ಸಂಗ್ರಹ ಚಿತ್ರ 
ಆರೋಗ್ಯ

ವಯಸ್ಕರಲ್ಲಿ ಹೆಚ್ಚುತ್ತಿದೆ ಆರ್‌ಎಸ್‌ವಿ ಸೋಂಕು: ಮಾಸ್ಕ್ ಧಾರಣೆ ಅತ್ಯಗತ್ಯ, ಎಚ್ಚರ ವಹಿಸಿ ಎಂದ ವೈದ್ಯರು

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವಂತೆ ತೀವ್ರ ಬಿಸಲು ವಾತಾವರಣದಲ್ಲೂ ಅನಾರೋಗ್ಯ ಸಮಸ್ಯೆ ಕಾಡುತ್ತವೆ. ತಲೆನೋವು, ಶೀತವು ಕಾಣಿಸಿಕೊಳ್ಳುತ್ತವೆ. ಅಂತದ್ದೇ ಭೀತಿಯ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಇದೀಗ ಸಣ್ಣ ಮಕ್ಕಳು ಸೇರಿದಂತೆ ವಯಸ್ಕರನ್ನು ಕಾಡುತ್ತಿದ್ದು, ಆತಂಕ ಸೃಷ್ಟಿಸಿದೆ.

ಬೆಂಗಳೂರು: ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವಂತೆ ತೀವ್ರ ಬಿಸಲು ವಾತಾವರಣದಲ್ಲೂ ಅನಾರೋಗ್ಯ ಸಮಸ್ಯೆ ಕಾಡುತ್ತವೆ. ತಲೆನೋವು, ಶೀತವು ಕಾಣಿಸಿಕೊಳ್ಳುತ್ತವೆ. ಅಂತದ್ದೇ ಭೀತಿಯ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಇದೀಗ ಸಣ್ಣ ಮಕ್ಕಳು ಸೇರಿದಂತೆ ವಯಸ್ಕರನ್ನು ಕಾಡುತ್ತಿದ್ದು, ಆತಂಕ ಸೃಷ್ಟಿಸಿದೆ.

ಚಳಿಗಾಲದಲ್ಲಿ ಹೆಚ್ಚಾಗುವ ಈ ಆರ್‌ಎಸ್‌ವಿ ವೈರಸ್‌ಗೆ ವಯಸ್ಕರು ಅದರಲ್ಲೂ ಈಗಾಗಲೇ ಶ್ವಾಸಕೋಶದ ಸಮಸ್ಯೆ, ಹೃದ್ರೋಗದ ಸಮಸ್ಯೆ, ರೋಗನಿರೋಧಕ ಕಡಿಮೆ ಇರುವವರನ್ನು ಗುರಿ ಮಾಡುತ್ತಿದೆ. ಈ ಆರೋಗ್ಯ ಸಮಸ್ಯೆಯ ಇತಿಹಾಸ ಹೊಂದಿರುವವರಿಗೆ ಸಿನ್ಸಿಟಿಯಲ್‌ ವೈರಸ್‌ ಹೆಚ್ಚು ಮಾರಕವಾಗುತ್ತಿದೆ.

ಉಸಿರಾಟದ ಸಿನ್ಸಿಟಿಯಲ್‌ ವೈರಸ್‌ (ಆರ್‌ಎಸ್‌ವಿ)ನಿಂದ ವಯಸ್ಕರಲ್ಲಿ ಆಗುವ ಸಮಸ್ಯೆ ಹಾಗೂ ಇದರಿಂದ ಪಾರಾಗುವ ಕುರಿತು ವೈದ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ.

ವಯಸ್ಕರಲ್ಲಿ ಆರ್‌ಎಸ್‌ವಿ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. 6 ವಾರಗಳಲ್ಲಿ 100 ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಫೋರ್ಟಿಸ್‌ ಆಸ್ಪತ್ರೆಯ ಪಲ್ಮನಾಲಜಿಸ್ಟ್‌ ಡಾ. ವಿವೇಕ್‌ ಆನಂದ್ ಪಡೆಗಲ್ ಅವರು ಹೇಳಿದ್ದಾರೆ.

ಒಪಿಡಿಗೆ ಬರುವ ರೋಗಿಗಳ ರೋಗಲಕ್ಷಣಗಳನ್ನು ಪರೀಕ್ಷಿಸಿದರೆ ಈ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಆರ್‌ಎಸ್‌ವಿ ಸಾಮಾನ್ಯವಾಗಿ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ. ವಯಸ್ಕರಲ್ಲಿ ಕಾಣುವುದು ವಿರಳವೆನ್ನಲಾಗಿತ್ತು. ಆದರೀಗ ವಯಸ್ಕರಲ್ಲೇ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಈ ಸಮಸ್ಯೆ ಕಾಣಿಸಿಕೊಂಡವರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ದೀರ್ಘಕಾಲೀನ ಪರಿಣಾಮ ಎದುರಿಸಬೇಕಾಗುತ್ತದೆ. ಕಡಿಮೆ ಆಮ್ಲಜನಕದ ಮಟ್ಟವನ್ನು ಹೊಂದಿರುವ ವಯಸ್ಕ ರೋಗಿಗಳು ಹೃದಯಾಘಾತಕ್ಕೆ ಹೆಚ್ಚು ಒಳಗಾಗುಬಹುದ, ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಗಳು ಎದುರಾಗಬಹುದು ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿಯೂ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಹಿಂದಿ ವರ್ಷ 6 ತಿಂಗಳಲ್ಲಿ 4-5 ಪ್ರಕರಣಗಳನ್ನು ನೋಡುತ್ತಿದ್ದೆವು. ಆದರೀಗ ಪ್ರತೀವಾರ 5-6 ಪ್ರಕರಣಗಳು ವರದಿಯಾಗುತ್ತಿವೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ (ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್) ಡಾ ಪರಿಮಳ ವಿ ತಿರುಮಲೇಶ್ ಹೇಳಿದ್ದಾರೆ.

ಮಾರಣಾಂತಿಕ ಸಾಂಕ್ರಿಮಿಕ ಕೋವಿಡ್ 19 ನಂತರ ಸಾಕಷ್ಟು ಜನರ ಶ್ವಾಸಕೋಶ ದುರ್ಬಲಗೊಂಡಿದೆ. ಇದರಿಂದ ಆರ್‌ಎಸ್‌ವಿ ಸೋಂಕು ಸುಲಭವಾಗಿ ವಯಸ್ಕರನ್ನು ಕಾಡುತ್ತಿವೆ. ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದುದ್ದರಿಂದ ಈ ವೈರಸ್‌ ಮಕ್ಕಳಿಗೆ ಸುಲಭವಾಗಿ ದಾಳಿ ಮಾಡುತ್ತಿತ್ತು. ಸದ್ಯ ಬದಲಾದ ಸನ್ನಿವೇಶದಲ್ಲಿ ವಯಸ್ಕರನ್ನೂ ಕಾಡತೊಡಗಿದೆ. ಹೀಗಾಗಿ ಕೋವಿಡ್‌ಗೆ ತುತ್ತಾಗಿ ಗುಣವಾಗಿರುವ ವಯಸ್ಕರು ಅಥವಾ ಹಿರಿಯ ನಾಗರಿಕರು ಈ ವೈಸರ್‌ನಿಂದ ಹುಷಾರಿಗಿರುವುದು ಅವಶ್ಯಕವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ವಯಸ್ಕರಲ್ಲಿ ಆರ್‌ಎಸ್‌ವಿಯ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುವಂತೆಯೇ ಇರುತ್ತವೆ. ಅತಿಯಾಗಿ ಸ್ರವಿಸುವ ಮೂಗು, ಕೆಮ್ಮು, ಗಂಟಲುನೋವು, ಜ್ವರ, ಉಬ್ಬಸ ಮತ್ತು ಉಸಿರಾಟದ ತೊಂದರೆ ಕಾಡಲಿದೆ. ಕೆಲವು ಸಂದರ್ಭಗಳಲ್ಲಿ, ನ್ಯುಮೋನಿಯಾ, ಬ್ರಾಂಕಿಯೋಲೈಟಿಸ್ ಮತ್ತು ಆರ್‌ಎಸ್‌ವಿ-ಸಂಬಂಧಿತ ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್ (ARDS) ನಂತಹ ಹೆಚ್ಚು ಗಂಭೀರ ತೊಡಕುಗಳು ಕಾಣಿಸಬಹುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ RTPCR (ಕೋವಿಡ್ ಪರೀಕ್ಷೆಯಂತೆಯೇ) ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಈ ವೈರಸ್ ಪತ್ತೆ ಮಾಡಬಹುದಾಗಿದೆ.

ವೈರಸ್ ನಿಂದ ದೂರ ಇರುವುದು ಹೇಗೆ?

  • ಚಳಿಗಾಲದ ತಿಂಗಳಲ್ಲಿಯೇ ಈ ವೈರಸ್‌ ಹೆಚ್ಚು ವೇಗವಾಗಿ ಹರಡುತ್ತದೆ ಎಂಬುದು ಸಾಬೀತಾದಿದೆ. ಆದ್ದರಿಂದ ಚಳಿಗಾಲದಲ್ಲಿ ಹೆಚ್ಚು ತೇವಾಂಶವಿರುವ ಪ್ರದೇಶದಲ್ಲಿ ಓಡಾಡುವುದು, ಸೊಳ್ಳೆಗಳ ಕಡಿತ, ಮಳೆಯಲ್ಲಿ ನೆನೆಯುವುದು, ಗಾಳಿಗೆ ಮೈ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು.
  • ಕೋವಿಡ್ ರೀತಿಯಲ್ಲಿ ಈ ರೋಗ ನಿಯಂತ್ರಣವನ್ನು ಮಾಡಬೇಕಿದೆ. ಅನಾರೋಗ್ಯದ ಜನರ ನಿಕಟ ಸಂಪರ್ಕದಿಂದ ದೂರವಿರಿ. ದೇಹವನ್ನು ಸದಾ ಬೆಚ್ಚಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಈಗಾಗಲೇ ಯಾರಿಗಾದರು ಜ್ವರ ಅಥವಾ ನೆಗಡಿ ಬಂದಿದ್ದರೆ, ಅವರಿಂದಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.
  • ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಮತ್ತು ಸಂಪೂರ್ಣವಾಗಿ ತೊಳೆಯಿರಿ, ಅದು ಉಗುರುಗಳು ಸೇರಿದಂತೆ ಅಂಗೈ ಮತ್ತು ಕೈಗಳ ಎಲ್ಲಾ ಭಾಗಗಳನ್ನು ತಲುಪುತ್ತದೆ.
  • ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟವೆಲ್‌ನಿಂದ ಮುಚ್ಚಿಕೊಳ್ಳಬೇಕು.
  • ಶುಚಿತ್ವವಿಲ್ಲದ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಈ ರೋಗ ನಮಗೆ ತಗುಲುವ ಸಾಧ್ಯತೆಗಳು ಇರುತ್ತವೆ.
  •  ಈಗಾಗಲೇ ಕೋವಿಡ್‌ಗೆ ತುತ್ತಾಗಿ ಗುಣಮುಖರಾಗಿರುವವರು, ಕೋವಿಡ್‌ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಮಾರ್ಗವನ್ನೇ ಅನುಸರಿಸಬೇಕು, ಸ್ಯಾನಿಟೈಜರ್‌ ಬಳಕೆ, ಮಾಸ್ಕ್‌ ಬಳಕೆ ಕಡ್ಡಾಯ ಮಾಡಬೇಕು. ಈಗಾಗಲೇ ಸೋಂಕು ಇರುವವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT