ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಸ್ಟಿಲ್ 
ರಾಜ್ಯ

ತುಮಕೂರು: ಚಿತ್ರ ವೀಕ್ಷಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿ ಹತ್ಯೆ

ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬ...

ಅನಂತಪುರ: ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬ ಮತ್ತೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಚಲನಚಿತ್ರ ಪ್ರದರ್ಶನದ ವೇಳೆ ಇಬ್ಬರ ಮಧ್ಯೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿ ಶೋ ಮುಗಿಯುವ ಹೊತ್ತಿಗೆ ಒಬ್ಬ ಇನ್ನೊಬ್ಬನನ್ನು ಇರಿದು ಕೊಲೆ ಮಾಡಿದ್ದಾನೆ. ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿರುವ ಅಲಂಕಾರ ಥಿಯೇಟರ್ ನಲ್ಲಿ ಈ ಘಟನೆ ನಡೆದಿದೆ.

21 ವರ್ಷದ ರಾಕೇಶ್ ತೆಲುಗು ನಟ  ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿ. ಚಿತ್ರ ಪ್ರದರ್ಶನದ ಮಧ್ಯೆ ಹಾಡೊಂದು ಬಂದಾಗ ಎದ್ದು ನಿಂತು ಕುಣಿಯಲಾರಂಭಿಸಿದ. ಆಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರವಿ ಎಂಬಾತನಿಗೆ ಅಡ್ಡವಾಯಿತು. ರಾಕೇಶ್ ನನ್ನು ಕುಳಿತುಕೊಳ್ಳುವಂತೆ ರವಿ ಸೂಚಿಸಿದನು. ಆದರೆ ಅದಕ್ಕೆ ಒಪ್ಪದೆ ಡ್ಯಾನ್ಸ್ ಮುಂದುವರಿಸಿದನು. ಸಿಟ್ಟಿನಿಂದ ರವಿ ಜಗಳ  ಮಾಡಲು ಆರಂಭಿಸಿದನು. ಕುಳಿತಿದ್ದ ಪ್ರೇಕ್ಷಕರಿಗೆ ತೊಂದರೆಯಾಗಿ ಅವರು ಬಯ್ಯಲು ಶುರು ಮಾಡಿದರು. ಸಿನಿಮಾ ಮುಗಿದ ಬಳಿಕವೂ ಹೊರಗೆ ಬಂದು ರವಿ ಮತ್ತು ರಾಕೇಶ್ ಜಗಳ ಮುಂದುವರಿಸಿದರು. ಸಿಟ್ಟಿನಲ್ಲಿ ರವಿ ರಾಕೇಶ್ ಗೆ ತಿವಿದು ಸ್ನೇಹಿತರ ಜೊತೆ ಪರಾರಿಯಾದನು.

ಗಂಭೀರ ಗಾಯಗೊಂಡಿದ್ದ ರಾಕೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ರಾಕೇಶ್ ನ ಕುಟುಂಬಸ್ಥರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿ ರವಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಪೊಲೀಸ್ ಠಾಣೆಗೆ ಧಾವಿಸಿದ ತುಮಕೂರು ಪೊಲೀಸ್ ಸೂಪರಿಂಟೆಂಡೆಂಟ್ ಕಾರ್ತಿಕ್ ರೆಡ್ಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲೆತ್ನಿಸಿದರು. ಕೇಸು ದಾಖಲಿಸಿರುವ ಪಾವಗಡ ಪೊಲೀಸರು ಆರೋಪಿ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026 Final: RCB vs GT, ಮರುಕಳಿಸುತ್ತಾ ಪಿಚ್ ನಂ 6 ಕರಾಳತೆ, ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

IPL 2026 Final: RCB vs GT ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ, ಮ್ಯಾಚ್ ರದ್ದಾದರೆ ಯಾರು ಚಾಂಪಿಯನ್?

ಡಿ.ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ರಚನೆಗೆ ಇನ್ನೂ ಪ್ರಸ್ತಾವನೆ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ

T-20 ಮ್ಯಾಚ್ ನಂತೆ ಹೊಸ ಸರ್ಕಾರ: ಡಿಕೆ ಶಿವಕುಮಾರ್ ಆಕ್ಷನ್-ಪ್ಯಾಕ್ ಇನ್ನಿಂಗ್ಸ್; 'ಬಂಡೆ' 'ಪವರ್ ಪ್ಲೇ'- ಆಕ್ರಮಣಕಾರಿ ಬ್ಯಾಟಿಂಗ್!

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ರಾಜಕೀಯ ಹಿಂಸಾಚಾರ: ಅಭಿಷೇಕ್ ಬೆನ್ನಲ್ಲೇ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿ, BJP ವಿರುದ್ಧ ಆರೋಪ..!

SCROLL FOR NEXT