ಮಂಗಳೂರು: ಫ್ರೀಜರ್ ಇಲ್ಲದೇ 90 ದಿವಸಗಳ ಶೇಖರಣೆ ಮಾಡುವಂತಹ ಹಾಲನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಬಿಡುಗಡೆಗೊಳಿಸಲು ಸಜ್ಜಾಗಿದೆ.
ನಂದಿನಿ ತೃಪ್ತಿ ಎಂಬ ನೂತನ ಉತ್ಪನ್ನವನ್ನು ಮಂಗಳವಾರ ಬಿಡುಗಡೆಗೊಳ್ಳಲಿದ್ದು. ಇದು ಫ್ರೀಜರ್ ಇಲ್ಲದೇ, 90 ದಿವಸಗಳ ಕಾಲ ಶೇಖರಿಸಬಹುದಾಗಿದೆ.
ಈ ನೂತನ ಉತ್ಪನ್ನ ಹಾಗೂ ಫ್ಲೆಕ್ಸಿ ಪ್ಯಾಕ್ ಕಟ್ಟಡದ ಉದ್ಘಾಟನೆಯನ್ನು ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾಡಲಿದ್ದು, ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಯು ಟಿ ಖಾದರ್, ಮುಂತಾದವರು ಭಾಗವಹಿಸಲಿದ್ದಾರೆ.
ಫ್ಲೇಕ್ಸಿ ಪ್ಯಾಕ್ ಘಟಕದ ಸಿವಿಲ್ ಕಾಮಗಾರಿ ಹಾಗೂ ಯಂತ್ರೋಪಕರಣಗಳ ಖರೀದಿ ಸೇರಿ ಒಟ್ಟು 28 ಕೋಟಿ ವೆಚ್ಚದಲ್ಲಿ ಈ ನೂತನ ಉತ್ಪನ್ನವನ್ನು ಹೊರತರಲಾಗುತ್ತಿದೆ.
ಈ ಫ್ಲೇಕ್ಸಿ ಪ್ಯಾಕ್ ಘಟಕ ದಿನಕ್ಕೆ 60,000 ಲೀಟರ್ ನಂದಿನಿ ತೃಪ್ತಿ ಹಾಲು ಉತ್ಪನ್ನ ಮಾಡಲಿದೆ. ಇದು ಅರ್ಧ ಮತ್ತು ಒಂದು ಲೀಟರ್ ಪ್ಯಾಕೆಟಿನಲ್ಲಿ ಲಭ್ಯವಾಗಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics