ಆರೋಗ್ಯ

10ರಲ್ಲಿ ಒಬ್ಬ ಭಾರತೀಯನಿಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್: ವಿಶ್ವ ಆರೋಗ್ಯ ಸಂಸ್ಥೆ

Manjula VN

ವಿಶ್ವಸಂಸ್ಥೆ: ಪ್ರತೀ 10 ಮಂದಿ ಭಾರತೀಯರಲ್ಲಿ ಒಬ್ಬನಿಗೆ ಆತನ ಜೀವಿತಾವಧಿಯಲ್ಲಿ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾನೆ. ಪ್ರತೀ 15 ಮಂದಿಯಲ್ಲಿ ಓರ್ವರು ಈ ಸಮಸ್ಯೆದಿಂದ ಬಲಿಯಾಗುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಅಧ್ಯಯನದಲ್ಲಿ ತಿಳಿಸಿದೆ. 

ಇದಲ್ಲದೆ 2018ರಲ್ಲಿ 10 ಲಕ್ಷ ಮಂದಿ ಭಾರತೀಯರು ಕ್ಯಾನ್ಸರ್ ರೋಗಕ್ಕೆ ಗುರಿಯಾಗಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಿದೆ. 

2018ರಲ್ಲಿ ಭಾರತದಲ್ಲಿ 10.16 ಲಕ್ಷ ಕ್ಯಾನ್ಸರ್ ಪ್ರಕರಗಳು ದಾಖಲಾಗಿವೆ. 7,84,800 ಸಾವುಗಳು ಸಂಭವಿಸಿನವೆ. ಕಳೆದ 5 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳುತ್ತಿರುವ ಭಾರತೀಯರ ಸಂಖ್ಯೆ 20.26 ಲಕ್ಷ ಎಂದು ವರದಿ ಹೇಳಿದೆ. ಇನ್ನು ಪ್ರತಿ 10 ಭಾರತೀಯರಲ್ಲಿ ಒಬ್ಬನಿಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್ ತಗುಲುತ್ತದೆ. 15 ಭಾರತೀಯರಲ್ಲಿ ಒಬ್ಬಾತ ಕ್ಯಾನ್ಸರ್ ಗೆ ಬಲಿಯಾಗುತ್ತಾನೆ. ಭಾರತದಲ್ಲಿ ಸ್ತನ, ಗರ್ಭಕೋಶ ಹಾಗೂ ಬಾಯಿಯ ಕ್ಯಾನ್ಸರ್ ಸೇರಿ ಒಟ್ಟು 6 ರೀತಿಯ ಕ್ಯಾನ್ಸರ್ ಸಾಮಾನ್ಯವಾಗಿದೆ ಎಂದು ವಿವರಿಸಿದೆ. 

SCROLL FOR NEXT