ಆರೋಗ್ಯ

ಐದು ತಿಂಗಳಿಗೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸುವ ಹೆಣ್ಣು ಮಕ್ಕಳಲ್ಲಿ ಸಂತಾನ ಶಕ್ತಿ ಹೆಚ್ಚು

Manjula VN
ವಾಷಿಂಗ್ಟನ್: 5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಸಂತಾನ ಶಕ್ತಿ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. 
ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಈ ಸಂಶೋಧನೆಯನ್ನು ನಡೆಸಿದ್ದು, ಸಂಶೋಧನೆಯ ವರದಿಯಲ್ಲಿ, ಇತರೆ ಸಾಮಾನ್ಯ ಮಹಿಳೆಯರಿಗೆ ಹೋಲಿಕೆ ಮಾಡಿದರೆ, 5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಹೆಚ್ಚೆಚ್ಚು ಮಕ್ಕಳಾಗುತ್ತವೆ ಎಂದು ತಿಳಿಸಿದ್ದಾರೆ. 
ಸ್ತನಪಾನ ಮಾಡಿಸುವ ಮಹಿಳೆಯರು ಎಷ್ಟು ಮಕ್ಕಳನ್ನು ಹೆರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಎಷ್ಟು ಸಮಯ ಮಹಿಳೆ ಸ್ತನಪಾನ ಮಾಡಿಸಬಲ್ಲಳು ಎಂಬುದನ್ನು ತಿಳಿದ ಬಳಿಕ ಆಕೆಯ ಸಂತಾನ ಶಕ್ತಿಯನ್ನು ತೀರ್ಮಾನಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. 
ಕಡಿಮೆ ಸಮಯ ಸ್ತನಪಾನ ಮಾಡಿಸುವ ಮಹಿಳೆಯಲ್ಲಿ ಸಂತಾನ ಶಕ್ತಿ ಕಡಿಮೆಯಾಗಿರುತ್ತದೆ. ಹೆಚ್ಚು ಕಾಲ ಸ್ತನಪಾನ ಮಾಡಿಸುವ ಮಹಿಳೆಯಲು ತಾವು ನಿರೀಕ್ಷಿಸಿದಷ್ಟು ಮಕ್ಕಳನ್ನು ಪಡೆಯಬಹುದಾಗಿದೆ. 
ಮೊದಲ ವರ್ಷದಲ್ಲಿ ಮಗುವಿಗೆ ಮಹಿಳೆಯರು ವರ್ಷಪೂರ್ತಿ ಸ್ತನಪಾನ ಮಾಡಿಸಬೇಕೆಂಬ ಮಾಹಿತಿಗಳನ್ನು ಮಹಿಳೆಯರು ಕೇಳಿಸುತ್ತಾರೆ. ಆದರೆ, ಇಂತಹ ಮಾರ್ಗದರ್ಶನಗಳನ್ನು ಪಾಲನೆ ಮಾಡುವುದು ಕಷ್ಟವಕರವಾಗಿರುತ್ತದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಪತಿ ವಿದಾ ಮರಾಲಾನಿಯವರು ಹೇಳಿದ್ದಾರೆ. 
ಸಂಶೋಧಕರು ರಾಷ್ಟ್ರೀಯ ಪ್ರತಿನಿಧಿಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿದ್ದು, 1979ರಿಂದ 2012ರವರೆಗೂ 3,700 ತಾಯಿಯಂದಿರ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇದರಂತೆ ಮಹಿಳೆ ಮೊದಲ ಮಗುವನ್ನು ಹೆರುವುದಕ್ಕೂ ಮುನ್ನ ಅವರ ಭವಿಶ್ಯದ ನಿರೀಕ್ಷೆಗಳು ಹಾಗೂ ನೈಜ ನಡವಳಿಕೆಗಳ ನಡುವಿನ ವ್ಯತ್ಯಾಸಗಳನ್ನು ಪರಿಶೀಲನೆ ನಡೆಸಿದ್ದಾರೆ. 
ಸಂಶೋಧನೆಯಂತೆ ಸ್ತನಪಾನ ಮಾಡಿರುವ ಸಮಯ, ಮಗುವಿನ ಕುರಿತಂತಿರುವ ಶಿಕ್ಷಣ, ವಯಸ್ಸು, ವಿವಾಹದ ಮಾಹಿತಿ, ಕುಟುಂಬದ ಆದಾಯ ಹಾಗೂ ವೃತ್ತಿ ಕುರಿತ ಮಾಹಿತಿಗಳೆಲ್ಲವನ್ನೂ ಕಲೆ ಹಾಕಿ ಸಂಶೋಧನೆಯ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 
SCROLL FOR NEXT