ಅರವಿಂದ ವಿ.ಕೆ 
ಸಂದರ್ಶನ

ಯುನಿಕೋಡ್ ಕನ್ವರ್ಟರ್ ತಂತ್ರಾಂಶ: ಕನ್ನಡಕ್ಕೆ ಅರವಿಂದ ವಿಕೆ ಅನನ್ಯ ಕೊಡುಗೆ

ನುಡಿ ಅಥವಾ ಬರಹದಲ್ಲಿ ಬರೆದದ್ದನ್ನು ಯುನಿಕೋಡ್ ಗೆ ಕನ್ವರ್ಟ್ ಮಾಡಬೇಕಾದರೆ ನಮಗೆ ತಕ್ಷಣಕ್ಕೆ ಸಿಗುವುದು...

ನುಡಿ ಅಥವಾ ಬರಹದಲ್ಲಿ ಬರೆದ ಪಠ್ಯವನ್ನು ಯುನಿಕೋಡ್ ಗೆ ಕನ್ವರ್ಟ್ ಮಾಡಬೇಕಾದರೆ ನಮಗೆ ತಕ್ಷಣಕ್ಕೆ ಸಿಗುವುದು http://aravindavk.in/blog/ascii2unicode-converter-kannada/  ಬ್ಲಾಗ್. ಇಲ್ಲಿರುವ ಕನ್ವರ್ಟರ್ ಬಳಸಿ ಸುಲಭವಾಗಿ ಪಠ್ಯವನ್ನು ಯುನಿಕೋಡ್ ಗೆ ಕನ್ವರ್ಟ್ ಮಾಡಬಹುದು. ಈ ಕನ್ವರ್ಟರ್ ಡೆವೆಲಪ್ ಮಾಡುವ ಮೂಲಕ ಅರವಿಂದ ವಿ.ಕೆ ಕನ್ನಡ ತಂತ್ರಾಂಶಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ಶೃಂಗೇರಿ ಹತ್ತಿರದ ಉತ್ತಮೇಶ್ವರ ಊರಿನವರು. ಬಿಇ (ಇಂಡಸ್ಟ್ರೀಯಲ್ ಇಂಜಿನೀರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ )ಪದವಿ ಪಡೆದು, ಪ್ರಸ್ತುತ ರೆಡ್ ಹ್ಯಾಟ್ ಸಂಸ್ಥೆಯ ಉದ್ಯೋಗಿಯಾಗಿರುವ ಅರವಿಂದ ಅವರನ್ನು  ಈ ಸಂಭಾಷಣೆಗಾಗಿ ಮಾತನಾಡಿಸಿದಾಗ...

ಕನ್ನಡ ತಂತ್ರಾಂಶಕ್ಕೆ ನಿಮ್ಮ ಕೊಡುಗೆ?
ASCII to Unicode Converter ಎಂಬ ಕನ್ವರ್ಟರ್ ನ್ನು ಸಿದ್ಧ ಪಡಿಸಿದ್ದು, ಗುಬ್ಬಿ ಮತ್ತು ನವಿಲು ಎಂಬ ಎರಡು ಫಾಂಟ್ ಗಳನ್ನು ನಿರ್ವಹಣೆ ಮಾಡುತ್ತಿದ್ದೇನೆ. ಕನ್ನಡಕ್ಕೆ ಸರಿಯಾದ ಯುನಿಕೋಡ್ ಫಾಂಟ್ ಗಳು ಇಲ್ಲ ಎಂಬ ಕೊರಗು ನನ್ನಲ್ಲಿತ್ತು. ಕೆಲವು ಫಾಂಟ್ ಗಳು ಮುಕ್ತ ಲೈಸೆನ್ಸ್ನಲ್ಲಿ ಲಭ್ಯವಿದ್ದರೂ ಅದರಲ್ಲಿ ದೋಷಗಳಿದ್ದವು. ಅಲ್ಲಿರುವ ಫಾಂಟ್ ಗಳಲ್ಲಿನ ತೊಂದರೆಗಳನ್ನು ಪಟ್ಟಿ ಮಾಡಿಕೊಂಡು ಗ್ಲಿಫ್ ಮಾಡಲು ಇರುವ ಸಾಧ್ಯತೆಗಳು ಹಾಗು ಅದಕ್ಕೆ ಬೇಕಾದ ತಂತ್ರಾಂಶಗಳ ಅಧ್ಯಯನ ಮಾಡಿದೆ. ಫಾಂಟ್ ಗಳಲ್ಲಿರುವ ದೋಷ ಸರಿಪಡಿಸಿ ಎರಡು ಫಾಂಟ್ ಗಳನ್ನು ಅಭಿವೃದ್ದಿಪಡಿಸಿದೆ. ಆ ಎರಡು ಫಾಂಟ್ ಗಳೇ ಗುಬ್ಬಿ ಮತ್ತು ನವಿಲು.  ಅದೇ ವೇಳೆ ಡಿಟಿಪಿ ತಂತ್ರಾಂಶದಲ್ಲಿ TeX ನಲ್ಲಿ ಕನ್ನಡ ಬರೆಯಲು ಇದ್ದ ತೊಂದರೆಗಳನ್ನು ನಿವಾರಿಸಲು ಪ್ರಯತ್ನ ಮಾಡಿದ್ದೇನೆ. ಇದರಿಂದ ಸಾಕಷ್ಟು  ಜನರಿಗೆ ಉಪಯೋಗವಾಗಿದೆ.

ASCII to Unicode Converter ಸಿದ್ಧಪಡಿಸಿರುವ ಬಗ್ಗೆ?

ಸುಮಾರು 9 ವರ್ಷಗಳ ಹಿಂದೆ ನಾನೊಂದು ಕತೆ ಬರೆದಿದ್ದೆ. ಅದು ASCII ಫಾರ್ಮೆಟ್ನಲ್ಲಿತ್ತು. ಅದನ್ನು ಯುನಿಕೋಡ್ಗೆ ಕನ್ವರ್ಟ್ ಮಾಡಬೇಕಿತ್ತು. ಸಾಫ್ಟ್ವೇರ್ ಗಾಗಿ ಹುಡುಕಿದೆ, ಸಿಗಲಿಲ್ಲ. ನಾನಾವಾಗ Linux ಬಳಸುತ್ತಿದ್ದೆ. ಕನ್ವರ್ಟರ್ ಸಿಗದೇ ಇರುವಾಗ ನಾನೇ ಯಾಕೆ ಕನ್ವರ್ಟರ್ ಮಾಡಬಾರದು ಎಂದು ಅನಿಸಿತು. ಪ್ರತಿಯೊಂದು ಎನ್ಕೋಡಿಂಗ್ ನೋಡಿಕೊಂಡು ನಾನೇ ಕನ್ವರ್ಟರ್ ಸಿದ್ಧ ಪಡಿಸಿದೆ.



ಈ ಕನ್ವರ್ಟರ್ಗೆ ಸಿಕ್ಕ ಪ್ರತಿಕ್ರಿಯೆ?
ಕನ್ವರ್ಟರ್ ಸಿದ್ಧ ಪಡಿಸಿ, ASCII ಫಾಂಟ್ ನ ಯುನಿಕೋಡ್ ಗೆ ಕನ್ವರ್ಟ್ ಮಾಡಿಕೊಂಡೆ. ಈ ಸೌಲಭ್ಯವನ್ನು ಎಲ್ಲರಿಗೂ ಯಾಕೆ ಕಲ್ಪಿಸಬಾರದು ಎಂದು ಯೋಚಿಸಿ ಅದನ್ನೇ ನನ್ನ ಬ್ಲಾಗ್ ನಲ್ಲಿ ಹಾಕಿದೆ. ವೆಬ್ ನಲ್ಲಿ ಹುಡುಕಿದಾಗ ನನ್ನ ಬ್ಲಾಗ್ ಸಿಗುತ್ತಿತ್ತು. ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಕನ್ವರ್ಟರ್ ಬಳಸಿದ ಜನರು ಇಮೇಲ್ ಮಾಡುತ್ತಿದ್ದರು. ಕನ್ವರ್ಟ್ ಮಾಡುವಾಗ ಕೆಲವೊಂದು ಅಕ್ಷರಗಳು ಸರಿಯಾಗಿ ಬರುವುದಿಲ್ಲ, ತಪ್ಪುಗಳು ಗಮನಕ್ಕೆ ಬಂದಾಗ ತಿದ್ದಿದ್ದೇನೆ.

ಇದಲ್ಲದೆ ಏನೇನು ಮಾಡಿದ್ದೀರಿ?
ಡೀಸೆಲ್ ಮತ್ತು ಪೆಟ್ರೋಲ್ ಕಾರ್ ಹೋಲಿಕೆ ಮಾಡಿ ನೋಡುವ ಟೂಲ್ ಒಂದನ್ನು ತಯಾರಿಸಿದ್ದೀನಿ.
ಲಿಂಕ್ : http://aravindavk.in/diesel-vs-petrol-car/

ನಿಮ್ಮ ಹವ್ಯಾಸಗಳು
Linux  ಮುಕ್ತ ತಂತ್ರಾಂಶ ಜತೆಗೆ ಟ್ರೆಕಿಂಗ್ , ವೆಬ್ ಡೆವೆಲಪ್ಮೆಂಟ್, ಬ್ಲಾಗಿಂಗ್,  ಫೋಟೋಗ್ರಫಿ ಇಷ್ಟ


ಮುಂದಿನ ಯೋಜನೆಗಳು
ASCII to Unicode Converter ನಂತೆ Unicode to ASCII ಕನ್ವರ್ಟರ್ ಸಿದ್ಧ ಮಾಡಬೇಕಿಂದಿರುವೆ ಅದಕ್ಕಾಗಿ ಕೆಲವೊಂದು ಫಾಂಟ್ ಳನ್ನು ಸುಧಾರಣೆ ಮಾಡಬೇಕಾಗಿದೆ. ಇಂಥಾ ಕನ್ವರ್ಟರ್ ಗಾಗಿ ಜನರಿಂದ ಹೆಚ್ಚು ಬೇಡಿಕೆ ಬಂದಿದೆ. ಈ ಕನ್ವರ್ಟರ್ ನ  ಅಗತ್ಯ ಎಷ್ಟಿದೆ? ನಿಮ್ಮ ಬೇಡಿಕೆಗಳು ಏನು ಎಂಬುದನ್ನು  http://goo.gl/forms/qSmka5MePC ಲಿಂಕ್ ನಲ್ಲಿ  ನಮೂದಿಸಬಹುದು. ನಿಮ್ಮ ಅಭಿಪ್ರಾಯಗಳು ನನ್ನ ಮುಂದಿನ ಕೆಲಸಕ್ಕೆ ಸಹಾಯಕವಾಗುತ್ತದೆ.

ಅರವಿಂದ ಅವರ ವೆಬ್ ಸೈಟ್: http://aravindavk.in/

ಸಂದರ್ಶನ : ರಶ್ಮಿ ಕಾಸರಗೋಡು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT