ಕೋವಿಡ್-19 ಮತ್ತು ಹೃದಯಾಘಾತ 
ಆರೋಗ್ಯ

Covid-19 ಮೊದಲ ಅಲೆಯ ಸೋಂಕಿತರಲ್ಲಿ Heart Attack ಅಪಾಯ ಹೆಚ್ಚು: ಅಧ್ಯಯನ!

ಹೊಸ ಅಧ್ಯಯನದ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದ ಆರಂಭಿಕ ಅಂದರೆ ಮೊದಲ ಅಲೆಯಲ್ಲಿ ತೀವ್ರವಾದ ಕೋವಿಡ್ -19 ಸೋಂಕಿಗೆ ಒಳಗಾಗಿದ್ದ ವ್ಯಕ್ತಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು ಅನುಭವಿಸುವ ಅಪಾಯ ಎರಡು ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೋವಿಡ್ ಆತಂಕ ಇನ್ನೂ ಕಡಿಮೆಯಾಗಿಲ್ಲ.. ಒಂದಲ್ಲ ಒಂದು ರೀತಿಯಲ್ಲಿ ಮಾನುಷ್ಯರನ್ನು ಕೋವಿಡ್ ವೈರಸ್ ಕಾಡುತ್ತಲೇ ಇದ್ದು, ಇದೀಗ ಹಾರ್ಟ್ ಅಟ್ಯಾಕ್ ರೂಪದಲ್ಲಿ ಕೋವಿಡ್ ಭೀತಿ ಹೆಚ್ಚಿಸಿದೆ.

ಹೌದು.. ಹೊಸ ಅಧ್ಯಯನದ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದ ಆರಂಭಿಕ ಅಂದರೆ ಮೊದಲ ಅಲೆಯಲ್ಲಿ ತೀವ್ರವಾದ ಕೋವಿಡ್ -19 ಸೋಂಕಿಗೆ ಒಳಗಾಗಿದ್ದ ವ್ಯಕ್ತಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು ಅನುಭವಿಸುವ ಅಪಾಯ ಎರಡು ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

ಆರ್ಟೆರಿಯೊಸ್ಕ್ಲೆರೋಸಿಸ್, ಥ್ರಂಬೋಸಿಸ್ ಮತ್ತು ನಾಳೀಯ ಜೀವಶಾಸ್ತ್ರದ ಜರ್ನಲ್‌ನಲ್ಲಿ ಈ ವಾರ ಪ್ರಕಟವಾದ ಸಂಶೋಧನೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ ಈ ಕುರಿತು ಮಾಹಿತಿ ನೀಡಿದ್ದು, ಹೆಚ್ಚಿದ ಅಪಾಯವು ಮೂರು ವರ್ಷಗಳವರೆಗೆ ಇರುತ್ತದೆ ಎಂದು ಬಹಿರಂಗಪಡಿಸಿದೆ.

ಕೋವಿಡ್ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದರೆ ಕೋವಿಡ್ -19 ಸೋಂಕಿಗೆ ಒಳಗಾದವರು ಹೃದಯಾಘಾತ, ಪಾರ್ಶ್ವವಾಯು ಮತ್ತು ಮರಣವನ್ನು ಅನುಭವಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಅಧ್ಯಯನವು ಕಂಡುಹಿಡಿದಿದೆ. ಇದಲ್ಲದೆ, ವೈರಸ್‌ನಿಂದ ಆಸ್ಪತ್ರೆಗೆ ದಾಖಲಾದವರಿಗೆ, ಅಪಾಯವು ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ ಎಂದು ವರದಿ ಹೇಳಿದೆ.

10 ವರ್ಷಗಳ ಪ್ರಗತಿ ನಾಶ ಮಾಡಿದ ಕೋವಿಡ್!

ಅಧ್ಯಯನದ ಪ್ರಧಾನ ತನಿಖಾಧಿಕಾರಿಯಾದ ಡಾ ಹೂಮನ್ ಅಲ್ಲಾಯೀ ಈ ಬಗ್ಗೆ ಮಾಹಿತಿ ನೀಡಿದ್ದು, 'ತೀವ್ರವಾದ ಕೋವಿಡ್ -19 ನಿಂದ ಉಂಟಾಗುವ ಹೃದಯರಕ್ತನಾಳದ ಬೆದರಿಕೆಗಳನ್ನು ಟೈಪ್ 2 ಮಧುಮೇಹಕ್ಕೆ ಹೋಲಿಸಬಹುದು. "2010 ರಿಂದ 2019 ರವರೆಗಿನ ಹೃದಯರಕ್ತನಾಳದ ಸಮಸ್ಯೆಯಿಂದ ಸಂಭವಿಸಿದ ಮರಣ ಪ್ರವೃತ್ತಿಗಳು ಸ್ಥಿರವಾಗಿ ಕ್ಷೀಣಿಸಿದ್ದವು.

ಆದರೆ ಇದ್ದಕ್ಕಿದ್ದಂತೆ, 2020 ಮತ್ತು 2022 ರ ನಡುವೆ ಅಂದರೆ ಕೋವಿಡ್ -19 ಸೋಂಕಿನ ಕಾರಣದಿಂದ ಹತ್ತು ವರ್ಷಗಳ ಈ ಪ್ರಗತಿಯು ಸಂಪೂರ್ಣವಾಗಿ ನಾಶವಾಯಿತು. ಹೃದಯರಕ್ತನಾಳದ ಸಮಸ್ಯೆ ಅಥವಾ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಾ ಸಾಗಿದೆ ಎಂದು ಹೇಳಿದ್ದಾರೆ.

ಈ ರಕ್ತದ ಗುಂಪುಗಳಿಗೆ ಅಪಾಯ ಹೆಚ್ಚು!

ಸಂಶೋಧನೆಗಳು ನಿರ್ದಿಷ್ಟವಾಗಿ ವಿಭಿನ್ನ ರಕ್ತದ ಪ್ರಕಾರಗಳಿಗೆ ಸಂಬಂಧಿಸಿದ ಅಪಾಯಗಳನ್ನು ಒತ್ತಿಹೇಳುತ್ತವೆ, A, B ಮತ್ತು AB ರಕ್ತದ ಪ್ರಕಾರಗಳನ್ನು ಹೊಂದಿರುವ ವ್ಯಕ್ತಿಗಳು ಕೋವಿಡ್ -19 ನಿಂದ ಹೆಚ್ಚಿದ ಹೃದಯರಕ್ತನಾಳದ ತೊಡಕುಗಳಿಗೆ ಹೆಚ್ಚು ದುರ್ಬಲರಾಗಿರುತ್ತಾರೆ, ಆದರೆ O ಪ್ರಕಾರದ ರಕ್ತ ಹೊಂದಿರುವವರು ಕಡಿಮೆ ಅಪಾಯವನ್ನು ಪ್ರದರ್ಶಿಸುತ್ತಾರೆ ಎಂದು ವರದಿ ಹೇಳಿದೆ.

ಈ ಸಂಶೋಧನೆಗಾಗಿ ಬ್ರಿಟನ್ ನ ಬಯೋಬ್ಯಾಂಕ್‌ನಿಂದ ಡೇಟಾವನ್ನು ಬಳಸಿಕೊಂಡಿದ್ದು, ಆದಾಗ್ಯೂ, ಇತರ ಜನಸಂಖ್ಯಾಶಾಸ್ತ್ರದಲ್ಲಿ ಇದೇ ರೀತಿಯ ಅಧ್ಯಯನಗಳು ಹೋಲಿಸಬಹುದಾದ ಫಲಿತಾಂಶಗಳನ್ನು ನೀಡಿವೆ ಎಂದು ಡಾ.ಹೂಮನ್ ಅಲ್ಲಾಯೀ ಹೇಳಿದ್ದಾರೆ.

ಲಸಿಕೆಗಳದ್ದೇ ನಿರ್ಣಾಯಕ ಪಾತ್ರ

ಇನ್ನು ವ್ಯಾಕ್ಸಿನೇಷನ್‌ಗಳ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದ ಡಾ ಅಲಾಯಿ ಅವರು ಹೇಳಿದರು, "ನೀವು ಯಾವುದೇ ಲಸಿಕೆಯನ್ನು ಪಡೆದರೂ, ಲಸಿಕೆ ಅಥವಾ ಬೂಸ್ಟರ್‌ನ ಕೇವಲ ಆರು ತಿಂಗಳ ನಂತರ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಾಧ್ಯತೆ ಕಡಿಮೆಯಾಗಿದೆ. ಆದರೆ ಕಾಲಾನಂತರದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ, ಅದಕ್ಕಾಗಿಯೇ ನಿಮಗೆ ಬೂಸ್ಟರ್‌ಗಳು ಬೇಕಾಗುತ್ತವೆ. ತೀವ್ರವಾದ ಕೋವಿಡ್-19 ಸೋಂಕು ಹೊಂದಿದ್ದ ವ್ಯಕ್ತಿಗಳು, ವಿಶೇಷವಾಗಿ ಆಸ್ಪತ್ರೆಗೆ ದಾಖಲಾದವರು, ವೈರಸ್‌ನ ಸಂಭಾವ್ಯ ದೀರ್ಘಕಾಲೀನ ಆರೋಗ್ಯ ಪರಿಣಾಮಗಳ ಬಗ್ಗೆ ತಮ್ಮ ವೈದ್ಯರನ್ನು ಸಂಪರ್ಕಿಸಲು ಒತ್ತಾಯಿಸಲಾಗುತ್ತದೆ.

ಕೋವಿಡ್ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ, ಆದ್ದರಿಂದ ನಾವು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಬೇಕು. ನಿಮ್ಮ ವ್ಯಾಕ್ಸಿನೇಷನ್ ಮತ್ತು ಬೂಸ್ಟರ್‌ಗಳು ಮತ್ತು ನಿಯಮಿತ ತಪಾಸಣೆಗಳನ್ನು ಪಡೆದುಕೊಳ್ಳಿ" ಎಂದು ಡಾ ಅಲ್ಲಾಯೀ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT