ಆರೋಗ್ಯ

ಸಸ್ಯಾಹಾರ ಸೇವನೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ: ಅಧ್ಯಯನ

Sumana Upadhyaya

ವಾಷಿಂಗ್ಟನ್: ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಸಸ್ಯಾಹಾರ ಸೇವನೆಯಿಂದ ಮತ್ತು ಸಸ್ಯಾಹಾರಿಗಳಿಗೆ ತಮ್ಮ ದೇಹ ತೂಕವನ್ನು ಕಡಿಮೆ ಮಾಡಿ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಿಕೊಳ್ಳಬಹುದು ಎಂದು ಅಧ್ಯಯನ ಹೇಳಿದೆ.

ಇದಕ್ಕಾಗಿ 9 ಪ್ರಯೋಗಗಳನ್ನು ಸಂಶೋಧಕರು ನಡೆಸಿದ್ದು ಮಧುಮೇಹ ರೋಗಿಗಳಲ್ಲಿ ಸಸ್ಯಾಹಾರ ಸೇವನೆಯ ಪರಿಣಾಮಗಳನ್ನು ಕಂಡುಹಿಡಿದಿದ್ದಾರೆ.

ಕ್ಲಿನಿಕಲ್ ನ್ಯೂಟ್ರಿಷನ್ ಎಂಬ ಪತ್ರಿಕೆಯಲ್ಲಿ ಸಂಶೋಧನೆ ಪ್ರಕಟವಾಗಿದೆ. ಸಸ್ಯಾಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಅಂಶವನ್ನು ನಿಯಂತ್ರಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ ಇತರ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಬಹುದು. ಮಾಂಸಾಹಾರ ಸೇವಿಸುವವರಿಗೆ ಹೋಲಿಸಿದರೆ ಸಸ್ಯಾಹಾರಿಗಳು ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಂದ ದೂರವುಳಿಯಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮಧುಮೇಹದಿಂದ ಬಳಲುತ್ತಿರುವವರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಸಕ್ಕರೆ ಕಾಯಿಲೆ ಇಲ್ಲದವರಲ್ಲಿ ಹೃದ್ರೋಗ ಸಂಬಂಧಿ ತೊಂದರೆಗಳು ಕಡಿಮೆ.

ಮಧುಮೇಹ ಮತ್ತು ಹೃದ್ರೋಗಗಳ ನಡುವಿನ ಸಂಬಂಧ ಹೆಚ್ಚಾಗಿರುತ್ತದೆ. ಎರಡನೇ ವಿಧದ ಮಧುಮೇಹದಿಂದ ಬಳಲುತ್ತಿರುವ ಶೇಕಡಾ 60ರಿಂದ 70ರಷ್ಟು ಮಂದಿ ಹೃದ್ರೋಗ ಸಮಸ್ಯೆಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಅಮೆರಿಕ ಮೂಲದ ಪ್ರಾಯೋಗಿಕ ಸಂಶೋಧನೆ ನಿರ್ದೇಶಕ ಹನಾ ಕಹ್ಲೊವಾ.

ಮಧುಮೇಹ ಮತ್ತು ಹೃದ್ರೋಗಿಗಳು ಮಾಂಸಾಹಾರ ಸೇವನೆ ಕಡಿಮೆ ಮಾಡಿ ಅಧಿಕ ಹಣ್ಣು, ತರಕಾರಿ, ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಅವುಗಳಲ್ಲಿ ಕೊಬ್ಬಿನ ಅಂಶ ಕಡಿಮೆಯಿದ್ದು ಫೈಟೊಕೆಮಿಕಲ್ಸ್ ಮತ್ತು ನಾರಿನಂಶ ಹೆಚ್ಚಿರುವುದರಿಂದ ಗ್ಲೈಸೆಮಿಕ್ ನಿಯಂತ್ರಣದಲ್ಲಿದ್ದು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಸಂಶೋಧಕರು ತೀರ್ಮಾನಕ್ಕೆ ಬಂದಿದ್ದಾರೆ.

SCROLL FOR NEXT