ಆರೋಗ್ಯ

ಕಂಪ್ಯೂಟರ್ ಮುಂದೆ ಕುಳಿತು ಬೆನ್ನು, ಕಣ್ಣು ನೋವಾಗುತ್ತಿದೆಯೇ, ಹೀಗೆ ಮಾಡಿ

Sumana Upadhyaya

ಕಂಪ್ಯೂಟರ್ ಬಳಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಇಲ್ಲದೆ ಕೆಲಸ ಮಾಡಲೇ ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ಬಂದಿದೆ. ಕಂಪ್ಯೂಟರ್ ಮುಂದೆ ಸಾಕಷ್ಟು ಹೊತ್ತು ಕುಳಿತುಕೊಳ್ಳುವುದರಿಂದ ಬೆನ್ನು, ಕುತ್ತಿಗೆ ನೋವು, ತಲೆನೋವು, ಏಕಾಗ್ರತೆ ಕೊರತೆ, ನರಗಳ ದೌರ್ಬಲ್ಯ ಮೊದಲಾದ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ತಲೆಗೆ ಕೂಡ ದೀರ್ಘಕಾಲದಲ್ಲಿ ಸಮಸ್ಯೆಗಳು ತಲೆದೋರಬಹುದು. ಈ ಅಧ್ಯಯನ ಬಯೊಫೀಡ್ ಬ್ಯಾಕ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಕ್ತಿಯ ತೂಕ ಮತ್ತು ಎತ್ತರವನ್ನು ಅವಲಂಬಿಸಿ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ಆಗುವ ಸಮಸ್ಯೆಗಳು ಬದಲಾಗುತ್ತಿರುತ್ತವೆ. ಕುಳಿತುಕೊಳ್ಳುವ ಭಂಗಿಯಿಂದ ತಲೆ, ಕುತ್ತಿಗೆ, ಕಣ್ಣು ನೋವಿನ ಪ್ರಮಾಣದಲ್ಲಿ ಬದಲಾಗುತ್ತಿರುತ್ತದೆ.

ಕಂಪ್ಯೂಟರ್ ಪರದೆಯ ಮೇಲಿನ ಅಕ್ಷರಗಳ ಗಾತ್ರವನ್ನು ಹೆಚ್ಚಿಸಿ, ಕಂಪ್ಯೂಟರ್ ಪರದೆಯ ಮೇಲಿನ ಅಕ್ಷರಗಳನ್ನು ಓದಲು ಕನ್ನಡಕ, ಕಣ್ಣಿನ ಮಟ್ಟದಲ್ಲಿ ಕಂಪ್ಯೂಟರ್ ನ್ನು ಇಡುವ ಮೂಲಕ ಸಾಧ್ಯವಾದಷ್ಟು ಕಣ್ಣು, ತಲೆ, ಕುತ್ತಿಗೆ ಹಾಗೂ ಬೆನ್ನಿಗೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು.

ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ ಅರ್ಧ ಗಂಟೆಗೊಮ್ಮೆ ಭಂಗಿಯನ್ನು ಬದಲಾಯಿಸುತ್ತಿರಬೇಕು. ಗಂಟೆಗೊಮ್ಮೆಯಾದರೂ ಎದ್ದು ಓಡಾಡಬೇಕು.

SCROLL FOR NEXT