ಆರ್.ಅಶೋಕ್ 
ಸಂದರ್ಶನ

ಬಿಜೆಪಿ ಬಿಬಿಎಂಪಿಯನ್ನು ಆಡಳಿತಾತ್ಮಕವಾಗಿ ವಿಭಜಿಸುವ ಉದ್ದೇಶ ಹೊಂದಿತ್ತು : ಆರ್.ಅಶೋಕ್

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಭಜನೆ ಪ್ರಸ್ತಾಪ ಮಾಡಿದ್ದು ನಿಜ. ಆದರೆ ಬಿಬಿಎಂಪಿಯನ್ನು...

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಭಜನೆ ಪ್ರಸ್ತಾಪ ಮಾಡಿದ್ದು ನಿಜ. ಆದರೆ ಬಿಬಿಎಂಪಿಯನ್ನು ಭೌಗೋಳಿಕವಾಗಿ ವಿಭಜಿಸುವುದು ನಮ್ಮ ಪಕ್ಷದ ಉದ್ದೇಶವಾಗಿರಲಿಲ್ಲ. ಆಡಳಿತಾತ್ಮಕವಾಗಿ ವಿಭಜನೆ ಮಾಡುವುದು ನಮ್ಮ ಉದ್ದೇಶವಾಗಿತ್ತು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಹೇಳಿದ್ದಾರೆ.

ಕನ್ನಡಪ್ರಭ.ಕಾಮ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿಬಿಎಂಪಿ ವಿಭಜನೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪಕ್ಷದ ನಿರ್ಧಾರವನ್ನು ಆರ್ ಅಶೋಕ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಬಿಬಿಎಂಪಿ ವಿಭಜನೆ ಪ್ರಸ್ತಾಪ ಮಾಡಿದ್ದೆ ನಿಮ್ಮ ಪಕ್ಷ. ಈಗ ನೀವೇ ವಿರೋಧಿಸುವುದು ಎಷ್ಟು ಸರಿ?
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಎಲ್ಲಾ ನಾಗರಿಕರಿಗೂ ಸರ್ಕಾರದ ಸವಲತ್ತು ನೀಡುವ ಉದ್ದೇಶದಿಂದ ಬಿಬಿಎಂಪಿಯನ್ನು ಆಡಳಿತಾತ್ಮಕವಾಗಿ ವಿಭಜನೆ ಪ್ರಸ್ತಾಪ ಮಾಡಿದ್ದೇವು. ಆದರೆ. ಭೌಗೋಳಿಕವಾಗಿ ವಿಭಜನೆ ಮಾಡುವ ಪ್ರಸ್ತಾಪ ಇರಲಿಲ್ಲ.

ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿ ವಿಭಜನೆ ಅಗತ್ಯ ಎನ್ನುತ್ತಿದೆ ಸರ್ಕಾರ?
ಹಲವು ದಶಕಗಳ ಇತಿಹಾಸವಿರುವ ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಬ್ರಾಂಡ್ ನೇಮ್ ಇದೆ. ಬೆಂಗಳೂರನ್ನು ಭೌಗೋಳಿಕವಾಗಿ ವಿಭಜಿಸುವುದರಿಂದ ಸಮಸ್ಯೆ ಹೆಚ್ಚುತ್ತದೆ. ಜೊತೆಗೆ ಅನಗತ್ಯ ದುಂದು ವೆಚ್ಚವಾಗುತ್ತದೆ. ಮೂರು ಮೇಯರ್, ಮೂರು ಕಮಿಷನರ್, ಅವರ ನಿರ್ವಹಣ ವೆಚ್ಚ ಹೆಚ್ಚುತ್ತದೆಯೇ ಹೊರತು ನಾಗರಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಜನರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತದೆ. ಅದರ ಬದಲು ವಲಯವಾರು ಆಡಳಿತಕ್ಕೆ ಹೆಚ್ಚಿನ ಒತ್ತು ಕೊಟ್ಟು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

ಬಿಬಿಎಂಪಿ ವಿಭಜನೆ ಹಿಂದಿನ ಉದ್ದೇಶವೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಜಾತಿ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದ್ದಾರೆ.  ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ.  ಮಕ್ಕಳ ಶೈಕ್ಷಣಿಕ ಪ್ರವಾಸ, ಶಾದಿ ಭಾಗ್ಯ, ಜಾತಿ ಗಣತಿಯಂತ ಕಾರ್ಯಕ್ರಮಗಳಿಂದ ಜಾತಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವಿಭಜನೆ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ಬಿಬಿಎಂಪಿ ವಿಭಜನೆ ವಿರುದ್ಧದ ನಿಮ್ಮ ಮುಂದಿನ ಹೋರಾಟ?
ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶ ಪ್ರಶ್ನಿಸಿ ಇನ್ನೊಂದು ವಾರದಲ್ಲಿ ಸುಪ್ರಿಂ ಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ. ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ನಮ್ಮ ಪರವೇ ಆದೇಶ ಬರುವ ಭರವಸೆಯಿದೆ.

ಬಿಜೆಪಿ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಇದೆ?
ಕಾಂಗ್ರೆಸ್್ನವರು ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ದುರುಪಯೋಗ ಪಡಿಸಿಕೊಂಡು, ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ರು. ನಾವು ಯಾವುದೇ ಕಾರಣಕ್ಕೂ ಅಂತ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ. ನಮಗೆ ಸಂವಿಧಾನದ ಮೇಲೆ ಗೌರವವಿದೆ. ಹೀಗಾಗಿ ದುರುಪಯೋಗ ಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅರ್ಕಾವತಿ ಡಿ ನೋಟಿಫಿಕೇಷನ್ ವಿಚಾರದಲ್ಲಿ ಗವರ್ನರ್ ರನ್ನು ಎಷ್ಟು ಬಾರಿ ಭೇಟಿ ಮಾಡಿದ್ರೂ ಇನ್ನೂ ನಮ್ಮ ಅರ್ಜಿ ಸ್ವೀಕರಿಸಿಯೇ ಇಲ್ಲ.

ಬಿಜೆಪಿಯವರು ಯಾವುದೇ ಹೋರಾಟ ಕೈಗೊಂಡರು ಪೂರ್ಣಗೊಳಿಸುವುದಿಲ್ಲ. ಅರ್ಧಕ್ಕೆ ನಿಲ್ಲಿಸುತ್ತಾರೆ ಯಾಕೆ?
ಕೈಗೊಂಡ ಯಾವುದೇ ಹೋರಾಟವನ್ನು ಅರ್ಧಕ್ಕೆ ಬಿಡುವ ಜಾಯಮಾನ ಬಿಜೆಪಿಯದ್ದಲ್ಲ. ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ಹೋರಾಟ ನಡೆಸಿ ಯಶಸ್ವಿಗಿದ್ದೇವೆ. ಬಿಬಿಎಂಪಿ ತ್ರಿವಿಭಜನೆ ಹೋರಾಟದಲ್ಲೂ ಕೂಡ ಹೋರಾಟ ನಡೆಸುತ್ತೇವೆ. ಅರ್ಕಾವತಿ ಡಿ ನೋಟಿಪಿಕೇಷನ್ ಸಂಬಂಧ ಕೇಂದ್ರದ ವರಿಷ್ಠರ ಮಾರ್ಗದರ್ಶನದಂತೆ ಹೋರಾಟದ ರೂಪುರೇಷೆ ಮಾಡುತ್ತೇವೆ.

ಸರ್ಕಾರ ವಿಧಾನ ಪರಿಷತ್ ವಿಸರ್ಜಿಸುವ ಬೆದರಿಕೆ ಹಾಕಿದೆ ಅಂತೆ?
ಯಾವುದೇ ಕಾರಣಕ್ಕೂ ವಿಧಾನ ಪರಿಷತ್ನಲ್ಲಿ ಬಿಬಿಎಂಪಿ ತ್ರಿವಿಭಜನೆ ವಿಧೇಯಕ ಅಂಗೀಕಾರವಾಗಲು ಬಿಡುವುದಿಲ್ಲ. ಆಯ್ಕೆ ಸಮಿತಿ ರಚನೆ ಮಾಡುವಂತೆ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಮನವಿ ಮಾಡಿದ್ದೇವೆ. ಪರಿಷತ್ ವಿಸರ್ಜನೆ ಮಾಡುತ್ತೀವಿ ಎನ್ನುವ ಸಿಎಂ ಬೆದರಿಕೆ ತಂತ್ರಕ್ಕೆ ನಾವು ಜಗ್ಗಲ್ಲ.

ಕಸದ ಸಮಸ್ಯೆಗೆ ನಿಮ್ಮ ಸರ್ಕಾರವಿದ್ದಾಗಲೂ ಪರಿಹಾರ ಸಿಗಲಿಲ್ಲ?
40 ವರ್ಷದ ಆಡಳಿತಾವಧಿಯಲ್ಲಿ ಬಿಜೆಪಿ ಕೇವಲ 5 ವರ್ಷ ಮಾತ್ರ ಆಡಳಿತ ನಡೆಸಿದೆ, ಉಳಿದ 35 ವರ್ಷಗಳು ಕಾಂಗ್ರೆಸ್ ಸರ್ಕಾರವೇ ಅಧಿಕಾರ ನಡೆಸಿದೆ. 35 ವರ್ಷದ ಕಸದ ಸಮಸ್ಯೆಯನ್ನು ನಮ್ಮ ಸರ್ಕಾರದ ತಲೆ ಮೇಲೆ ಹಾಕಿ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ವಾದ್ರೂ ಕಸ ವಿಲೇವಾರಿ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ವಿಭಜನೆ ವಿಷಯದಲ್ಲಿ ಸರ್ಕಾರಕ್ಕೆ ನಿಮ್ಮ ಸಲಹೆ ಏನು?
ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಯಾವುದೇ ಕಾರಣಕ್ಕೂ ಹೋಳಾಗಲು ಬಿಡುವುದಿಲ್ಲ. ಬೆಂಗಳೂರು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಮಗ್ರವಾಗಿ ಒಂದಾಗಿಯೇ ಇರಬೇಕು.  ಅಭಿವೃದ್ಧಿಗೆ ವಿಭಜನೆಯೊಂದೇ ಪರಿಹಾರವಲ್ಲ.  ಸಿದ್ದರಾಮಯ್ಯ ಜನರ ನಾಡಿ ಮಿಡಿತ ಅರ್ಥ ಮಾಡಿಕೊಳ್ಳಬೇಕು. ವಿಭಜನೆ ವಿಚಾರವನ್ನು ಸಾರ್ವಜನಿಕ ಚರ್ಚೆಗೆ  ನೀಡಿ, ಸಾಧಕ, ಬಾಧಕಗಳ ಬಗ್ಗೆ ಮಾಹಿತಿ ಸಂಗ್ರಹಿಸಿ,  ಅನಂತರ ಸರ್ಕಾರ ವಿಭಜನೆ ಪ್ರಸ್ತಾಪ ಮಾಡಬೇಕಿತ್ತು.  ಬೆಂಗಳೂರು ಒಡೆದು ಹೋಳಾಗಬಾರದು ಎಂಬುದೇ ನನ್ನ ಆಶಯ.

- ಶಿಲ್ಪ ಡಿ.ಚಕ್ಕೆರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT