ಬೆಂಗಳೂರು: ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿರುವ ಪೆಟ್ರೋಲ್ ಟ್ಯಾಂಕರ್ ಟರ್ವಿುನಲ್ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್ಗಳ ಚಾಲಕರು ಮತ್ತು ಕ್ಲೀನರ್ಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೆಟ್ರೋಲ್-ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.
ಸೋಮವಾರ ಬೆಳಗ್ಗಿನಿಂದ ಟ್ಯಾಂಕರ್ ಗಳ ನೂರಾರು ಚಾಲಕರು, ಕ್ಲೀನರ್ಗಳು ಪ್ರತಿಭಟನೆ ಆರಂಭಿಸಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಭೂಷಣ್ ನಾರಂಗ್ ಹೇಳಿದ್ದಾರೆ.
ಪೆಟ್ರೋಲ್-ಡೀಸೆಲ್ ಪೂರೈಕೆ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸೋಮವಾರ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಯಿತು. ಬೆಂಗಳೂರಿಗೆ 600 ರಿಂದ 700 ಟ್ಯಾಂಕರ್ ಪೆಟ್ರೋಲ್ ಅವಶ್ಯಕತೆ ಇದ್ದು, ಬರೀ 30 ಟ್ಯಾಂಕರ್ ಪೆಟ್ರೋಲ್ ಸರಬರಾಜಾಗಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.