ಆರೋಗ್ಯ

ಲೈಂಗಿಕ ಭಾವನೆಗಳನ್ನು ನಿಯಂತ್ರಿಸುವಾಗ ಹಲವರಲ್ಲಿರುತ್ತೆ ತೀವ್ರ ಆತಂಕ!

Srinivas Rao BV
ವಾಷಿಂಗ್ ಟನ್: ಲೈಂಗಿಕ ಭಾವನೆಗಳನ್ನು ನಿಯಂತ್ರಿಸುವಾಗ ಹಲವರಲ್ಲಿ ತೀವ್ರ ಆತಂಕ, ಯಾತನೆ ಕಂಡುಬರುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳುತ್ತಿದೆ.
ಶೇ.10 ರಷ್ಟು ಪುರುಷರು ಹಾಗೂ ಶೇ.7 ರಷ್ಟು ಮಹಿಳೆಯರು ತಮ್ಮ ಲೈಂಗಿಕ ಭಾವನೆಗಳನ್ನು ವ್ಯಕ್ತಪಡಿಸುವಾಗ  ಗಣನೀಯ ಪ್ರಮಾಣದಲ್ಲಿ ನೋವು ಹಾಗೂ ಆತಂಕವನ್ನು ಎದುರಿಸುತ್ತಾರೆ ಎಂಬುದು ಸಮೀಕ್ಷೆ ಮೂಲಕ ಬಹಿರಂಗವಾಗಿದೆ. 
ಕಂಪಲ್ಸಿವ್ ಲೈಂಗಿಕ ನಡವಳಿಕೆಯ ಅಸ್ವಸ್ಥತೆ ಎಂಬುದು ತೀವ್ರ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಲು ವಿಫಲವಾಗುವವರಲ್ಲಿ ಕಂಡುಬರುವ ಸಮಸ್ಯೆಯಾಗಿದ್ದು, ದುಃಖ ಮತ್ತು ಸಾಮಾಜಿಕ ದುರ್ಬಲತೆಗೂ ಕಾರಣವಾಗುತ್ತದೆ ಎಂದು ಅತಿಯಾದ ಲೈಂಗಿಕ ಆಸಕ್ತಿಯ ಬಗ್ಗೆ ಸಮೀಕ್ಷೆ ನಡೆಸಿರುವ ತಜ್ಞರು ಹೇಳಿದ್ದಾರೆ. 
2016 ರ ನವೆಂಬರ್ ನಲ್ಲಿ 18-50 ವರ್ಷದ 2,325 ಜನರನ್ನು ಸಂದರ್ಶಿಸಿಸಲಾಗಿದ್ದು, ಸಮೀಕ್ಷೆಯ ವರದಿಗಳನ್ನು ಜೆಎಎಂಎ ನೆಟ್ವರ್ಕ್ ಓಪನ್ ನಲ್ಲಿ ಪ್ರಕಟಿಸಲಾಗಿದೆ. 
SCROLL FOR NEXT