ಸುದ್ದಿಗಳು

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023: ಚಾಮರಾಜಪೇಟೆಯಲ್ಲಿ ಜಮೀರ್ ಗೆ 20 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ

Srinivasamurthy VN

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಝಡ್ ಜಮೀರ್ ಅಹ್ಮದ್ ಖಾನ್ ಅವರು 20 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಚುನಾವಣಾ ಆಯೋಗ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ 16 ಸುತ್ತಿನ ಮತಎಣಿಕೆ ಪೈಕಿ ಈಗ 4 ಸುತ್ತಿನ ಮತಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಜಮೀರ್ ಅಹ್ಮದ್ ಖಾನ್ 24633 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು 3890 ಮತಗಳನ್ನು ಪಡೆದಿದ್ದಾರೆ. ಅಂತೆಯೇ ಜೆಡಿಎಸ್ ಅಭ್ಯರ್ಥಿ ಸಿ ಗೋವಿಂದರಾಜ್ 3235 ಮತಗಳನ್ನು ಪಡೆದಿದ್ದಾರೆ.

ಉಳಿದಂತೆ ಬಿಎಸ್ ಪಿ ಅಭ್ಯರ್ಥಿ ನರಸಿಂಹ ಮೂರ್ತಿ 322 ಮತಗಳನ್ನು ಪಡೆದಿದ್ದಾರೆ. 251 ಮತಗಳು ನೋಟಾ ಪಾಲಾಗಿದ್ದು, ಆಪ್ ಅಭ್ಯರ್ಥಿ ಜಗದೀಶ್ ಚಂದ್ರ 185 ಮತಗಳನ್ನು ಪಡೆದಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿ ಸೋಮಶೇಖರ್ 98 ಮತಗಳನ್ನು ಪಡೆದಿದ್ದಾರೆ.

ಈದ್ಗಾ ಮೈದಾನ ವಿಚಾರವಾಗಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಹಿಂದೂಪರ ಸಂಘಟನೆಗಳ ತೀವ್ರ ವಿರೋಧಕ್ಕೆ ತುತ್ತಾಗಿದ್ದರು. ಈದ್ಗಾ ಮೈದಾನ ವಿಚಾರ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎನ್ನಲಾಗಿತ್ತು.
 

SCROLL FOR NEXT