ಆರೋಗ್ಯ

ಎಚ್ಚರ! ಧೂಮಪಾನವು ನಿಮ್ಮ ಕಾಲಿನ ಸ್ನಾಯುಗಳಿಗೆ ಹಾನಿ ಮಾಡಬಹುದು

Srinivas Rao BV
ಧೂಮಪಾನದಿಂದ ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿಯುಂಟಾಗಲಿದೆ ಎಂದು ನೀವು ನಂಬಿದ್ದರೆ, ಅದು ತಪ್ಪಿ, ಶ್ವಾಸಕೋಶದೊಂದಿಗೆ ಕಾಲಿನ ಸ್ನಾಯುಗಳಿಗೂ ಧೂಮಪಾನ ಹಾನಿಕಾರಕ ಎಂಬುದು ಸರಿಯಾಗಿ ನೆನಪಿಡಬೇಕಾದ ವಿಷಯ. 
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿರುವ ಅಧ್ಯಯನ ವರದಿಯ ಪ್ರಕಾರ,  ಧೂಮಪಾನ ರಕ್ತನಾಳಗಳ ಕಾರ್ಯನಿರ್ವಹಣೆ ಕಡಿಮೆ ಮಾಡುವ ಮೂಲಕ ಕಾಲಿನ ಸ್ನಾಯುಗಳಿಗೆ ಹಾನಿ ಉಂಟುಮಾಡಲಿದೆ, ಧೂಮಪಾನ ಕಾಲಿನ ಸ್ನಾಯುಗಳಿಗೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುತ್ತದೆ. 
ಧೂಮಪಾನ ಮಾಡುವುದರಿಂದ ದೇಹದಲ್ಲಿರುವ ಪ್ರಮುಖ ಸ್ನಾಯುಗಳು ಹಾನಿಗೀಡಾಗುತ್ತವೆ. ಎಂದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಲೀಡ್ ಆಥರ್ ಸ್ಯಾನ್ ಡೆಗಿಯೋ ಹೇಳಿದ್ದಾರೆ. ಇಲಿ ಮೇಲೆ 8 ವಾರಗಳ ಕಾಲ ಧೂಮಪಾನದ ಪ್ರಯೋಗ ಮಾಡಿದ್ದು, ರಕ್ತನಾಳಗಳ ಕಾರ್ಯನಿರ್ವಹಣೆ ಕುಗ್ಗಿ ಸ್ನಾಯುಗಳಿಗೆ ಹಾನಿಯುಂಟಾಗಿರುವುದು ಕಂಡುಬಂದಿದೆ. 
ಧೂಮಪಾನದಿಂದ ಸಿಒಪಿಡಿ ಸೇರಿದಂತೆ ಹಲವು ರೀತಿಯ ಶ್ವಾಸಕೋಶದ ಸಮಸ್ಯೆಯ ಅಪಾಯವಿದ್ದು, ಸಿಗರೇಟ್ ನಲ್ಲಿರುವ 4,000 ಕೆಮಿಕಲ್ ಗಳ ಪೈಕಿ ಸ್ನಾಯುಗಳಿಗೆ ಹಾನಿಯುಂಟುಮಾಡುವ ಕೆಮಿಕಲ್ ನ್ನು ಸಂಶೋಧಕರು ಇನ್ನಷ್ಟೇ ಪತ್ತೆ ಮಾಡಬೇಕಿದೆ. 
SCROLL FOR NEXT