ಆರೋಗ್ಯ

ಅನಾರೋಗ್ಯಕರ ಆಹಾರಗಳಲ್ಲೂ ಆರೋಗ್ಯಯುತವಾದ ಪ್ರಯೋಜನಗಳಿವೆ!

Srinivas Rao BV
ಅನಾರೋಗ್ಯಕರ ಆಹಾರಗಳಲ್ಲೂ ಆರೋಗ್ಯಯುತವಾದ ಪ್ರಯೋಜನಗಳಿವೆಯೇ ಎಂದು ಶೀರ್ಷಿಕೆ ನೋಡಿ ಗೊಂದಲಕ್ಕೀಡಾಗಬೇಡಿ. ನಿಮ್ಮ ಅಚ್ಚರಿಯ ಉದ್ಘಾರಕ್ಕೆ ಹೌದು ಎಂಬುದೇ ಉತ್ತರ. 
ಒತ್ತಡದ ಜೀವನಶೈಲಿಯಲ್ಲಿ ಸಿಲುಕಿ ಸಮಯದ ಜೊತೆಗೆ ಹೆಜ್ಜೆಹಾಕಬೇಕಾದ ಅನಿವಾರ್ಯತೆಯಿಂದ ಬಹುತೇಕ ಜನರು ಅನಾರೋಗ್ಯಕರ ಆಹಾರಗಳನ್ನೇ ಸೇವಿಸುತ್ತಿರುತ್ತಾರೆ. ಆದರೆ ಈ ರೀತಿಯಾದ ಅನಾರೋಗ್ಯಕರ ಆಹಾರಗಳನ್ನು ಮಿತವಾಗಿ ಸೇವಿಸುವುದರಿಂದ ಆರೋಗ್ಯಕರ ಫಲಿತಾಂಶಗಳನ್ನು ಪಡೆಯಬಹುದಾಗಿದೆ. 
ಆ ಅನಾರೋಗ್ಯಕರ ಆಹಾರಗಳು ಯಾವುವು ಅದರಿಂದ ಆರೋಗ್ಯ ಹೇಗೆ ಪಡೆಯಬಹುದು ಇಲ್ಲಿದೆ ಮಾಹಿತಿ 
ಆಲೂಗಡ್ಡೆ: ಗ್ಲೈಸೆಮಿಕ್ ಸೂಚ್ಯಂಕ ಇರುವುದರಿಂದ ಆಲೂಗಡ್ಡೆ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಆದರೆ ಇದರಲ್ಲಿರುವ ಪೊಟ್ಯಾಸಿಯಮ್ ಅಂಶ ಸ್ನಾಯುಗಳಿಗೆ ಅವಶ್ಯಕವಾಗಿದ್ದು ವಿಟಮಿನ್ ಸಿ ಯಥೇಚ್ಛವಾಗಿ ದೊರೆಯುತ್ತವೆ. 
ಬೆಣ್ಣೆ ಮತ್ತು ಸ್ಯಾಚುರೇಟೆಡ್ ಫ್ಯಾಟ್: ಅತಿ ಹೆಚ್ಚು ಕೊಬ್ಬಿನ ಅಂಶ ಇರುವುದರಿಂದ ಇವುಗಳು ಆರೋಗ್ಯಕ್ಕೆ ಹಾನಿಕಾರಕ ಆದರೆ ವಿಟಮಿನ್ ಎ, ಡಿ, ಇ, ಕೆ ಗಳೂ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಉತ್ತಮ ರೋಗ ನಿರೋಧಕ ಶಕ್ತಿ ನೀಡಬಲ್ಲವು 
ಚಾಕೊಲೇಟ್ಗಳು: ಹೆಚ್ಚು ಸಕ್ಕರೆ ಅಂಶವಿರುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಆದರೆ, ಫ್ಲವೊನಾಯ್ಡ್ ಅಂಶ ಹೃದಯಕ್ಕೆ ಒಳ್ಳೆಯದಾಗಿದೆ, 
ಕೆಚಪ್ಗಳು ಮತ್ತು ಸಲಾಡ್ ಡ್ರೆಸ್ಸಿಂಗ್: ಕೃತಕ ಬಣ್ಣ ಹಾಗೂ ಸಂರಕ್ಷಕಗಳು ಇರುವ ಕಾರಣ ಇದನ್ನು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ.  ಆದರೆ ಇವುಗಳನ್ನು ಮಿತವಾಗಿ ಸೇವಿಸಿದರೆ ಉತ್ಕರ್ಷಣ ನಿರೋಧ (antioxidant) ಆಗಿ ಕಾರ್ಯನಿರ್ವಹಿಸಬಲ್ಲವು 
ಬೀರ್: ಕ್ಯಾಲೊರಿಗಳ ದೃಷ್ಟಿಯಿಂದ ಆರೋಗ್ಯಕ್ಕೆ ಹಾನಿಕಾರಕ  ಆದರೆ ಮೂಳೆ ಖನಿಜ ಸಾಂದ್ರತೆ ಉತ್ತಮಗೊಳಿಸುವುದಕ್ಕೆ ಮಿತವಾದ ಬೀರ್ ಸೇವನೆ ಸಹಕಾರಿಯಾಗಲಿದೆ. ಅಂದರೆ ಒಂದು ಬಾಟಲ್ ಬೀರ್ ಕುಡಿದರೆ ಕಿಡ್ನಿ ಸ್ಟೋನ್ ಉಂಟಾಗುವ ಸಾಧ್ಯತೆ ಶೇ.40 ರಷ್ಟು ಕಡಿಮೆಯಾಗಲಿದೆ. 
ಬರ್ಗರ್ ಹಾಗೂ ಪಿಜ್ಜಾ: ಹೆಚ್ಚು ಕ್ಯಾಲೊರಿಗಳು ಹಾಗೂ ಕಾರ್ಬೋಹೈಡ್ರೇಟ್ಗಳ ಕಾರಣದಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದರೆ ಇವುಗಳನ್ನು ಮಿಲೆಟ್ ಗಳ ಜೊತೆ ಸೇವಿಸಿದರೆ ಪೌಷ್ಟಿಕಾಂಶದ ಮೌಲ್ಯವು ಹೆಚ್ಚಾಗುತ್ತದೆ. 
ಅನ್ನ: ಅನ್ನ ಹೆಚ್ಚು ಸೇವಿಸುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ಆದರೆ ಗ್ಲೈಕೋಜೆನ್ ಪ್ರಮಾಣ ಹೆಚ್ಚಾಗಲು ಹಾಗೂ ಸ್ನಾಯುವಿನ ಬೆಳವಣಿಗೆಗೆ ಸಹಕಾರಿಯಾಗಿದೆ. 
SCROLL FOR NEXT