ಆರೋಗ್ಯ

ವೀರ್ಯದ ಗುಣಮಟ್ಟ ಸುಧಾರಿಸಬೇಕಾ? ಹಾಗಾದ್ರೆ ಪ್ರತಿ ದಿನ ಹೀಗೆ ಮಾಡಿ!

Srinivas Rao BV
ಪುರುಷರಲ್ಲಿ ಕಾಣಿಸಿಕೊಳ್ಳುವ ಬಂಜೆತನಕ್ಕೆ ವೀರ್ಯದ ಗುಣಮಟ್ಟ ಕುಸಿಯುತ್ತಿರುವುದು ಗಮನಾರ್ಹವಾದ ಅಂಶ. ಇತ್ತೀಚಿನ ಒತ್ತಡದ ಜೀವನಶೈಲಿಯಲ್ಲಿ ಪುರುಷರ ವೀರ್ಯದ ಗುಣಮಟ್ಟ ಕುಸಿಯುತ್ತಿದೆ. ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ವೀರ್ಯದ ಗುಣಮಟ್ಟ ಸುಧಾರಣೆ ಮಾಡಿಕೊಳ್ಳಬಹುದು ಎನ್ನುತ್ತಿದೆ ಏಮ್ಸ್ ನ  ವರದಿ. 
ಏಮ್ಸ್ ಅಧ್ಯಯನ ವರದಿಯ ಪ್ರಕಾರ ಪ್ರತಿ ನಿತ್ಯ ಯೋಗಾಸನ ಅಭ್ಯಾಸ ಮಾಡುವುದರಿಂದ ವೀರ್ಯದ ಗುಣಮಟ್ಟ ಸುಧಾರಣೆಯಾಗುತ್ತದೆ. ಈ ಕುರಿತ ಅಧ್ಯಯನ ವರದಿ ನೇಚರ್ ರಿವ್ಯೂ ಯೂರೋಲಜಿಯಲ್ಲಿ ವಿಸ್ತೃತವಾಗಿ ಪ್ರಕಟವಾಗಿದೆ. 
ಡಿಎನ್ ಎ ಹಾನಿಗೀಡಾದಗ ವೀರ್ಯಾಣುವಿನ ಗುಣಮಟ್ಟವೂ ಕುಸಿಯುತ್ತದೆ. ಆರೋಗ್ಯಕರ ಮಗುವಿನ ಜನನಕ್ಕೆ ಆನುವಂಶಿಕ ಅಂಶಗಳ ಗುಣಮಟ್ಟವೂ ಕಾರಣವಾಗಲಿದೆ ಎಂದು ಏಮ್ಸ್ ನ     ಸಂತಾನೋತ್ಪತ್ತಿ ಮತ್ತು ಜೆನೆಟಿಕ್ಸ್ ಪ್ರಯೋಗಾಲಯದ ಪ್ರೊಫೆಸರ್ ಇನ್ ಚಾರ್ಜ್ ಡಾ.ರಿಮಾ ದಾದಾ ಹೇಳಿದ್ದಾರೆ. 
ಪುರುಷರಲ್ಲಿ ಬಂಜೆತನ ಕಾಣಿಸಿಕೊಳ್ಳುವುದಕ್ಕೆ ವೀರ್ಯಾಣುವಿನಲ್ಲಿ ಡಿಎನ್ಎ ಹಾನಿಗೊಳಗಾಗುವುದೂ ಸಹ ಕಾರಣವಾಗಿದೆ. ಡಿಎನ್ಎ ಹಾನಿಗೊಳಗಾಗುವುದರಿಂದ ಹುಟ್ಟಲಿರುವ ಮಗುವಿನ ಆರೋಗ್ಯದಲ್ಲಿಯೂ ಬದಲಾವಣೆಯಾಗಲಿದೆ ಎನ್ನುತ್ತಾರೆ ವೈದ್ಯರು   
ಅತಿಯಾದ ಒತ್ತಡದಿಂದ ವೀರ್ಯಾಣುವಿನ ಡಿಎನ್ಎ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ  ವೀರ್ಯದ ಗುಣಮಟ್ಟವನ್ನು ಸುಧಾರಣೆ ಮಾಡಬಹುದು ಎಂದು ಏಮ್ಸ್ ಅಧ್ಯಯನ ವರದಿ ಹೇಳಿದೆ. 
SCROLL FOR NEXT