ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ದಪ್ಪಗಿರುವವರು ಬೆಂಗಳೂರಿನಲ್ಲಿ ಬದುಕುವುದು ಕಷ್ಟ

ಢೂತಿ ದೇಹ ಹಲವು ಬಾರಿ ಶಾಪವಾಗಿ ಪರಿಣಮಿಸುತ್ತದೆ. ದೇಹದ ಭಾರವನ್ನೇನೋ ಹೊರಬಹುದು, ಆದರೇ ಬೇರೆಯವರಿಂದ ಉಂಟಾಗುವ ಕಿರಿಕಿರಿ ಮಾತ್ರ ...

ಸಾಂದರ್ಭಿಕ ಚಿತ್ರ
Shilpa D
Updated On : 16 Apr 2016, 1:52 am

ಬೆಂಗಳೂರು: ದಢೂತಿ ದೇಹ ಹಲವು ಬಾರಿ ಶಾಪವಾಗಿ ಪರಿಣಮಿಸುತ್ತದೆ. ದೇಹದ ಭಾರವನ್ನೇನೋ ಹೊರಬಹುದು, ಆದರೇ ಬೇರೆಯವರಿಂದ ಉಂಟಾಗುವ ಕಿರಿಕಿರಿ ಮಾತ್ರ ಸಹಿಸಲಾಗದು.

ದೇಹದ ತೂಕ ಹೆಚ್ಚಿರುವುದು ಮಹಿಳೆಯರು ಮತ್ತು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬೆಂಗಳೂರಿನಲ್ಲಂತು ದಪ್ಪಗಿರುವವರನ್ನು ನೋಡುವ ದೃಷ್ಟಿಯೇ ಬೇರೆ. ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಅವಮಾನಕ್ಕೊಳಗಾಗಿದ್ದಾರೆ. ಇದು ಮಾನಸಿಕ ಖಿನ್ನತೆಗೂ ದಾರಿ ಮಾಡಿಕೊಡುತ್ತಿದೆ.

ದಪ್ಪಗಿರುವವರನ್ನು ಸಮಾಜ ಹೇಗೆ ನೋಡುತ್ತದೆ, ಹೇಗೆಲ್ಲಾ ಅವಮಾನ ಅನುಭವಿಸಬೇಕು ಎಂಬುದರ ಬಗ್ಗೆ ಹಲವು ಮಹಿಳೆಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಹಿಳೆಯೊಬ್ಬರು ಬೆಂಗಳೂರಿಂದ ಮಂಬಯಿಗೆ ತೆರಳಿದ್ದರು. ಮುಂಬಯಿಯಲ್ಲಿ ಆಟೋದಿಂದ ಇಳಿದು ಆತನಿಗೆ ಹಣ ನೀಡುವಾಗ, ನನ್ನನ್ನು ನೋಡಿದ ಆತ ನೀವು ತುಂಬಾ ದಪ್ಪ ಇದ್ದೀರಾ, ನಿಮ್ಮ ಎದೆ ದೊಡ್ಡದಾಗಿದೆ, ನೀವು ದುಪ್ಪಟ್ಟ ಹಾಕಿಕೊಂಡು ಎಲ್ಲವನ್ನು ಮುಚ್ಚಿಕೊಳ್ಳಿ ಎಂದು ಆಟೋ ಡ್ರೈವರ್ ಹೇಳಿದ್ದನ್ನು ಬಸವನಗುಡಿಯ ಮಹಿಳೆ ನೆನಪಿಸಿಕೊಂಡರು.

ದಪ್ಪಗಿರುವವರನ್ನೂ ಹೊರ ಪ್ರಪಂಚದವರು ಒಂದು ರೀತಿ ನೋಡಿ ಹೀಯಾಳಿಸುತ್ತಾರೆ, ಆದರೆ ಕೆಲವೊಂದು ಕುಟುಂಬಗಳಲ್ಲೂ ಈ ಅವಮಾನ, ಹೀಯಾಳಿಸುವುದು ತಪ್ಪಿಲ್ಲ. ತುಂಬಾ ದಪ್ಪಿಗಿದ್ದ 24 ವರ್ಷದ ಮಹಿಳೆಯನ್ನು ಪೋಷಕರು ಹಾಗೂ ಸಂಬಂಧಿಕರು ಆಡಿಕೊಂಡು ನಗುತ್ತಿದ್ದರಂತೆ. ಅವರ ಆ ಮಾತುಗಳು ನನ್ನನ್ನು ಖಿನ್ನತೆಗೆ ದೂಡುತ್ತಿತ್ತು ಎಂದು ಎಂದು ಗೃಹಿಣಿಯೊಬ್ಬರು ತಿಳಿಸಿದ್ದಾರೆ.

ಇನ್ನು ದಪ್ಪಗಿರುವ ವಿದ್ಯಾರ್ಥಿನಿಯೋರ್ವಳು ಡ್ಯಾನ್ಸ್ ಕಲಿಯಲು ಹೋದಾಗ ಅಲ್ಲಿ ಅನುಭವಿಸಿದ ಅವಮಾನ ಅಷ್ಟಿಷ್ಟಲ್ಲ. ನೀನು ತುಂಬಾ ದಪ್ಪ ಇದ್ದೀಯಾ ನಿನ್ನಿಂದ ಡ್ಯಾನ್ಸ್ ಮಾಡಲು ಆಗುವುದಿಲ್ಲ, ಒಂದು ವೇಳೆ ನೀನು ಡ್ಯಾನ್ಸ್ ಮಾಡಿದರೇ ನೆಲ ಕುಸಿದು ಬೀಳುತ್ತದೆ ಎಂದು ಹೀಯಾಳಿಸಿದ್ದಾಗಿ ವಿದ್ಯಾರ್ಥಿನಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments