ಆರೋಗ್ಯ

ಗರ್ಭಿಣಿಯರು ವಾಯುಮಾಲಿನ್ಯ ಎದುರಿಸಿದರೆ ಮಕ್ಕಳಿಗೆ ರಕ್ತದೊತ್ತಡದ ಅಪಾಯ ಹೆಚ್ಚು!

Srinivas Rao BV
ನ್ಯೂಯಾರ್ಕ್: ಗರ್ಭದಲ್ಲಿರುವಾಗಲೇ ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾದರೆ ಮಕ್ಕಳಲ್ಲಿ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ತೈಲಗಳನ್ನು ಉರಿಸಿದಾಗ ವಾತಾವರಣ ಸೇರುವ ಮಲಿನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಗರ್ಭದಲ್ಲಿರುವ ಮಕ್ಕಳಿಗೂ ಸಹ ವಾಯುಮಾಲಿನ್ಯದ ಸಮಸ್ಯೆ ಕಾಡುತ್ತದೆ. ಅಂತಹ ಮಕ್ಕಳು ತಮ್ಮ ಬಾಲ್ಯದಲ್ಲಿ ರಕ್ತದೊತ್ತಡವನ್ನು ಎದುರಿಸುವ ಅಪಾಯವನ್ನು ಹೊಂದಿರುತ್ತಾರೆ ಎಂದು ಅಮೆರಿಕದ ಮೇರಿಲ್ಯಾಂಡ್ ನ ಬ್ಲೂಮ್ ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಹೇಳಿದೆ.
ತಾಯಿ ಗರ್ಭಧಾರಣೆ ಮಾಡಿರುವಾಗ ವಾಯುಮಾಲಿನ್ಯಕ್ಕೆ ಹೆಚ್ಚು ತೆರೆದುಕೊಂಡರೆ ಅದು ಮಕ್ಕಳ ಬಾಲ್ಯದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ,  ಈ ಅಧ್ಯಯನ ವರದಿಗಾಗಿ 1,293 ತಾಯಂದಿರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, 3-9 ವರ್ಷಗಳವರೆಗೆ ಪ್ರತಿ ಮಗುವಿನ ದೈಹಿಕ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅಳೆಯಲಾಗಿತ್ತು. 
ಗರ್ಭಿಣಿಯರಾಗಿದ್ದ ವೇಳೆ ವಾಯುಮಾಲಿನ್ಯ ಎದುರಿಸಿದ್ದ ಮಹಿಳೆಯರ ಮಕ್ಕಳಲ್ಲಿ ರಕ್ತದೊತ್ತಡ ಬರುವ ಅಪಯ ಶೇ.10 ರಷ್ಟು ಹೆಚ್ಚಿರುವುದು ಅಧ್ಯಯನದ ವೇಳೆ ಕಂಡುಬಂದಿದೆ.
SCROLL FOR NEXT