ಹೊರನಾಡು ಕನ್ನಡಿಗ

ವಿಕಿಪೀಡಿಯಾ ಅಂತರ್ಜಾಲ ಕನ್ನಡ ಕಮ್ಮಟ

ಮುಂಬಯಿ: ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯನ್ನು ತುರ್ತಾಗಿ ಅಳವಡಿಸಿಕೊಳ್ಳಬೇಕು. ಕನ್ನಡ ಜನತೆಗೆ ಬೇಕಾದ ಪ್ರಪಂಚ ಜ್ಞಾನವನ್ನು ಒದಗಿಸಿಕೊಡುವುದು ವರ್ತಮಾನದ ತುರ್ತ ಆಗಿದ್ದು ಮಾಹಿತಿ, ಸಾಹಿತ್ಯ ರಚನೆಯಲ್ಲಿ ಸಾಹಿತಿಗಳು, ಲೇಖಕರು ಕೈ ಜೋಡಿಸಬೇಕು ಎಂಬುದು ವಿಕಿಪೀಡಿಯಾ ಕನ್ನಡ ವಿಭಾಗದ ಸಂಚಾಲಕ, ವಿಜ್ಞಾನಿ ಡಾ. ಪವನಜ ಅವರು ಮನವಿ ಮಾಡಿಕೊಂಡಿದ್ದಾರೆ.
ಮುಂಬೈ ವಿವಿ ಕನ್ನಡ ವಿಭಾಗ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ವಿಕಿಪೀಡಿಯಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಅವರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಲೇಖನ ರಚನೆಯನ್ನು ಮಾಡುವ ಬಗ್ಗೆ ತಿಳಿಯಪಡಿಸಿದರು. ಅವರು ಇಂಟರ್‌ನೆಟ್ ಬರವಣಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟು ಮಾತನಾಡಿ ಕನ್ನಡವನ್ನು ಉಳಿಸಬೇಕಾದರೆ ನಾವು ಅದನ್ನು ಬಳಸಬೇಕು. ಅದಕ್ಕಾಗಿ ಕನ್ನಡದಲ್ಲಿ ಅಂತರ್ಜಾಲ ಉಪಯೋಗಿಸಬೇಕು. ವಿಕಿಪೀಡಿಯಾವು ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶ ಎಂದು ಅವರು ನುಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೊನಿಡಾ ಪ್ರೆಸ್ ಮೀಡಿಯಾ ಇದರ ಕಾರ್ಯಾಧ್ಯಕ್ಷ ರೋನ್ಸ್ ಬಂಟ್ವಾಳ್ ಅವರು ಅಂತರ್ಜಾಲ ಬರವಣಿಗೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಾ ವಿಕೀಪೀಡಿಯಾದಂತಹ ಮಾಧ್ಯಮಗಳು ಭಾಷೆಗಳನ್ನು ಬೆಸೆಯುತ್ತಾ ಸಂಬಂಧಗಳನ್ನು ರೂಪಿಸುತ್ತವೆ. ವಿವಿಧತೆಗಳ ವಿವರಣೆಗಳನ್ನು ತಿಳಿಸುತ್ತದೆ ಎಂದರು. ಸಾಹಿತಿ ವಿ.ಗ ನಾಯಕ ಅವರು ಬರವಣಿಗೆಯನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದರು.
ವಿಕಿಪೀಡಿಯಾದ ಸಕ್ರಿಯ ಲೇಖಕರಾದ ಲಕ್ಷೀ ವೆಂಕಟೇಶ್, ಪತ್ರಕರ್ತೆ ಸೀತಾಲಕ್ಷ್ಮಿ ಕರ್ಕಿಕೋಡಿ ಮತ್ತು ಎಂ.ಎ, ಎಂ.ಫಿಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆ. ನಳಿನ ಸ್ವಾಗತಿಸಿ ನಿರೂಪಿಸಿದರು. ಡಾ. ಜಿ.ಎನ್. ಉಪಾಧ್ಯ ಪ್ರಾಸ್ತಾವಿಕ ಭಾಷಣಗೈದರು. ವಿಭಾಗದ ಸಂಶೋಧನಾ ಸಹಾಯಕಿ ಪೂರ್ಣಿಮಾ ಎಸ್. ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್