ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುತ್ತೀರಾ? AI Image
ಆರೋಗ್ಯ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಗೆ ಸರಿಯಾದ ವಿಧಾನ ಇಲ್ಲಿದೆ!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ, ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಆದರೆ, ತಜ್ಞರು ಬರೀ ಬಾಳೆಹಣ್ಣನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ, ಅದನ್ನು ಬೇರೆ ಆಹಾರಗಳೊಂದಿಗೆ ಸೇರಿಸಿ ತಿನ್ನುವುದು ಪ್ರಯೋಜನಕಾರಿ ಎನ್ನುತ್ತಾರೆ.

Health Tips: ಬೆಳಗ್ಗೆ ಎದ್ದ ತಕ್ಷಣ ಒಂದು ಬಾಳೆಹಣ್ಣು ತಿಂದರೆ ದಿನವಿಡೀ ಚುರುಕಾಗಿರಬಹುದು ಎಂದು ಹೆಚ್ಚಿನವರು ನಂಬುತ್ತಾರೆ. ತ್ವರಿತ ಶಕ್ತಿ ನೀಡುವುದರಿಂದ ಹಿಡಿದು ಜೀರ್ಣಕ್ರಿಯೆ ಸುಧಾರಿಸುವವರೆಗೆ ಬಾಳೆಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿರುವುದು ನಿಜವೇ ಆದರೂ, ಖಾಲಿ ಹೊಟ್ಟೆಯಲ್ಲಿ ಇದನ್ನು ಒಂಟಿಯಾಗಿ ಸೇವಿಸುವುದು ನಿಮ್ಮ ದೇಹದ ಮೇಲೆ ಅನಿರೀಕ್ಷಿತ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಾ? ಕೆಲವರಲ್ಲಿ ಇದು ಆಸಿಡಿಟಿ, ಹೊಟ್ಟೆ ಉಬ್ಬರ ಮತ್ತು ದಿಢೀರ್ ಆಯಾಸಕ್ಕೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಬಾಳೆಹಣ್ಣಿನ ಸಂಪೂರ್ಣ ಲಾಭ ಪಡೆಯಲು ಅದನ್ನು ಬೆಳಗಿನ ಸಮಯದಲ್ಲಿ ಹೇಗೆ ತಿನ್ನಬೇಕು? ನಿಮ್ಮ ಆರೋಗ್ಯವನ್ನು ಕಾಪಾಡುವ ಆ ಸೂಕ್ತ ವಿಧಾನ ಇಲ್ಲಿದೆ ನೋಡಿ.

ಆರೋಗ್ಯ ಲಾಭಗಳೇನು?

  • ತ್ವರಿತ ಎನರ್ಜಿ: ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಗಳಾದ ಗ್ಲುಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಅಧಿಕವಾಗಿವೆ. ಇವು ರಾತ್ರಿಯ ಉಪವಾಸದ ನಂತರ ದೇಹಕ್ಕೆ ತಕ್ಷಣದ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತವೆ. ವಿಶೇಷವಾಗಿ ಬೆಳಗ್ಗೆ ವರ್ಕೌಟ್ ಅಥವಾ ವ್ಯಾಯಾಮ ಮಾಡುವವರಿಗೆ ಇದು ಅತ್ಯುತ್ತಮ ಪ್ರಿ-ವರ್ಕೌಟ್ ಆಹಾರವಾಗಿದೆ. 

  • ಜೀರ್ಣಕ್ರಿಯೆಗೆ ಉತ್ತಮ: ಇದರಲ್ಲಿರುವ ಕರಗುವ ನಾರಿನಂಶ ಮತ್ತು ಪೆಕ್ಟಿನ್ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

  • ರಕ್ತದೊತ್ತಡ ನಿಯಂತ್ರಣ: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ದೇಹದಲ್ಲಿನ ಸೋಡಿಯಂ ಮಟ್ಟವನ್ನು ಸಮತೋಲನದಲ್ಲಿಟ್ಟು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತದೆ.

  • ಮಾನಸಿಕ ಆರೋಗ್ಯ ಮತ್ತು ಮೂಡ್ ಸುಧಾರಣೆ: ಇದರಲ್ಲಿರುವ ವಿಟಮಿನ್ ಬಿ6 ಮೆದುಳಿನಲ್ಲಿ ಸೆರೊಟೋನಿನ್ (ಹ್ಯಾಪಿ ಹಾರ್ಮೋನ್) ಉತ್ಪತ್ತಿಗೆ ಸಹಾಯ ಮಾಡುತ್ತದೆ. ಇದು ದಿನದ ಆರಂಭದಲ್ಲಿ ನಿಮ್ಮ ಮೂಡ್ ಅನ್ನು ಉತ್ಸಾಹದಿಂದ ಇಡುತ್ತದೆ.

ಮುಂದುವರೆದು, ಬಾಳೆಹಣ್ಣು ಅತ್ಯಂತ ಪೌಷ್ಟಿಕಯುಕ್ತ ಹಣ್ಣಾಗಿದ್ದರೂ, ಬರೀ ಹೊಟ್ಟೆಯಲ್ಲಿ ಇದನ್ನು ಮಾತ್ರ ಸೇವಿಸಿದಾಗ ಕೆಲವರಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ,  ಬರೀ ಹೊಟ್ಟೆಯಲ್ಲಿ ಹಣ್ಣನ್ನು ತಿಂದಾಗ ಅದರಲ್ಲಿರುವ ಸಕ್ಕರೆ ಅಂಶವು ರಕ್ತಕ್ಕೆ ಬೇಗನೆ ಹೀರಲ್ಪಡುತ್ತದೆ. ಇದರಿಂದ ತಕ್ಷಣ ಶಕ್ತಿ ಸಿಕ್ಕರೂ, ಸ್ವಲ್ಪ ಸಮಯದ ನಂತರ ಸುಸ್ತು ಅಥವಾ ನಿರಾಸಕ್ತಿ ಮೂಡಬಹುದು. ಮಧುಮೇಹ ಇರುವವರು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಾರದು. ಇದರೊಂದಿಗೆ, ಬಾಳೆಹಣ್ಣು ಕೊಂಚ ಆಸಿಡಿಟಿ ಗುಣ ಹೊಂದಿದ್ದು, ಇದರಲ್ಲಿ ಮೆಗ್ನೀಶಿಯಂ ಕೂಡ ಹೆಚ್ಚಿರುತ್ತದೆ. ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಇದು ಖಾಲಿ ಹೊಟ್ಟೆಯಲ್ಲಿ ತಿಂದಾಗ ಹೊಟ್ಟೆ ಉಬ್ಬರ ಅಥವಾ ಆಸಿಡಿಟಿಯನ್ನು ಉಂಟುಮಾಡಬಹುದು.

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುತ್ತೀರಾ?

ಹಾಗಾದ್ರೆ, ಸರಿಯಾದ ವಿಧಾನ ಯಾವುದು?

ಬಾಳೆಹಣ್ಣಿನ ಸಂಪೂರ್ಣ ಲಾಭ ಪಡೆಯಲು, ಅದನ್ನು ಖಾಲಿ ಹೊಟ್ಟೆಯಲ್ಲಿ ಒಂಟಿಯಾಗಿ ತಿನ್ನುವ ಬದಲು, ನೆನೆಸಿದ 3-4 ಬಾದಾಮಿ ಅಥವಾ ವಾಲ್‌ನಟ್ಸ್‌ಗಳೊಂದಿಗೆ ತಿನ್ನಿ. ಅಥವಾ ಓಟ್ಸ್, ಮೊಸರು ಅಥವಾ ಸ್ಮೂಥಿ ರೂಪದಲ್ಲಿ ಸೇವಿಸಿ. ಯಾಕಂದ್ರೆ, ಇದು ಹಣ್ಣಿನಲ್ಲಿರುವ ಸಕ್ಕರೆಯನ್ನು ದೇಹವು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ ಮತ್ತು ದಿನವಿಡೀ ಸ್ಥಿರವಾದ ಶಕ್ತಿಯನ್ನು ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ: ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ, ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ!

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ