ಆರೋಗ್ಯ

ಮೂಳೆಗಳ ಆರೋಗ್ಯದ ಮೇಲೂ ಇರಲಿ ಗಮನ!

Manjula VN

ವಯಸ್ಸು 30 ದಾಟಿದರೆ ಸಾಕು ಬೆನ್ನು ನೋವು, ಸೊಂಟ ನೋವು, ಮೊಣಕೈ ನೋವು, ಮೊಣಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವಕ್ಕೆಲ್ಲಾ ಮುಖ್ಯ ಕಾರಣ ಜೀವನಶೈಲಿ ಹಾಗೂ ಆಹಾರಕ್ರಮ. ಆದರೆ ಯೌವನ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು ಕಡಿಮೆಯಾಗುತ್ತದೆ. 

ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ. ದೇಹದಲ್ಲಿ ಕ್ಯಾಲ್ಷಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಕೂಡ ಮೂಳೆಗಳ ಸಮಸ್ಯೆಗೆ ಕಾರಣವಾಗುತ್ತದೆ. ಕೇವಲ ಔಷಧಿಗಳಿಂದ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.  

ಮೂಳೆಗಳು ಆರೋಗ್ಯಕರವಾಗಿಟ್ಟುಕೊಳ್ಳಲು, ಕ್ಯಾಲ್ಶಿಯಂ, ವಿಟಮಿನ್ ಡಿ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ ವುಳ್ಳ ಆಹಾರಗಳ ಸೇವನೆ ಅತ್ಯವಶ್ಯಕ.

ಮೂಳೆಗಳ ಆರೋಗ್ಯಕ್ಕಾಗಿ ಯಾವ ಆಹಾರವನ್ನು ನಿಯಂತ್ರಿಸಬೇಕು?

  • ಮದ್ಯಪಾನ ನಿಯಂತ್ರಿಸಿ. ದಿನಕ್ಕೆ 2-3 ಕ್ಕಿಂತಲೂ ಹೆಚ್ಚು ಬಾರಿ ಮದ್ಯಪಾನ ಮಾಡುವುದರಿಂದ ಮೂಳೆ ಸಮಸ್ಯೆಗಳು ಎದುರಾಗುತ್ತವೆ. 
  • ದೈನಂದಿನ ಆಹಾರ ಪದಾರ್ಥಗಳಲ್ಲಿ ಕಾಫಿ, ಟೀ, ಸೋಡಾದ ಪ್ರಮಾಣವನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಈ ಪದಾರ್ಥಗಳ ಸೇವನೆಯು ದೇಹದಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು ಕ್ಯಾಲ್ಶಿಯಂ ಸಮಸ್ಯೆಗಳನ್ನು ತಂದೊಡ್ಡುತ್ತವೆ. 
  • ಸೋಡಿಯಂ ಅಂಶ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ. 
  • ಧೂಮಪಾನವನ್ನು ಮಾಡದಿರಿ. ಇದರು ಮೂಳೆಗಳು ಮುರಿತಕ್ಕೆ ಕಾರಣವಾಗುತ್ತವೆ. 

ಮೂಳೆಗಳ ಆರೋಗ್ಯಕ್ಕಾಗಿ ಯಾವ ಆಹಾರವನ್ನು ಸೇವನೆ ಮಾಡುವುದು ಮುಖ್ಯ...?
ಕ್ಯಾಲ್ಸಿಯಂ ನಮ್ಮ ಮೂಳೆಗಳ ಆರೋಗ್ಯಕ್ಕೆ ಮತ್ತು ಆಸ್ಟಿಯೋಪೋರಸ್‌ ನಿವಾರಣೆಗೆ ಬಹಳ ಉತ್ತಮ ಅಂಶ. ಕ್ಯಾಲ್ಸಿಯಂ ಅನ್ನುವುದು ಮೂಳೆಗಳ ರಚನೆಗೆ ಬಹಳ ಆವಶ್ಯವಿರುವ ಪೋಷಕಾಂಶ. ನಮ್ಮ ಜೀವನಪರ್ಯಂತ ಮೂಳೆಗಳ ಆರೋಗ್ಯ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಆದರೆ ನಿಮ್ಮ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್‌ “ಡಿ’ ಪೂರೈಕೆ ಆದರೆ ಮಾತ್ರವೇ ಕ್ಯಾಲ್ಸಿಯಂ ಸದುಪಯೋಗವಾಗಿ ಮೂಳೆಗಳು ಸಂಪೂರ್ಣ ಸಂರಚನೆಯನ್ನು ತಲುಪಲು ಸಾಧ್ಯ. 

ನಮ್ಮ ಮೂಳೆಗಳ ಸಂರಕ್ಷಣೆಗಾಗಿ ಕ್ಯಾಲ್ಸಿಯಂ ಮತ್ತು ವಿಟಾಮಿನ್‌ “ಡಿ’ಗಳು ಜೊತೆಯಾಗಿ ಕೆಲಸ ಮಾಡುತ್ತವೆ. ಕ್ಯಾಲ್ಸಿಯಂ ನಮ್ಮ ಶರೀರದಲ್ಲಿ ಮೂಳೆಗಳ ರಚನೆ ಮತ್ತು ನಿರ್ವಹಣೆಗೆ ಸಹಾಯ ಮಾಡಿದರೆ, ವಿಟಾಮಿನ್‌ “ಡಿ’ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನಾವು ಆಹಾರದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಸೇವಿಸಿದರೂ ಸಹ, ನಮಗೆ ವಿಟಾಮಿನ್‌ “ಡಿ’ ಕೊರತೆ ಆದರೆ ಕ್ಯಾಲ್ಸಿಯಂನಿಂದ ನಮಗೆ ಹೆಚ್ಚು ಪ್ರಯೋಜನವಾಗುವುದಿಲ್ಲ. 

ನಮ್ಮ ಶರೀರದಲ್ಲಿರುವ ಒಟ್ಟು ಕ್ಯಾಲ್ಸಿಯಂನ ಶೇ.99.5 ಪ್ರಮಾಣ ನಮ್ಮ ಮೂಳೆಗಳಲ್ಲಿ ಇರುತ್ತದೆ. ಅನೇಕ ಜನರು ತಾವು ಸೇವಿಸುವ ಆಹಾರದ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯುತ್ತಾರೆ. 

ಬೆಣ್ಣೆ, ಮೊಸರು, ಹಾಲು, ಮೀನುಗಳು, ಬಸಳೆ, ಟರ್ನಿಪ್‌ ಗಡ್ಡೆಯಂತಹ ದಟ್ಟ ಹಸಿರು ಬಣ್ಣದ ಸೊಪ್ಪು ತರಕಾರಿಗಳು, ಪುಷ್ಟೀಕರಿಸಿದ ಕಾರ್ನ್ ಫ್ಲೇಕ್ಸ್‌ ಪುಷ್ಟೀಕರಿಸಿದ ಕಿತ್ತಲೆ ರಸ. ಸೋಯಾಬೀನ್ಸ್‌, ಪುಷ್ಟೀಕರಿಸಿದ ಬ್ರೆಡ್‌ ಮತ್ತು ಕಾಳುಗಳಲ್ಲಿ ಹೇರಳವಾದ ಕ್ಯಾಲ್ಶಿಯಂ ಅಂಶಗಳಿರುತ್ತೇವೆ. 

ಇನ್ನು ಸ್ನಾಯು ಹಾಗೂ ಮೂಳೆಗಳು ದೃಢವಾಗಿ ಬೆಳೆಯಲು ವಿಟಾಮಿನ್‌ ಡಿ ಆವಶ್ಯಕವಾಗಿದೆ. ವಿಟಾಮಿನ್‌ “ಡಿ’ ಇಲ್ಲದೆ ಅವರ ಶರೀರವು ಕ್ಯಾಲ್ಸಿಯಂ ಅನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳದು. 

ನಮ್ಮ ಶರೀರದ ಮೂಳೆಗಳ ಆರೋಗ್ಯಕ್ಕೆ ವಿಟಾಮಿನ್‌ “ಡಿ’ ಬಹಳ ಆವಶ್ಯಕ. ವಿಟಾಮಿನ್‌ “ಡಿ’ ಅನ್ನುವುದು ವಾಸ್ತವವಾಗಿ ಒಂದು ವಿಟಾಮಿನ್‌ ಅಲ್ಲ. ವಿಟಾಮಿನ್‌ಗಳು ಅಂದರೆ ಶರೀರಕ್ಕೆ ಆವಶ್ಯಕವಿರುವ ಆದರೆ ತಯಾರಿಸಲು ಸಾಧ್ಯ ಇಲ್ಲದಿರುವ ವಿಶೇಷ ಪೋಷಕಾಂಶಗಳು, 

ಹಾಗಾಗಿ ಈ ಪೋಷಕಾಂಶಗಳನ್ನು ನಾವು ಸೇವಿಸುವ ಆಹಾರ ಅಥವಾ ಪೋಷಕಾಂಶ ಮೂಲಗಳಿಂದ ಪಡೆಯಬೇಕಾಗುತ್ತದೆ. ನಮ್ಮ ತ್ವಚೆಯನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಾಗ ನಮ್ಮ ಶರೀರವು ತ್ವಚೆಯ ಮೂಲಕ ವಿಟಾಮಿನ್‌ “ಡಿ’ಯನ್ನು ಉತ್ಪಾದಿಸುವ ಕಾರಣ ವಿಟಾಮಿನ್‌ “ಡಿ’ಯನ್ನು ಹಾರ್ಮೋನ್‌ ಎಂಬುದಾಗಿ ಪರಿಗಣಿಸಲಾಗುತ್ತದೆ. 

ವಿಟಾಮಿನ್‌ “ಡಿ’ ನಮ್ಮ ಶರೀರಕ್ಕೆ ಕ್ಯಾಲ್ಸಿಯಂ ಅನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.  ಅನೇಕ ಜನರಿಗೆ ಸೂರ್ಯನ ಬೆಳಕೇ ವಿಟಾಮಿನ್‌ “ಡಿ’ ಯ ಮೂಲ ಆಗಿರುತ್ತದೆ. ಆದರೆ ವಿಟಾಮಿನ್‌ “ಡಿ’ಯನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ, ಚರ್ಮಕ್ಕೆ ಸರಿಯಾದ ಹೊದಿಕೆ ಅಥವಾ ರಕ್ಷಣೆಯನ್ನು ನೀಡದೆ ಸೂರ್ಯನ ಪ್ರಖರ ಬೆಳಕಿಗೆ ತ್ವಚೆಯನ್ನು ಒಡ್ಡಿಕೊಂಡರೆ ಚರ್ಮದ ಕ್ಯಾನ್ಸರ್‌ ಬರುವ ಸಾಧ್ಯತೆಗಳು ಇವೆ. 

ಒಂದು ವೇಳೆ ನಿಮಗೆ ಈ ಬಗ್ಗೆ ಆತಂಕ ಇದ್ದರೆ ಅಥವಾ ನೀವು ಅಂದರೆ ಅಲ್ಲಿ ಸೂರ್ಯನ ಬೆಳಕು ಬರುವುದು ಬಹಳ ಅಪರೂಪವಾಗಿರುವ ಉತ್ತರ ಭಾಗದಲ್ಲಿ ನೆಲೆಸಿದ್ದರೆ ನೀವು ನಿತ್ಯ ಸೇವಿಸುವ ಆಹಾರದ ಮೂಲಕವೂ ಸಹ ವಿಟಾಮಿನ್‌ “ಡಿ’ಯನ್ನು ಪಡೆಯಬಹುದಾಗಿದೆ. 

ವಿಟಮಿನ್‌ ಕೆ ಹೆಚ್ಚಿರುವ ಬ್ರೋಕೋಲಿ (ಹೂ ಕೋಸು) ಮತ್ತು ಕೇಲ್‌, ಪಾಲಕ್‌ ಮೊದಲಾದ ಹಸಿರೆಲೆಗಳನ್ನು ಸೇವಿಸಬೇಕು. ಪೊಟಾಶಿಯಂ ಪೊಟಾಶಿಯಂ ಮೂಳೆಗಳ ದೃಢತೆಯಲ್ಲಿ ಭಾರೀ ಪಾತ್ರವಹಿಸದಿದ್ದರೂ ಕ್ಯಾಲ್ಸಿಯಂ ಮೂಳೆಗಳಲ್ಲಿ ಸಂಚಲನಗೊಳ್ಳಲು ನೆರವಾಗುತ್ತದೆ. ಸಿಹಿಗೆಣಸು ಮತ್ತು ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಹೇರಳವಾಗಿರುತ್ತದೆ.

ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಸಿ ಕೂಡ ಅತ್ಯಂತ ಮುಖ್ಯ. ಸಾಮಾನ್ಯವಾಗಿ ವಿಟಮಿನ್ ಸಿ ಅಂಶವು, ನಿಂಬೆ, ಕಿತ್ತಳೆ ಮತ್ತು ಹಸಿರು ಮೆಣಸಿನಕಾಯಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬಹುದು. ಕಿತ್ತಳೆ, ಮುಸಂಬಿ ಮತ್ತು ನಿಂಬೆ ಪ್ರಧಾನ ಸಿಟ್ರಸ್ ಹಣ್ಣುಗಳು. ಇದಲ್ಲದೆ ದ್ರಾಕ್ಷಿ, ಪಪ್ಪಾಯಿ, ಕಲ್ಲಂಗಡಿ ಮತ್ತು ಸ್ಟ್ರಾಬೆರಿಗಳಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ.

SCROLL FOR NEXT