ಸಾಂದರ್ಭಿಕ ಚಿತ್ರ 
ಆರೋಗ್ಯ

ಯಾವಾಗಲೂ ಹಸಿವಾಗುವುದೇ? ನಿಮ್ಮ ಮೆದುಳು ಕಾರಣವಿರಬಹುದು!

ನಿಮಗೆ ಪದೇ ಪದೇ ತಿನ್ನಬೇಕೆಂದು ಅನಿಸುತ್ತಿರುತ್ತದೆಯೇ? ಯಾವಾಗಲೂ ಹಸಿವು, ಹಸಿವು ಎಂದುಕೊಂಡಿರುತ್ತೀರಾ?

ನಿಮಗೆ ಪದೇ ಪದೇ ತಿನ್ನಬೇಕೆಂದು ಅನಿಸುತ್ತಿರುತ್ತದೆಯೇ? ಯಾವಾಗಲೂ ಹಸಿವು, ಹಸಿವು ಎಂದುಕೊಂಡಿರುತ್ತೀರಾ? ಹಾಗಾದರೆ ಅದಕ್ಕೆ ನಿಮ್ಮ ಮೆದುಳು ಕಾರಣವಿರಬಹುದು.

ಮೆದುಳಿನ ಜೋಡಣೆ ವ್ಯವಸ್ಥೆ ಎರಡು ಕೆಲಸ ಮಾಡುತ್ತದೆ, ಒಂದು ತ್ಯಾಜ್ಯವನ್ನು ಸುರಿಸುವುದು ಮತ್ತು ಹಸಿವಿನ ಅಣುವಿಗೆ ದಾರಿ ತೋರಿಸುವುದು. ಅದು ನೀವು ಯಾವಾಗ ಹೊಟ್ಟೆಗೆ ತಿನ್ನಬೇಕು ಎಂದು ಹೇಳುತ್ತದೆ.

ಮೆದುಳಿನ ಕೋಶ ಮೂಲಕ ಮನುಷ್ಯನಿಗೆ ಸಂವಹನೆಯ ಸೂಚನೆ ಸಿಗುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಮೆದುಳಿನಲ್ಲಿ ಮತ್ತೊಂದು ಸಂವಹನಕ್ಕೆ ಮಾರ್ಗವಿದ್ದು ಸೂಚನೆಯನ್ನು ರೆಬ್ರೊಸ್ಪೈನಲ್ ದ್ರವಕ್ಕೆ ಕಳುಹಿಸುತ್ತದೆ.

ಈ ಕುರಿತು ಯುಎಸ್ ಸಿ ಅಧ್ಯಯನ ನಡೆಸಿದೆ. ಸಂಶೋಧಕ ಎಮಿಲಿ ನೋಬಲ್ ಈ ಕುರಿತು ಅಧ್ಯಯನ ನಡೆಸಿದ್ದಾರೆ. ಕೋಶದಿಂದ ಕೋಶಕ್ಕೆ ಇರುವ ಸಂವಹನದಲ್ಲಿ ನರಕೋಶಗಳು ಪ್ರತ್ಯೇಕ ನ್ಯೂರಾನ್ ಗಳು ಅಥವಾ ಇತರ ಜೀವಕೋಶಗಳಿಗೆ ಸಂದೇಶಗಳು ಹಾದುಹೋಗುತ್ತವೆ.

ಕೋಶದಿಂದ ಕೋಶಕ್ಕೆ ಅಥವಾ ರಕ್ತನಾಳಗಳ ಮೂಲಕ ಸಂದೇಶಗಳು ಪ್ರಸಾರವಾಗುತ್ತವೆ ಎಂದು ವಿಜ್ಞಾನಿಗಳು ಹೇಳಿಕೊಂಡು ಬಂದಿದ್ದಾರೆ. ಮಿದುಳು ಬಿಡುಗಡೆ ಮಾಡುವ ಮತ್ತು ಅಣುಗಳನ್ನು ಹರಡುವ ಮೂಲಕ ಕೆಲವು ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಮತ್ತು ಈ ಸಂದರ್ಭದಲ್ಲಿ, ಸೆರೆಬ್ರೊಸ್ಪೈನಲ್ ದ್ರವದ ಮೂಲಕ ನ್ಯೂರೋಪೆಪ್ಟೈಡ್ ನ್ನು ಮೆದುಳು ನಿಯಂತ್ರಿಸುತ್ತದೆ.

ಹಸಿವನ್ನು ನಿಯಂತ್ರಿಸುವ ಮೆಲನಿನ್-ಕಾನ್ಸಂಟ್ರೇಟಿಂಗ್ ಹಾರ್ಮೋನ್(ಎಂಸಿಎಚ್)ನ್ನು ಕೇಂದ್ರೀಕರಿಸಿ ಔಷಧಿ ಪ್ರವರ್ದಕರು ಔಷಧಿ ತಯಾರಿಕೆಯಲ್ಲಿ ಹಿತಾಸಕ್ತಿ ಹೊಂದಿದ್ದು ಈ ಮೂಲಕ ಬೊಜ್ಜು ಮತ್ತು ಇತರ ತೂಕ ಸಂಬಂಧಿ ಆರೋಗ್ಯ ಸಮಸ್ಯೆಗಳ ವಿಷಯಗಳ ಕುರಿತು ಯೋಚಿಸುತ್ತಾರೆ.

ಸೆರೆಬ್ರೊಸ್ಪೈನಲ್ ದ್ರವದಲ್ಲಿ ಮೂರು ಮುಖ್ಯ ನಿಯೋಜನೆಗಳಿರುತ್ತವೆ. ಮೊದಲನೆಯದ್ದು ಗ್ರೀಕ್ ಟೈಟಾನ್ ಅಟ್ಲಾಸ್ ನಂತರೆ ಮೆದುಳಿನಲ್ಲಿ ತೇಲುತ್ತಿರುತ್ತದೆ. ಇದು ಮೆದುಳಿಗೆ ಬೆಂಬಲವಾಗಿ ನಿಲ್ಲುತ್ತದೆ, ಎರಡನೆಯದ್ದು ಇದು ತಲೆದಿಂಬಿನಂತೆ ಕೆಲಸ ಮಾಡುತ್ತದೆ, ಮೂರನೆಯದ್ದು ಮೆದುಳಿನ ಒಳಗಿನ ವ್ಯವಸ್ಥೆ ಬೇಡವಾದ ವಸ್ತುಗಳನ್ನು ಹೊರಹಾಕುತ್ತದೆ.

ನರವಿಜ್ಞಾನ ತಂತ್ರಜ್ಞಾನಗಳು ಹೆಚ್ಚಿದಂತೆ ವಿಜ್ಞಾನಿಗಳು ಮೆದುಳಿನ ಕಾರ್ಯದಲ್ಲಿ ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುತ್ತಿದ್ದು ಒಳ ವ್ಯವಸ್ಥೆಗಳು ಮೆದುಳಿನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಮುಖ್ಯವಾಗಿ ಒತ್ತಡದಲ್ಲಿ, ಶಕ್ತಿಯ ಸಮತೋಲನೆಗೆ ಮತ್ತು ಮರು ಉತ್ಪಾದನೆಗೆ ಮುಖ್ಯವಾಗುತ್ತದೆ.

ಈ ಹಿಂದೆ ವಿಜ್ಞಾನಿಗಳು ಸೆರೆಬ್ರೊಸ್ಪೈನಲ್ ದ್ರವ ಚಯಾಪಚಯದ ನಿಷ್ಟ್ರಯೋಜಕ ಸ್ಥಳ ಎಂದು ಭಾವಿಸುತ್ತಿದ್ದರು. ಆದರೆ ಈ ದ್ರವ ಮೆದುಳಿನ ಸಂವಹನ ಕ್ರಿಯೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿದಿದ್ದಾರೆ ಎನ್ನುತ್ತಾರೆ ಸಂಶೋಧಕ ಸ್ಕಾಟ್ ಕನೊಸ್ಕಿ.

ಈ ಅಧ್ಯಯನಕ್ಕೆ ಸಂಶೋಧಕರು ಎಂಸಿಎಚ್ ಮೇಲೆ ಗಮನ ಹರಿಸಿದ್ದಾರೆ. ಈ ನ್ಯೂರೋಪೆಪ್ಟೈಡ್ ನ್ಯೂರಾನ್ಸ್ ನಿಂದ ಉತ್ಪತ್ತಿಯಾಗಿದ್ದು, ಅದು ಮೆದುಳಿಗೆ ಹಸಿವಿನ ಬಗ್ಗೆ ಸಂದೇಶ ಕಳುಹಿಸುವ ಹೈಪೊಥಲಮಸ್ ನಿಂದ ಉತ್ಪತ್ತಿಯಾಗುತ್ತದೆ. ಈ ಹೈಪೊಥಲಮಸ್ ಮೆದುಳಿನ ಮೆದುಳಿನ ಮೂಲದಲ್ಲಿ ಪಿಟ್ಯುಟರಿ ಗ್ರಂಥಿಯ ಮೇಲ್ಭಾಗದಲ್ಲಿ ಇರುತ್ತದೆ.
ಪ್ರೊಟೀನ್ ಅಣುವಾಗಿರುವ ಎಂಸಿಎಚ್ ಹಸಿವನ್ನು ಪ್ರಚೋದಿಸುತ್ತದೆ. ಇದು ದೇಹದಲ್ಲಿ ಶಕ್ತಿಯ ಬಳಕೆಯನ್ನು ಕೂಡ ನಿಧಾನ ಮಾಡುತ್ತದೆ.

ಸಂಶೋಧಕರು ಇಲಿಗಳ ಮೇಲೆ ಅಧ್ಯಯನ ನಡೆಸಿದ್ದರು. ನಂತರ ಮನುಷ್ಯನ ಮೆದುಳಿನ ಸೆರೆಬ್ರೊಸ್ಪೈನಲ್ ದ್ರವದಲ್ಲಿಯೂ ಪತ್ತೆಯಾಯಿತು. ಎಂಸಿಎಚ್ ನ್ನು ಸೆರೆಬ್ರೊಸ್ಪೈನಲ್ ದ್ರವಕ್ಕೆ ಕಳುಹಿಸಿದಾಗ ಪ್ರಾಣಿಗಳು ತಿನ್ನಲು ಆರಂಭಿಸಿದವು ಎನ್ನುತ್ತಾರೆ ಕನೊಸ್ಕಿ. ಅಣುವಿನ ಮಟ್ಟವನ್ನು ಕಡಿಮೆ ಮಾಡಿದಾಗ ವಿರುದ್ಧ ಪರಿಣಾಮ ಕಂಡು ಪ್ರಾಣಿಗಳು ಕಡಿಮೆ ತಿನ್ನಲು ಪ್ರಾರಂಭಿಸಿದವು.

ಈ ಅಧ್ಯಯನದ ಆಧಾರದ ಮೇಲೆ ಸಂಶೋಧಕರು ಗಂಟೆ ಮತ್ತು ದೈನಂದಿನ ಊಟ ದಿನಚರಿಯಿಂದ ಹಸಿವು ಪ್ರಭಾವಿತಗೊಳ್ಳುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಸೆಲ್ ಮೆಟಬೊಲಿಸಮ್ ಎಂಬ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT