ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ (ಸಂಗ್ರಹ ಚಿತ್ರ) 
ಸಂದರ್ಶನ

ದಲಿತ ಸಿಎಂ ವಿಚಾರ ಈಗ ಮುಗಿದ ಅಧ್ಯಾಯ: ಜಿ.ಪರಮೇಶ್ವರ

ದಲಿತ ಮುಖ್ಯಮಂತ್ರಿ ಪಟ್ಟಿನಿಂದಾಗಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಹಾಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು, ದಲಿತ ಸಿಎಂ ವಿಚಾರ ಈಗ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ....

ದಲಿತ ಮುಖ್ಯಮಂತ್ರಿ ಪಟ್ಟಿನಿಂದಾಗಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಹಾಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು, ಇದೀಗ ದಲಿತ ಸಿಎಂ ವಿಚಾರ ಮುಗಿದ ಅಧ್ಯಾಯ  ಎಂದು ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವಿಶೇಷ ಸಂದರ್ಶನ ನೀಡಿರುವ ರಾಜ್ಯದ ನೂತನ ಗೃಹ ಸಚಿವರು, ನಾನು ಕೂಡ ಇದೀಗ ಸರ್ಕಾರದಲ್ಲಿ ಪಾಲ್ಗೊಂಡಿದ್ದು, ಸಿಎಂ ಸಿದ್ದರಾಮಯ್ಯ  ಅವರೇ ನಮ್ಮ ನಾಯಕ ಎಂದು ಹೇಳಿದ್ದಾರೆ.

ಗೃಹ ಸಚಿವರಾದ ಬಳಿಕ ನಿಮ್ಮ ಮೊದಲ ಆದ್ಯತೆಗಳೇನು?
ನಾನು ಕಳೆದ ಶುಕ್ರವಾರವಷ್ಟೇ ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದು, ಇಲಾಖೆಗೆ ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಇಲಾಖೆಯ ಆರ್ಥಿಕ ಸ್ಥಿತಿಗತಿ  ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಮಾಹಿತಿ ಕೇಳಿದ್ದೇನೆ. ಸಾರಿಗೆ ನಿಯಂತ್ರಣ ಮತ್ತು ಶಾಂತಿ ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಗಳು ಬಂದ ಬಳಿಕ ಈ  ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ.

ಗೃಹ ಸಚಿವರ ಮುಂದಿರುವ ಸವಾಲುಗಳೇನು?
ಪ್ರಸ್ತುತ ಇಡೀ ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಕೋಮುವಾದಿ ಶಕ್ತಿಗಳು ಪ್ರಬಲವಾಗುತ್ತಿವೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ರಾಜ್ಯದಲ್ಲಿ ನಡೆಯುವ ಘಟನೆಗಳು ದೇಶದ ಗಮನ ಸೆಳೆಯುತ್ತಿದ್ದು, ಈ ಬಗ್ಗೆ ನಮಗೆ ದೊಡ್ಡ ಜವಾಬ್ದಾರಿ ಇದೆ. ಕರ್ನಾಟಕದಲ್ಲಿ ಯಾವುದೇ ರೀತಿಯ ಘಟನೆಗಳು ನಡೆದರೂ ಅದು ನೆರೆಯ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲ ಪ್ರಕರಣಗಳು ದೇಶಾದ್ಯಂತ ಸುದ್ದಿ ಮಾಡುತ್ತವೆ. ರಾಜಕೀಯವಾಗಿ ನೋಡುವುದಾದರೆ ಕಾಂಗ್ರೆಸ್ ಆಡಳಿತವಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಇದು ನಮಗೆ ದೊಡ್ಡ ಸವಾಲಾಗಿದ್ದು, ನನ್ನ ಅನುಭವ ಇದನ್ನು ಬಹಳ ಆತ್ಮವಿಶ್ವಾಸದಿಂದ ಎದುರಿಸಲು ಸಹಕರಿಸುತ್ತದೆ ಎಂದು ಭಾವಿಸಿದ್ದೇನೆ.

ಎಂಎಂ ಕಲಬುರ್ಗಿ ಹತ್ಯಾ ಪ್ರಕರಣದ ತನಿಖೆ ಮುಕ್ತಾಯವಾಗಿದೆಯೇ?
ಇದೊಂದು ರಾಷ್ಟ್ರೀಯ ಗಂಭೀರ ಪ್ರಕರಣವಾಗಿದ್ದು, ಇಡೀ ಸಾಹಿತ್ಯ ಲೋಕವೇ ಪ್ರಕರಣವನ್ನು ಖಂಡಿಸಿದೆ. ದೇಶದಲ್ಲಿ ಪ್ರತಿನಿತ್ಯ ಹತ್ತಾರು ಕೊಲೆ ಪ್ರಕರಣಗಳು ದಾಖಲಾಗುತ್ತವೆ. ಆದರೆ ಕಲಬುರ್ಗಿ ಹತ್ಯೆ ಕೇವಲ ಒಂದು ಅಪರಾಧ ಕೃತ್ಯವಲ್ಲ. ಹತ್ಯೆಯ ಹಿಂದೆ ಮತ್ತೇನೋ ಸಂಚಿರುವ ಶಂಕೆ ವ್ಯಕ್ತವಾಗುತ್ತಿದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಗೇ ಧಕ್ಕೆ ತರುವ ಪ್ರಯತ್ನವಾಗಿರಬಹುದು. ಈ ಬಗ್ಗೆ ಸರ್ಕಾರ ಎಚ್ಚೆತ್ತಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಖಂಡಿತವಾಗಿಯೂ ಅಪರಾಧಿಗಳನ್ನು ಜೈಲಿಗೆ ಅಟ್ಟುತ್ತೇವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನಾವು ಸಾರ್ವಜನಿಕವಾಗಿ ಯಾವುದೇ ರೀತಿಯ ಮಾಹಿತಿ ನೀಡಲು ಸಾಧ್ಯವಿಲ್ಲ.

ಕಲಬುರ್ಗಿ ಪ್ರಕರಣವನ್ನು ಸಿಬಿಐಗೆ ಏಕೆ ಹಸ್ತಾಂತರಿಸಲಿಲ್ಲ..?
ಕಲಬುರ್ಗಿ ಕೊಲೆ ಪ್ರಕರಣ ರಾಷ್ಟ್ರೀಯ ಗಮನ ಸೆಳೆದ ಪ್ರಕರಣವೇ ಆಗಿದ್ದರೂ, ಕರ್ನಾಟಕ ರಾಜ್ಯ ಪೊಲೀಸರ ಮೇಲೆ ನಮಗೆ ಬಹಳ ನಂಬಿಕೆ ಮತ್ತು ವಿಶ್ವಾಸವಿದೆ. ಪ್ರಕರಣವನ್ನು ಪೂರ್ವಾಗ್ರಹ  ಪೀಡಿತವಿಲ್ಲದೆ ಮತ್ತು ನಿಷ್ಪಕ್ಷಪಾತವಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಪೊಲೀಸರು ಬಂಧಿಸುವ ವಿಶ್ವಾಸವಿದೆ.

ಮಹಿಳಾ ರಕ್ಷಣೆಗೆ ನೀವು ತೆಗೆದುಕೊಂಡಿರುವ ಕ್ರಮಗಳೇನು?
ಮಹಿಳೆಯರ ರಕ್ಷಣೆಗೆ ಸರ್ಕಾರ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ರಕ್ಷಣೆಗಾಗಿ ರಾಜ್ಯದಲ್ಲಿ ಕಠಿಣ ಕಾನೂನುಗಳಿದ್ದು, ಅವುಗಳನ್ನು ಜಾರಿಗೊಳಿಸುತ್ತೇವೆ. ರಾಜ್ಯದ  ಪೊಲೀಸರು ಸದಾಕಾಲ ಜಾಗರೂಕರಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ. ಅವರು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳ ಬಯಸುವ ವ್ಯಕ್ತಿಗಳನ್ನು ತಡೆಯುತ್ತಾರೆ. ಕೆಲವು ಪರಿಸ್ಥಿತಿಗಳಲ್ಲಿ ಪೊಲೀಸರೇ ದಾಳಿಗೆ ತುತ್ತಾಗಿದ್ದಾರೆ. ಕಾನೂನು ಬಗೆಗಿನ ಜನರ ವರ್ತನೆ ಮತ್ತು ಮನೋಭಾವ ಬದಲಾಗದ ಹೊರತು ಯಾವುದೇ ಕಾನೂನು ಅಪರಾಧವನ್ನು ತಡೆಯಲು ಸಾಧ್ಯವಿಲ್ಲ.

ಸಿಬ್ಬಂದಿ ಕೊರೆತೆ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ?
ಇಲಾಖೆಯಲ್ಲಿ ಪ್ರಸ್ತುತ ಶೇ.25ರಷ್ಟು ಸಿಬ್ಬಂದಿಗಳ ಕೊರತೆ ಇದ್ದು, ಈ ಸಂಬಂಧ ಹಣಕಾಸು ಇಲಾಖೆಗೆ ಈ ಹಿಂದೆ ಮನವಿ ಮಾಡಲಾಗಿತ್ತು. ಹಣಕಾಸು ಇಲಾಖೆ ಕೂಡ ಈಗಾಗಲೇ 8 ಸಾವಿರ ಪೊಲೀಸ್ ಪೇದೆಗಳ ನೇಮಕಕ್ಕೆ ಕ್ರಮ ಕೈಗೊಂಡಿದೆ. ಮುಂದಿನ ವರ್ಷ ಕೂಡ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ. ಕೇವಲ ಪೇದೆಗಳಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಶ್ರೇಣಿಗಳು ಕೂಡ  ಶೀಘ್ರವೇ ಭರ್ತಿಯಾಗಲಿದೆ. ಐಪಿಎಸ್ ಅಲ್ಲದ ಹಿರಿಯ ಅಧಿಕಾರಿಗಳು ಕೂಡ ಭವಿಷ್ಯದಲ್ಲಿ ಬಡ್ತಿ ಪಡೆಯುವ ಅವಕಾಶ ಪಡೆಯಲಿದ್ದಾರೆ.

ನಿಮಗೆ ಭದ್ರತಾ ಸಲಹೆಗಾರರ ಅವಶ್ಯಕತೆ ಇದೆಯೇ?
ನನಗೆ ಯಾವುದೇ ರೀತಿಯ ಭದ್ರತಾ ಸಲಹೆಗಾರರ ಅವಶ್ಯಕತೆ ಇಲ್ಲ. ಇಲಾಖೆಯನ್ನು ಸೂಕ್ತ ರೀತಿಯನ್ನು ಮುನ್ನಡೆಸಲು ಹಿರಿಯ ಅಧಿಕಾರಿಗಳ ಸಹಕಾರ ಬೇಕು. ಭದ್ರತಾ ಸಲಹೆಗಾರರ ಪಡೆಯುವ ಕುರಿತು ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿಲ್ಲ.

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹೇಗೆ?
ಬೆಂಗಳೂರಿನ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಒಂದು. ಬೆಂಗಳೂರಿನ ಮೂಲಸೌಕರ್ಯಗಳು ಮತ್ತಷ್ಟು ಅಭಿವೃದ್ಧಿಯಾಗುವ ಅವಶ್ಯಕತೆ ಇದೆ. ಇದು ಕೇವಲ ಟ್ರಾಫಿಕ್ ಪೊಲೀಸರ ಪ್ರಶ್ನೆಯಲ್ಲ. 60 ಲಕ್ಷ ವಾಹನಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಸಾಮಾನ್ಯ ಸಂಗತಿಯೇನಲ್ಲ. ಮಲ್ಲೇಶ್ವರಂ ನಂತಹ ಪ್ರಮುಖ ಪ್ರದೇಶಗಳಲ್ಲಿ ವಾಹನಗಳೇ ಇಡೀ ರಸ್ತೆಯನ್ನು ಆಕ್ರಮಿಸಿಕೊಂಡಿರುತ್ತವೆ. ಪಾದಾಚಾರಿಗಳಿಗೆ ನಡೆದಾಡಲು ಕೂಡ ಅವಕಾಶವಿರುವುದಿಲ್ಲ. ಇಂತಹ ಟ್ರಾಫಿಕ್ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರು ನಿರ್ಮಾಣವಾಗಿಲ್ಲ.  ಹೀಗಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ. ಹೆಚ್ಚುವರಿ ಮೇಲ್ಸೇತುವೆಗಳು, ಸಿಗ್ನಲ್ ರಹಿತ ವೃತ್ತಗಳು ಬೆಂಗಳೂರು ನಗರಕ್ಕೆ ಬೇಕಾಗಿದ್ದು, ಪ್ರತ್ಯೇಕ ಪಾದಾಚಾರಿ  ಮಾರ್ಗಗಳ ರಚನೆ ಅತ್ಯವಶ್ಯಕವಾಗಿದೆ. ಇನ್ನು ಬೆಳಗಿನ ಮತ್ತು ಸಂಜೆಯ ವೇಳೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತದೆ. ಇದಕ್ಕಾಗಿ ನಾನು ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತ  (ಟ್ರಾಫಿಕ್) ರಿಗೆ ನಿರ್ದೇಶನ ನೀಡಿದ್ದು, ವಾಹನ ದಟ್ಟಣೆಯ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಖುದ್ದು ರಸ್ತೆಗಳಿದು ಸುಗುಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದ್ದೇನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT