ರಾಜ್ಯ

ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳ ಚಾಲಕರ ಮುಷ್ಕರ ಅಂತ್ಯ

Lingaraj Badiger
ಬೆಂಗಳೂರು: ಮೂಲಸೌಕರ್ಯಗಳಿಗೆ ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್​ಗಳ ಚಾಲಕರು ಮತ್ತು ಕ್ಲೀನರ್​ಗಳು ನಡೆಸುತ್ತಿದ್ದ ಮುಷ್ಕರವನ್ನು ಮಂಗಳವಾರ ಹಿಂಪಡೆಯಲಾಗಿದೆ. 
ಚಾಲಕರು ಹಾಗೂ ಕ್ಲೀನರ್ ಸಂಘದ ಜೊತೆ ಐಒಸಿ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ಮಾಲೀಕರು ನಡೆಸಿದ ಸಂಧಾನಸಭೆ ಯಶಸ್ವಿಯಾಗಿದ್ದು, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಚಾಲಕರು ಹಾಗೂ ಕ್ಲೀನರ್ ಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮೂರು ತಿಂಗಳಲ್ಲಿ ಸಮಿತಿ ರಚಿಸಲು ಇಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಸಮಿತಿ ಮುಂದೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ.
ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿರುವ ಪೆಟ್ರೋಲ್ ಟ್ಯಾಂಕರ್ ಟರ್ವಿುನಲ್​ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ನೂರಾರು ಚಾಲಕರು, ಕ್ಲೀನರ್​ಗಳು, ಟ್ಯಾಂಕರ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿ, ವಾಹನ ಸವಾರರಿಗೆ ಪರದಾಡುವಂತಾಗಿತ್ತು.
SCROLL FOR NEXT