ಬೆಂಗಳೂರು: ಬಿರು ಬೇಸಿಗೆ ನಂತರ ಆರಂಭವಾಗುವ ಮಳೆಗಾಲದಲ್ಲಿ ಸರಿಯಾಗಿ ಜೀವನ ನಿರ್ವಹಣೆ ಮಾಡದಿದ್ದರೆ ಅನೇಕ ಅಪಾಯಗಳನ್ನು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿ ಋತುಮಾನ ಬದಲಾದಂತೆ ನಮ್ಮ ದೇಹವು ಕೂಡಾ ಹೊಸ ತಾಪಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅವಶ್ಯಕವಾಗುತ್ತದೆ.
ಮಳೆಗಾಲದಲ್ಲಿ ದೇಶದ ಹಲವೆಡೆ ಭಾರೀ ಮಳೆಯಾಗುತ್ತಿರುವಂತೆಯೇ, ಬೇಸಿಗೆಯಿಂದ ಮಳೆಗಾಲಕ್ಕೆ ತಿರುಗುತ್ತಿದ್ದಂತೆ
ರೋಗ ರೋಗ ನಿರೋಧಕ ಶಕ್ತಿ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಈ ಕಾಲದಲ್ಲಿ ಟೈಪಾಯಿಡ್, ಅತಿಸಾರ ಭೇದಿ, ಹೆಪಾಟಿಟಿಸ್ ಎ ಮತ್ತು ಇ, ಜಾಂಡೀಸ್, ಪುಡ್ ಪಾಯಿಸನ್, ಮಲೇರಿಯಾ, ಡೆಂಘೀಯಂತಹ ನೀರಿನಿಂದ ಹರಡಬಲ್ಲ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಎಲ್ಲಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಾಗುತ್ತದೆ. ಶೇ. 80 ರಷ್ಟು ರೋಗ ನಿರೋಧಕ ಶಕ್ತಿ ನಿಮ್ಮ ಕರುಳಿನ ಆರೋಗ್ಯವನ್ನು ಅವಲಂಬಿಸಿರುತ್ತದೆ.ಇದೆಲ್ಲವೂ ಬರೀ ಆಹಾರ ಪದಾರ್ಥ ಮಾತ್ರವಲ್ಲದೇ, ಒಟ್ಟಾರೇ, ಜೀವನ ಶೈಲಿ ಮೇಲೆ ಅವಲಂಬಿತವಾಗಿರುತ್ತದೆ.
ಸದೃಢ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಈ ಕೆಳಗೆ ನೀಡಿರುವಂತೆ ಕೆಲವೊಂದು ಮುಂಜಾಗ್ರತೆ ವಹಿಸಬೇಕಾಗುತ್ತದೆ.
- ಪಾಲಕ್ , ಎಲೆಕೋಸು ಮತ್ತಿತರ ಹಸಿರು ಎಲೆಯ ತರಕಾರಿ ಸೇವನೆ ಕಡಿಮೆ ಮಾಡಬೇಕು: ಮಳೆಗಾಲ ಅನೇಕ ಕೀಟಗಳು, ಹುಳಗಳು ಸಂತಾನೋತ್ಪತ್ತಿಯ ಕಾಲವಾಗಿದ್ದು, ಹಸಿರು ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಆದ್ದರಿಂದ ಹಸಿರುಎಲೆ ತರಕಾರಿಗಳನ್ನು ಸೇವಿಸಬಾರದು. ಅಲ್ಲದೇ, ಇಂತಹ ತರಕಾರಿಗಳ ಸೇವನೆ ಜೀರ್ಣಕ್ರಿಯೆಗೆ ಸಮಸ್ಯೆಯುಂಟು ಮಾಡುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಬಹುದು.
- ಎಲ್ಲಾ ಕಾಲದಲ್ಲೂ ಹಣ್ಣುಗಳು ಹಾಗೂ ತರಕಾರಿಗಳನ್ನು ಸ್ವಚ್ಛಗೊಳಿಸಿ ತಿನ್ನಬೇಕು: ಏಕೆಂದರೆ ಅದರೊಂದಿಗೆ ಏನೋ ಸೇವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾಸಾಯನಿಕ ಮುಕ್ತ ಸುರಕ್ಷಿತ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು.
- ಮಳೆಗಾಲಕ್ಕೆ ಸರಿಹೊಂದುವಂತಹ ಆಹಾರವನ್ನು ಸೇವಿಸಬೇಕು: ಈ ಅವಧಿಯಲ್ಲಿ ಸ್ಥಳೀಯ ಹಣ್ಣು ಮತ್ತು ತರಕಾರಿಗಳ ಸೇವನೆಗೆ ಆದ್ಯತೆ ಕೊಡಬೇಕು. ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಅರಿಶಿನ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಲವಂಗ: ಮತ್ತಿತರ ಪದಾರ್ಥಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಬೇಕು,ತುಳಸಿ ಎಲೆಗಳನ್ನು ಚಹಾ ಅಥವಾ ಕುದಿಸಿದ ನೀರಿನಲ್ಲಿ ಹಾಕಿ ಕುಡಿಯಬಹುದು.
- ಕರುಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಬೇಯಿಸಿದ ಆಹಾರ ಸೇವಿಸಬೇಕು: ಸೇಬು, ಬೆಳ್ಳುಳ್ಳಿ, ಬಾಳೆ ಹಣ್ಣಿನಂತಹ ಹಣ್ಣುಗಳನ್ನು ಸೇವಿಸುವುದು ಅಗತ್ಯ ಎಂದು ಮುಂಬೈ ಮೂಲದ ಆರೋಗ ತಜ್ಞರೊಬ್ಬರು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos