೊಲೊಜಿಸ್ಟ್ ಸೊಸೈಟಿ ಆಫ್ ಇಂಡಿಯಾ (ಎಫ್ಒಜಿಎಸ್ಐ) ನಾಲ್ಕು ವರ್ಷಗಳ ಹಿಂದೆ ಸಂಶೋಧನೆಯೊಂದನ್ನು ನಡೆಸಿದೆ. ನಗರದಲ್ಲಿರುವ ಶೇ.80ರಷ್ಟು ಹೆಣ್ಣು ಮಕ್ಕಳು ಹಿಂದಿನ ವರ್ಷಗಳಿಗಿಂತಲೂ ಮುಂಚಿತವಾಗಿ ಅಂದರೆ, 11ನೇ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆಗೆ ಬರುತ್ತಿದ್ದಾರೆಂಬುದು ತಿಳಿದುಬಂದಿದೆ. 
ಇತ್ತೀಚಿನ ದಿನಗಳಲ್ಲಿ ಮೂರು ಮಕ್ಕಳ ಪೈಕಿ ಒಂದು ಹೆಣ್ಣು ಮಗು ಅವಧಿಗೂ ಮುನ್ನವೇ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ, ಸಾಮಾನ್ಯವಾಗಿ ಹೆಣ್ಣುಮಕ್ಕಳು ಹರೆಯಕ್ಕೆ ಬರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ದೇಹದಲ್ಲಿರುವ ಹೈಪೋಥಲಮಸ್ ಸ್ರವಿಸುವ ಒಂದು ಹಾರ್ಮೋನ್ ಪಿಟ್ಯುಟರಿ ಗ್ರಂಥಿಗೆ ಸಂಕೇತಗಳನ್ನು ನೀಡುತ್ತದೆ. ಇದಕ್ಕೆ ಪ್ರತಿಯಾಗಿ ಪಿಟ್ಯುಟರಿ ಗ್ರಂಥಿಯು ಸ್ರವಿಸುವ ಎರಡು ಹಾರ್ಮೋನುಗಳು ಲೈಂಗಿಕ ಅಭಿವೃದ್ಧಿಗೆ ಕಾರಣವಾಗುತ್ತವೆ. ಹರೆಯಕ್ಕೆ ಬರುವ ಅವಧಿಯ ನಿರ್ಧಾರದಲ್ಲಿ ವಂಶವಾಹಿ ಅಂಶಗಳೂ ಕೂಡ ಒಳಗೊಂಡಿರುತ್ತವೆ. ಹರಯಕ್ಕೆ ಬರುವ ಸಮಯವನ್ನು ಅನೇಕ ಬಾರಿ ಕೌಟುಂಬಿಕ ಲಕ್ಷಣವಾಗಿ ವ್ಯಾಖ್ಯಾನಿಸುವುದೂ ಉಂಟು. 
ಹದಿಹರೆಯ ಎನ್ನುವುದು ಏಕಾಂತದ ಅಪೇಕ್ಷೆ, ಸ್ವಂತಿಕೆಯ ಸಂಘರ್ಷ, ಸಹವರ್ತಿಗಳ ಆಕರ್ಷಣೆ ಮತ್ತು ಕೆಲವು ಬಾರಿ ಕುಟುಂಬ ಸದಸ್ಯರ ಜೊತೆಗಿನ ಘರ್ಷಣೆಗಳ ಗುಣಲಕ್ಷಣಗಳನ್ನು ಒಳಗೊಂಡಿರುವ ಸಂಕೀರ್ಣ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ಸ್ವಂತಿಕೆಯ ಬಗ್ಗೆ ಗೊಂದಲವನ್ನು ಹೊಂದಿರುತ್ತಾರೆ. ಪ್ರಶ್ನೆ ಮಾಡದೆಯೇ ಯಾವುದನ್ನು ಒಪ್ಪಿಕೊಳ್ಳುವುದಿಲ್ಲ. ಏನನ್ನಾದರೂ ಮಾಡಿ ಇತರರ ಗಮನವನ್ನು ತಮ್ಮೆಡೆಗೆ ಸೆಳೆಯಲು ಯತ್ನಿಸುತ್ತಿರುತ್ತಾರೆ. ಭಾವನೆಗಳ ಮೇಲೆ ಹತೋಟಿ ಇರುವುದಿಲ್ಲ. ಸ್ವಯಂ ನಿಯಂತ್ರಣದಲ್ಲಿ ಎಡವುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸಬೇಕು. ಅಲ್ಲದೆ, ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಮಕ್ಕಳಿಗೆ ಪ್ರತೀ ದಿನ ಬೆಳಿಗ್ಗೆ ವ್ಯಾಯಾಮ ಮಾಡುವಂತೆ ತಿಳಿಸುವುದು, ಹೊರಗಿನ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡುವುದು, ಆರೋಗ್ಯಕರ ಡಯೆಟ್ ಮಾಡುವುದು ಉತ್ತಮವಾಗಿರುತ್ತದೆ ಎಂದು ವೈದ್ಯರು ಸಲಹೆಗಳನ್ನು ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT