ಸಂಗ್ರಹ ಚಿತ್ರ 
ಆರೋಗ್ಯ

Apple cider vinegar ಬಗ್ಗೆ ಎಷ್ಟು ಗೊತ್ತು? ಇದರಲ್ಲಿರುವ ಆರೋಗ್ಯ ಪ್ರಯೋಜನೆಗಳೇನು..?

ಆ್ಯಪಲ್ ಸೈಡರ್ ವಿನೆಗರ್ ಅಸಿಟಿಕ್ ಆಮ್ಲವಿದ್ದು, ಇದು ಅದರ ಅನೇಕ ಚಿಕಿತ್ಸಕ ಪರಿಣಾಮಗಳಿಗೆ ಕಾರಣವಾಗಿದೆ. ಇದು ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಸಹ ಹೊಂದಿದೆ.

ಒತ್ತಡದ ಕೆಲಸದಿಂದ ಹಲವರು ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದು, ಈ ನಡುವಲ್ಲೇ ಜನರಲ್ಲಿ ಆರೋಗ್ಯ ಕಾಳಜಿ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಆರೋಗ್ಯಯುತ ಆಹಾರ ಬಗ್ಗೆ ಜನರು ಹೆಚ್ಚು ಮಾತುನಾಡುತ್ತಿದ್ದು, ಈ ಪೈಕಿ ಆ್ಯಪಲ್ ಸೈಡರ್ ವಿನೆಗರ್ (ACV) ಸಾಕಷ್ಟು ಮಂದಿ ಮಾತನಾಡುತ್ತಿದ್ದಾರೆ. ಈ ಆ್ಯಪಲ್ ಸೈಡರ್ ವಿನೆಗರ್ ಸೂಪರ್‌ಫುಡ್‌ಗಳಲ್ಲಿ ಒಂದಾಗಿದ್ದು, ತೂಕ ಇಳಿಸುವುದರಿಂದ ಹಿಡಿದು ಚರ್ಮದ ಆರೈಕೆವರೆಗೆ ಚಿಕಿತ್ಸೆ ಪಡೆಯಲಾಗುತ್ತಿದೆ.

ಆದರೆ, ಈ ಆ್ಯಪಲ್ ಸೈಡರ್ ವಿನೆಗರ್ ಬಗ್ಗೆ ಸಾಕಷ್ಟು ಸತ್ಯ ಮತ್ತು ಮಿಥ್ಯಗಳ ಕುರಿತಂತೆಯೂ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಇಷ್ಟು ಆಪಲ್ ಸೈಡರ್ ವಿನೆಗರ್ ಅಂದರೇನು..? ಇದರಲ್ಲಿರುವ ಆರೋಗ್ಯ ಪ್ರಯೋಜನಗಳೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ...

ಆ್ಯಪಲ್ ಸೈಡರ್ ವಿನೆಗರ್ ಎಂಬುದು ಸೇಬು, ಸಕ್ಕರೆ ಮತ್ತು ಯೀಸ್ಟ್‌ನಿಂದ ತಯಾರಿಸಿದ ಹುದುಗಿಸಿದ ಉತ್ಪನ್ನವಾಗಿದೆ. ಆ್ಯಪಲ್ ಸೈಡರ್ ವಿನೆಗರ್ ಅನ್ನು ಎರಡು ಹಂತಗಳಲ್ಲಿ ಸೇಬಿನ ರಸವನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ. ಮೊದಲು ನೈಸರ್ಗಿಕ ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸಿ ಸೈಡರ್ ಅನ್ನು ರೂಪಿಸಲಾಗುತ್ತದೆ. ನಂತರ, ಸೇಬಿನ ರಸವನ್ನು ಮತ್ತಷ್ಟು ಹುದುಗುವಿಕೆಯ ಮೂಲಕ, ಆಲ್ಕೋಹಾಲ್ ಅಸಿಟಿಕ್ ಆಮ್ಲವಾಗಿ ಬದಲಿಸಲಾಗುತ್ತಿದೆ, ಇದು ಬಲವಾದ ವಾಸನೆ ಮತ್ತು ರುಚಿಯನ್ನು ನೀಡುತ್ತದೆ.

ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು, ತೂಕ ನಷ್ಟವನ್ನು ಬೆಂಬಲಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುವುದು ಸೇರಿದಂತೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಇದರಲ್ಲಿ ಅಸಿಟಿಕ್ ಆಮ್ಲವಿದ್ದು, ಇದು ಅದರ ಅನೇಕ ಚಿಕಿತ್ಸಕ ಪರಿಣಾಮಗಳಿಗೆ ಕಾರಣವಾಗಿದೆ. ಇದು ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಸಹ ಹೊಂದಿದೆ, ಇದು ಕರುಳಿನ ಸೂಕ್ಷ್ಮಜೀವಿಯನ್ನು ಸಮತೋಲನಗೊಳಿಸಲು ಮತ್ತು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮತ್ತು ಮಧುಮೇಹ ನಿಯಂತ್ರಣ

ಆ್ಯಪಲ್ ಸೈಡರ್ ವಿನೆಗರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಊಟದ ನಂತರದ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕಾಗಿ ಆ್ಯಪಲ್ ಸೈಡರ್ ವಿನೆಗರ್ ಹೆಸರಾಗಿದೆ.

ತೂಕ ನಷ್ಟ

ತೂಕ ನಷ್ಟದ ವಿಚಾರದಲ್ಲಿ ಸಾಕಷ್ಟು ಮಂದಿ ಆ್ಯಪಲ್ ಸೈಡರ್ ವಿನೆಗರ್ ಬಗ್ಗೆ ಹೇಳುತ್ತಾರೆ. ಆ್ಯಪಲ್ ಸೈಡರ್ ವಿನೆಗರ್ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. 2009ರಲ್ಲಿ ನಡೆದ ಅಧ್ಯಯನ ಕೂಡ ಇದನ್ನು ಸಾಬೀತುಪಡಿಸಿದೆ. ಆದರೆ, ಹಾರ್ವರ್ಡ್ ಹೆಲ್ತ್ ಸೇರಿದಂತೆ ಇತರೆ ತಜ್ಞರು ಇದನ್ನು ಒಪ್ಪಿಲ್ಲ. ಅಸಿಟಿಕ್ ಆಮ್ಲವು ಚಯಾಪಚಯ ಕ್ರಿಯೆಯನ್ನು ಸ್ವಲ್ಪ ಹೆಚ್ಚಿಸಬಹುದು. ಆದರೆ, ತೂಕ ಇಳಿಕೆಗೆ ಇದು ನಿರ್ಣಾಯಕವಾಗಿಲ್ಲ. ACV ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಆದರೆ, ಕ್ಯಾಲೋರಿ-ನಿಯಂತ್ರಿತ ಆಹಾರ ಮತ್ತು ನಿಯಮಿತ ವ್ಯಾಯಾಮಕ್ಕೆ ಪರ್ಯಾಯವಲ್ಲ ಎಂದು ಹೇಳಿದ್ದಾರೆ.

ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ

ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಆ್ಯಪಲ್ ಸೈಡರ್ ವಿನೆಗರ್ ಸೇವನೆ ಮಾಡಿದರೆ, ಆಗ ಇದರಿಂದ ಬ್ಯಾಕ್ಟೀರಿಯಾ ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗುವುದು. ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಒಳ್ಳೆಯದು. ಮಧುಮೇಹಿಯಾಗಿದ್ದರೆ, ಆಗ ವೈದ್ಯರಿಂದ ಸಲಹೆ ಪಡೆದುಕೊಂಡು ಇದರ ಬಳಿಕ ಆಹಾರ ಕ್ರಮದಲ್ಲಿ ಇದನ್ನು ಬಳಸಿಕೊಂಡರೆ ಉತ್ತಮ.

ಆಪಲ್ ಸೈಡರ್ ವಿನೆಗರ್ ಎಷ್ಟು ಸುರಕ್ಷಿತ

  • ವ್ಯಕ್ತಿ ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಅನುಗುಣವಾಗಿ ಆ್ಯಪಲ್ ಸೈಡರ್ ವಿನೆಗರ್ ನ ಪರಿಣಾಮ ಉಂಟಾಗಬಹುದು. ನೀರಿಗೆ ಹಾಕಿಕೊಂಡು 1-2 ಚಮಚದಷ್ಟು ಆಪಲ್ ಸೈಡರ್ ವಿನೆಗರ್ ನ್ನು ಸೇವನೆ ಮಾಡಿದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

  • 2 ಚಮಚಕ್ಕಿಂತಲೂ ಹೆಚ್ಚು ಸೇವನೆ ಮಾಡಿದರೆ, ಹಲ್ಲುಗಳು ಸವೆದು, ಗಂಟಲಲ್ಲಿ ಕಿರಿಕಿರಿ, ಜೀರ್ಣಕ್ರಿಯೆ ಸಮಸ್ಯೆಗಳನ್ನು ಹೆಚ್ಚುತ್ತದೆ.

ಬಳಕೆ ಹೇಗೆ..?

  • ಯಾವಾಗಲೂ ಆ್ಯಪಲ್ ಸೈಡರ್ ವಿನೇಗರ್ ಅನ್ನು ನೀರಿನಲ್ಲಿ ಬೆರೆಸಿ ಸೇವಿಸುವುದು ಸುರಕ್ಷಿತ ವಿಧಾನವಾಗಿದೆ. ಆದಷ್ಟು ಅದನ್ನು ತೆಳು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವೆಂದರೆ ಇದು ನೇರವಾಗಿ ನಿಮ್ಮ ಹಲ್ಲುಗಳು ಮತ್ತು ಈಸೋಫೇಗಸ್ ಅನ್ನು ಹಾಳು ಮಾಡುತ್ತದೆ.

  • ಆಹಾರದೊಂದಿಗೆ ಆ್ಯಪಲ್ ಸೈಡರ್ ವಿನೇಗರ್ ಅನ್ನು ತೆಗೆದುಕೊಳ್ಳುವುದು ಸುರಕ್ಷಿತ ವಿಧಾನವಾಗಿದೆ. ಇಲ್ಲದಿದ್ದರೆ ಕೆಲವು ಹಾನಿಕರ ಅಡ್ಡ ಪರಿಣಾಮಗಳಿಗೆ ತುತ್ತಾಗಬೇಕಾಗುತ್ತದೆ.

  • ಅತಿಯಾಗಿ ಆ್ಯಪಲ್ ಸೈಡರ್ ವಿನೆಗರ್ ಸೇವನೆ ಮಾಡಲು ಹೋಗಬಾರದು. ಇದು ದೇಹಕ್ಕೆ ತುಂಬಾ ಅನಾರೋಗ್ಯಕರ ಮತ್ತು ಹಾನಿಕರ. ವಿಶೇಷವಾಗಿ ಎದೆಯ ಭಾಗದಲ್ಲಿ ಉರಿ ಕಂಡು ಬರುತ್ತದೆ.

  • ಊಟ ಆದ ತಕ್ಷಣ ಆ್ಯಪಲ್ ಸೈಡರ್ ವಿನಿಗರ್ ಸೇವನೆ ಬೇಡ.

  • ಆಪಲ್ ಸೈಡರ್ ವಿನಿಗರ್ ಅನ್ನು ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿಗಾಗಿ ಊಟ ಆದ ತಕ್ಷಣ ಯಾವುದೇ ಕಾರಣಕ್ಕೂ ಸೇವನೆ ಮಾಡಲು ಹೋಗಬೇಡಿ. ಬೆಳಗಿನ ಉಪಹಾರ ಮಾಡುವುದಕ್ಕೆ ಮುಂಚೆ ಅಥವಾ ಊಟಕ್ಕೆ ಮುಂಚೆ ಇದರ ಸೇವನೆ ಮಾಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಷ್ಟ್ರಪತಿಗಳು, ರಾಜ್ಯಪಾಲರು ಮಸೂದೆ ಅಂಗೀಕರಿಸಲು ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ, ಹಾಗೆಂದು ಅನಿರ್ದಿಷ್ಟಾವಧಿಯವರೆಗೆ ವಿಳಂಬ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)

ಗಗನಯಾನ: 80 ಸಾವಿರ ಪರೀಕ್ಷೆಗಳು ಮುಗಿದಿವೆ, ಯಾವುದೇ ಸಮಯದಲ್ಲಿ ಉಡಾವಣೆಗೆ ಸಿದ್ಧ

ಬಿಹಾರ ಸೋಲಿನಿಂದ ಕಂಗೆಟ್ಟ ಕೈ ಪಡೆ: ಒಡೆದು ಛಿದ್ರವಾಯ್ತಾ INDIA ಒಕ್ಕೂಟ- ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ?

SCROLL FOR NEXT