ಆರೋಗ್ಯ

ಹೃದಯಘಾತದ ಬಗ್ಗೆ ಕೇಳಿದ್ದೀರಿ, ಆದರೆ, ಮೆದುಳಿನ ಆಘಾತದ ಬಗ್ಗೆ ಎಷ್ಟು ಗೊತ್ತಿದೆ?

Sumana Upadhyaya

ಬೆಂಗಳೂರು: ಹೃದಯಾಘಾತದಂತೆ ಇತ್ತೀಚಿನ ದಿನಗಳಲ್ಲಿ ಮೆದುಳು ಆಘಾತ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಜಗತ್ತಿನಲ್ಲಿ ಪ್ರತಿವರ್ಷ 20 ಮಿಲಿಯನ್ ಜನರು ಈ ಆಘಾತಕ್ಕೆ ತುತ್ತಾಗುತ್ತಿದ್ದು ಅವರ ಪೈಕಿ 5 ಮಿಲಿಯನ್ ಜನರು ಸಾಯುತ್ತಾರೆ. 


ಆದರೆ ಈ ಆರೋಗ್ಯ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜ್ಞಾನದ ಕೊರತೆಯಿದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಆಘಾತವುಂಟಾಗುತ್ತದೆ. 


ಮೆದುಳು ಆಘಾತದ ಲಕ್ಷಣಗಳೇನು?:ವ್ಯಕ್ತಿಗೆ ಮಾತನಾಡಲು ಕಷ್ಟವಾಗುವುದು, ದೇಹದ ಯಾವುದಾದರೂ ಭಾಗಗಳಲ್ಲಿ ನಿಶ್ಯಕ್ತಿ, ದೃಷ್ಟಿ ಕಳೆದುಕೊಳ್ಳುವುದು, ದೇಹದ ಸಮತೋಲನ ಕಳೆದುಕೊಳ್ಳುವುದು, ತೀವ್ರ ಗೊಂದಲ, ಪ್ರಜ್ಞಾಸ್ಥಿತಿಯಲ್ಲಿ ಬದಲಾವಣೆ, ತೀವ್ರ ತಲೆನೋವು ಇತ್ಯಾದಿ.


ಚಿಕಿತ್ಸೆಯೇನು?: ವ್ಯಕ್ತಿಯಲ್ಲಿ ಮೆದುಳಿನ ಆಘಾತದ ಲಕ್ಷಣ ಕಂಡುಬಂದರೆ ವೈದ್ಯರು ರಕ್ತ ಪರೀಕ್ಷೆ ಮಾಡುತ್ತಾರೆ. ನಂತರ ಮೆದುಳಿನ ಸಿಟಿ ಸ್ಕ್ಯಾನ್ ಅಥವಾ ಎಂಆರ್ ಐ ಸ್ಕ್ಯಾನ್ ಸಹ ಮಾಡುತ್ತಾರೆ. ಅಮೆರಿಕಾದ ರಾಷ್ಟ್ರೀಯ ನರಮಂಡಲ ರೋಗ ಸಂಸ್ಥೆ ನಿಂದ್ ಮಾಡಿರುವ ಅಧ್ಯಯನ ಪ್ರಕಾರ ಆರ್-ಟ್ಪಾ(r-tpa) ಎಂಬ ಔಷಧಿ ಸಾವಿರಾರು ಮೆದುಳು ಆಘಾತಕ್ಕೊಳಗಾದ ಜನರಿಗೆ ಗುಣಮುಖವಾಗುವಲ್ಲಿ ಸಹಾಯವಾಗಿದೆ.


ಅಮೂಲ್ಯ ಸಮಯ: ಈ ಎಲ್ಲಾ ಔಷಧಿಗಳನ್ನು ಹೊರತುಪಡಿಸಿ ಹೃದಯಘಾತಕ್ಕೊಳಗಾದವರಿಗೆ ಆರಂಭದ ಒಂದಷ್ಟು ಹೊತ್ತು ಗೋಲ್ಡನ್ ಅವರ್ ಎಂದು ನಾವೇನು ಹೇಳುತ್ತೇವೆಯೊ ಮೆದುಳು ಆಘಾತಕ್ಕೊಳಗಾದ ವ್ಯಕ್ತಿಗಳಿಗೆ ಸಹ ಅದು ಮುಖ್ಯವಾಗುತ್ತದೆ.
ಮೆದುಳು ಆಘಾತಕ್ಕೊಳಗಾದವರು ಮೊದಲ ಲಕ್ಷಣ ಕಂಡುಬಂದ 4-5 ಗಂಟೆಗಳೊಳಗೆ ಆಸ್ಪತ್ರೆಗೆ ತಲುಪಬೇಕು. ಇದನ್ನು ಮೆದುಳು ಆಘಾತದ ಚಿಕಿತ್ಸೆಗೆ ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಮೆದುಳು ಆಘಾತಕ್ಕೀಡಾದ ವ್ಯಕ್ತಿಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ಅವರಿಗೆ ಔಷಧಿ ನೀಡಬೇಕು ಎಂಬ ವಿಷಯವನ್ನು ಸರ್ಕಾರೇತರ ಸಂಘಟನೆಗಳು, ಸರ್ಕಾರಿ ಸಂಸ್ಥೆಗಳು, ಖಾಸಗಿ ವಲಯಗಳು ಜನರಿಗೆ ತಿಳಿಸಬೇಕು. ವೈದ್ಯಕೀಯ ಸಲಹೆ ಪಡೆಯುವ ಮೂಲಕ ದೀರ್ಘಕಾಲದ ಅಶಕ್ತತೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.


ಮೆದುಳು ಆಘಾತಕ್ಕೊಳಗಾದ ವ್ಯಕ್ತಿಗಳನ್ನು ಸರಿಯಾಗಿ ನೋಡಿಕೊಳ್ಳುವುದು, ಸೂಕ್ತ ಸಮಯಕ್ಕೆ ಔಷಧಿ ನೀಡುವುದರಿಂದ ಸುಧಾರಣೆ ಕಂಡುಬರಬಹುದು. ಆದರೆ ಈ ವೈದ್ಯಕೀಯ ಸೌಲಭ್ಯ ದೊರಕುವುದು ಕೆಲವು ಪ್ರಮುಖ ಆಸ್ಪತ್ರೆಗಳಲ್ಲಿ ಮಾತ್ರ. ಹೀಗಾಗಿ ಬಹುಪಾಲು ಜನರಿಗೆ ಇದು ದೊರಕುತ್ತಿಲ್ಲ. 


ಹೀಗಾಗಿ ಮೆದುಳು ಆಘಾತಕ್ಕೊಳಗಾದ ವ್ಯಕ್ತಿಗಳಿಗೆ ಉತ್ತಮ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗಳು. ಪುನರ್ವಸತಿ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳ ಅವಶ್ಯಕತೆಯಿದೆ. ಅದಕ್ಕಿಂತಲೂ ಹೆಚ್ಚಾಗಿ ಗ್ರಾಮೀಣ ಭಾಗದ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. 

SCROLL FOR NEXT