ಸಂಗ್ರಹ ಚಿತ್ರ 
ಆರೋಗ್ಯ

Winter Skin Care: ಒಣಗಿದ ಚರ್ಮಕ್ಕೆ ಎಣ್ಣೆ ಅಥವಾ ಲೋಷನ್‌.. ಯಾವುದರ ಬಳಕೆ ಉತ್ತಮ?

ಚರ್ಮದ ಆರೈಕೆಗೆ ಎಣ್ಣೆ ಮತ್ತು ಬಾಡಿ ಲೋಷನ್ ಎರಡೂ ಸಹಾಯಕವಾಗಿವೆ, ಆದರೆ ಇವುಗಳ ಕಾರ್ಯವೈಖರಿ ವಿಭಿನ್ನವಾಗಿದೆ.

ಚಳಿಗಾಲ ಬಂತೆಂದರೆ ಸಾಕು, ನಮ್ಮ ತ್ವಚೆಯು ತೇವಾಂಶ ಕಳೆದುಕೊಂಡು ಒಣಗುವುದು, ಬಿರುಕು ಬಿಡುವುದು ಮತ್ತು ತುರಿಕೆ ಉಂಟಾಗುವುದು ಸರ್ವೇಸಾಮಾನ್ಯ. ಇದಕ್ಕೆ ಮುಖ್ಯ ಕಾರಣವೆಂದರೆ ತಣ್ಣನೆಯ ಗಾಳಿ. ಈ ಸಮಯದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆರೈಕೆ ಮತ್ತು ಉತ್ಪನ್ನಗಳ ಬಳಕೆ ಅಗತ್ಯ.

ಚರ್ಮದ ಆರೈಕೆಗೆ ಎಣ್ಣೆ (ದೇಹದ ಎಣ್ಣೆ) ಮತ್ತು ಬಾಡಿ ಲೋಷನ್ ಎರಡೂ ಸಹಾಯಕವಾಗಿವೆ, ಆದರೆ ಇವುಗಳ ಕಾರ್ಯವೈಖರಿ ವಿಭಿನ್ನವಾಗಿದೆ.

ತ್ವಚೆಯ ಆರೈಕೆಗೆ ಎಣ್ಣೆ ಬಳಕೆ ಚರ್ಮಕ್ಕೆ ಆಳವಾದ ಪೋಷಣೆ ನೀಡುತ್ತವೆ. ತೇವಾಂಶವನ್ನು ಚರ್ಮದೊಳಗೆ ಹಿಡಿದಿಡಲು ಸಹಾಯ ಮಾಡುತ್ತವೆ. ಇದು ಚರ್ಮದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತವೆ.

ಎಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡಿದರೆ ಅದು, ಚರ್ಮದ ಆಳಕ್ಕೆ ಇಳಿದು ಅಗತ್ಯ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳನ್ನು ಒದಗಿಸುತ್ತವೆ. ಅಲ್ಲದೆ, ಚರ್ಮದ ಮೇಲೆ ಒಂದು ಪದರವನ್ನು ನಿರ್ಮಿಸಿ, ತೇವಾಂಶವು ಹೊರಹೋಗದಂತೆ ತಡೆಯುವಂತೆ ಮಾಡುತ್ತದೆ. ತೀವ್ರವಾದ ಶುಷ್ಕತೆಯಿಂದ ಉಂಟಾಗುವ ತುರಿಕೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತವೆ. ತ್ವಚೆಗೆ ಆರೋಗ್ಯಕರ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತವೆ.

ಇನ್ನು ಬಾಡಿ ಲೋಷನ್ ಎಣ್ಣೆ ಮತ್ತು ನೀರಿನ ಮಿಶ್ರಣವಾಗಿದ್ದು (emulsion), ಸಾಮಾನ್ಯವಾಗಿ ಗ್ಲಿಸರಿನ್ ಅಥವಾ ಹೈಲುರಾನಿಕ್ ಆಮ್ಲದಂತಹ ಹ್ಯೂಮೆಕ್ಟಂಟ್‌ಗಳನ್ನು ಹೊಂದಿರುತ್ತವೆ.

ಇವು ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇದು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ತ್ವಚೆಯು ಬೇಗನೆ ಹೀರಿಕೊಳ್ಳುತ್ತವೆ. ಲೋಷನ್ ಬಳಕೆ ಚರ್ಮಕ್ಕೆ ತಕ್ಷಣದ ನೀರಿನ ಆಧಾರಿತ ತೇವಾಂಶವನ್ನು ಒದಗಿಸುತ್ತವೆ. ಜಿಡ್ಡಿನಾಂಶವನ್ನು ಕಡಿಮೆ ಇರುತ್ತದೆ. ಬೇಗನೆ ಹೀರಿಕೊಳ್ಳುವುದರಿಂದ ದೈನಂದಿನ ಬಳಕೆಗೆ ಅನುಕೂಲಕರವಾಗಿದೆ.

ಸ್ನಾನದ ನಂತರ ಒದ್ದೆಯಾಗಿರುವ ತ್ವಚೆಗೆ ನೀರಿನ ಆಧಾರಿತ ಲೋಷನ್ ಹಚ್ಚುವುದರಿಂದ ಚರ್ಮದ ಪದರಗಳಿಗೆ ಆಳವಾದ ಹೈಡ್ರೇಶನ್ ಸಿಗುತ್ತದೆ.

ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದ್ದು, ಸಾಮಾನ್ಯ, ಸಂಯೋಜಿತ ಅಥವಾ ಎಣ್ಣೆಯುಕ್ತ ಚರ್ಮದ ಪ್ರಕಾರಗಳಿಗೆ ಹೆಚ್ಚು ಸೂಕ್ತವಾಗಿದೆ. ಕೆಲವೊಮ್ಮೆ ನಿರ್ದಿಷ್ಟ ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಕೂಡ ಇದು ಸಹಾಯ ಮಾಡುತ್ತದೆ.

ಒಟ್ಟಾರೆ ಚಳಿಗಾಲದಲ್ಲಿ ತ್ವಚೆಯಲ್ಲಿ ತೇವಾಂಶ ಮತ್ತು ರಕ್ಷಣೆಗಾಗಿ ಎರಡೂ ಉತ್ಪನ್ನಗಳನ್ನು ಒಟ್ಟಿಗೆ ಬಳಸುವುದು ಉತ್ತಮ ಮಾರ್ಗವಾಗಿದೆ.

ಉತ್ತಮ ಹೀರಿಕೊಳ್ಳುವಿಕೆಗಾಗಿ ಸ್ನಾನದ ನಂತರ ಒದ್ದೆಯಾದ ಚರ್ಮದ ಮೇಲೆ ನಿಮಗೆ ಇಷ್ಟವಾದ ಎಣ್ಣೆಯ ಕೆಲವು ಹನಿಗಳನ್ನು ಹಚ್ಚಿಕೊಳ್ಳಿ. ನಿಮ್ಮ ರಾತ್ರಿಯ ಚರ್ಮದ ಆರೈಕೆಗೆ ರಾಸಾಯನಿಕಗಳಿರುವ ಮಾಯಿಶ್ಚರೈಸರ್ ಬದಲು ತೈಲಗಳನ್ನು ಬಳಸಿ. ರಾತ್ರಿಯಿಡೀ ಈ ತೈಲಗಳು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಿ, ಒಣಗದಂತೆ ಕಾಪಾಡುತ್ತವೆ.

ಚರ್ಮಕ್ಕೆ ತೆಂಗಿನೆಣ್ಣೆ ಬಹಳಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಸೌಂದರ್ಯ ತಜ್ಞರು ಮತ್ತು ವೈದ್ಯರು ಕೂಡ ಚರ್ಮಕ್ಕೆ ಇದನ್ನು ಬಳಸಲು ಶಿಫಾರಸು ಮಾಡುತ್ತಾರೆ. ವಿಶ್ವದ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್‌ಗಳಲ್ಲಿ ಒಂದಾಗಿದೆ.

ಇದು ಚರ್ಮದ ಆಳಕ್ಕೆ ಹೋಗಿ ಚರ್ಮವನ್ನು ಪೋಷಿಸುತ್ತದೆ ಮತ್ತು ದೀರ್ಘಕಾಲದವರೆಗೆ ನಮ್ಮ ಚರ್ಮದ ರಂಧ್ರಗಳನ್ನು ಹೈಡ್ರೀಕರಿಸುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಇದು ಚರ್ಮದ ಉರಿಯೂತವನ್ನು ನಿವಾರಿಸುತ್ತದೆ ಮತ್ತು ದದ್ದುಗಳು ಮತ್ತು ಇತರ ಚರ್ಮದ ಪರಿಸ್ಥಿತಿಗಳನ್ನು ಬಹಳ ಸುಲಭವಾಗಿ ನಿವಾರಿಸುತ್ತದೆ.

ನೀವು ಡ್ರೈ ಅಥವಾ ಸಾಮಾನ್ಯ ಚರ್ಮವನ್ನು ಹೊಂದಿದ್ದರೆ, ತೆಂಗಿನ ಎಣ್ಣೆಯನ್ನು ರಾತ್ರಿಯಿಡೀ ಮಾಯಿಶ್ಚರೈಸರ್ ಆಗಿ ಬಳಸಲು ಪ್ರಾರಂಭಿಸಿ. ಇದು ತುರಿಕೆ, ಶುಷ್ಕತೆ ಮತ್ತು ಅಪೌಷ್ಟಿಕತೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಎಣ್ಣೆ ಚರ್ಮ ಹೊಂದಿರುವವರು ಇದನ್ನು ಬಳಸದೇ ಇರೋದೆ ಉತ್ತಮ, ಏಕೆಂದರೆ ನಿಮ್ಮ ರಂಧ್ರಗಳನ್ನು ಮುಚ್ಚಬಹುದು ಮತ್ತು ಮೊಡವೆ ಸಮಸ್ಯೆಗಳನ್ನು ದೂರಾಗಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಆಪರೇಷನ್ ಟ್ರೈಡೆಂಟ್: ಭಾರತ ಏಕೆ ಡಿಸೆಂಬರ್ 4ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ?

ನನ್ನ ಜ್ಯೋತಿಷಿ ಗುರುಗಳಿಗೆ 4 ನೇ ಹಂತದ ಕ್ಯಾನ್ಸರ್ ಇದೆ: ನಿದ್ರೆ ಇಲ್ಲದ ರಾತ್ರಿ ಕಳೆದಿದ್ದೇನೆ, ಕೌತುಕ ಹುಟ್ಟಿಸಿದ ರಾಜ್ ನಿಡಿಮೋರು ಮಾಜಿ ಪತ್ನಿ!

ಇಂದು ಸಂಜೆ ರಷ್ಯಾ ಅಧ್ಯಕ್ಷ Vladimir Putin ಭಾರತಕ್ಕೆ ಆಗಮನ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

SCROLL FOR NEXT