ರಾಜ್ಯ

ಸ್ವಚ್ಛತೆಯಲ್ಲಿ ದೇಶಕ್ಕೆ ಮಾದರಿಯಾದ ಬೆಂಗಳೂರಿನ 2 ರೈಲ್ವೇ ನಿಲ್ದಾಣಗಳು

Manjula VN

ಬೆಂಗಳೂರು: ಪ್ರತೀ ನಿತ್ಯ ಕಾರ್ಯನಿರ್ವಹಿಸುವ ರೈಲುಗಳಲ್ಲಿ ಹಾಗೂ ರೈಲ್ವೈ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಹರಸಾಹಸದ ಕೆಲಸವೇ ಸರಿ ಎನ್ನಬಹುದು. ಆದರೆ, ನಮ್ಮ ಬೆಂಗಳೂರಿನ ರೈಲ್ವೇ ನಿಲ್ದಾಣಗಳು ಸ್ವಚ್ಛತೆ ಕಾಪಾಡುವಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ.

ದೇಶದ ಸ್ವಚ್ಛತಾ ರೈಲ್ವೆ ನಿಲ್ದಾಣಗಳ ಪೈಕಿ ಕರ್ನಾಟಕದ ನೈಋತ್ಯ ರೈಲ್ವೆ ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ ಬರುವ ವಾಸ್ಕೋಡ ಗಾಮಾ ರೈಲು ನಿಲ್ದಾಣ ಅತ್ಯಂತ ಸ್ವಚ್ಥತಾ ರೈಲ್ವೆ ವಿಭಾಗದ ಎಂಬ ಹೆಸರಿಗೆ ಖ್ಯಾತಿ ಪಡೆದಿದೆ.

ಇನ್ನು ಇದೇ ಮೊದಲ ಬಾರಿಗೆ ರೈಲ್ವೇ ಸಚಿವಾಲಯ ಸ್ವಚ್ಛತಾ ಕಾರ್ಯ ಕುರಿತಂತೆ ಸಮೀಕ್ಷೆ ನಡೆಸಲು ಸಂಸ್ಥೆಯೊಂದನ್ನು ನಿಯೋಜಿಸಿದ್ದು, ಟಿಎನ್ ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಸಮೀಕ್ಷೆಯನ್ನು ನಡೆಸಿದೆ.

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮದ ವತಿಯಿಂದ ಟಿಎನ್ ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಸಮೀಕ್ಷೆಯನ್ನು ನಡೆಸಿದ್ದು, ಸಮೀಕ್ಷೆಯ ವರದಿಯಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗದ ವಾಸ್ಕೋಡ ಗಾಮಾ ರೈಲ್ವೇ ನಿಲ್ದಾಣ ಅತ್ಯಂತ ಸ್ವಚ್ಥತಾ ರೈಲ್ವೆ ವಿಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಮೀಕ್ಷೆಯ ವರದಿಯ ಪಟ್ಟಿಯಲ್ಲಿ 407 ರೈಲ್ವೆ ನಿಲ್ದಾಣಗಳಿಗೆ ಅಂಕಗಳನ್ನು ನೀಡಲಾಗಿದ್ದು, ಇದರಲ್ಲಿ ರ್ಯಾಂಕ್ ನೀಡಲು ಎ1 ಹಾಗೂ ಎ ಎಂದು ಎರಡು ವಿಭಾಗಳನ್ನು ಮಾಡಿಕೊಳ್ಳಲಾಗಿದೆ. ಎ1 ವಿಭಾಗದಲ್ಲಿ 60 ಕೋಟಿಗೂ ಹೆಚ್ಚು ಆದಾಯ ಗಳಿಸುವ 75 ನಿಲ್ದಾಣಗಳಿಗೆ ರ್ಯಾಂಕ್ ನೀಡಲಾಗಿದೆ. ಇನ್ನು ಎ ವಿಭಾಗದಲ್ಲಿ 8 ರಿಂದ 60 ಕೋಟಿ ಆದಾಯಗಳಿಸುವ 332 ನಿಲ್ದಾಣಗಳಿಗೆ ರ್ಯಾಂಕ್ ನೀಡಲಾಗಿದೆ.

ರೈಲ್ವೇ ನಿಲ್ದಾಣಗಳಲ್ಲಿ ಸ್ವಚ್ಛತೆ ತಪಾಸಣೆ ಮಾಡುವುದು ಸಮೀಕ್ಷಾ ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ದೇಶದ 16 ರೈಲ್ವೇ ವಲಯಗಳಲ್ಲಿ ಸಮೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ನಿಲ್ದಾಗಳಲ್ಲಿ ಪ್ರಯಾಣಿಕರೊಂದಿಗೆ ಸಂದರ್ಶನ ಮಾಡುವ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪ್ರತಿಯೊಂದು ರೈಲ್ವೈ ನಿಲ್ದಾಣಕ್ಕೂ 1 ರಿಂದ 5 ರವರೆಗೆ ಅಂಕಗಳನ್ನು ನೀಡಲಾಗಿದೆ. ಇದರಂತೆ 1 ಕಳಪೆ, 5 ಅತ್ಯುತ್ತಮ ಎಂಬಂತೆ ಅಂಕಗಳನ್ನು ನೀಡಲಾಗಿದೆ. ನಗರದ ಯಶವಂತಪುರ ಮತ್ತು ಬಂಗಾರಪೇಟೆ ರೈಲ್ವೇ ನಿಲ್ದಾಣ ಮೇಲ್ಜರ್ಜೆಯ ಸ್ಥಾನ ಪಡೆದುಕೊಂಡಿದೆ.

ಇನ್ನು ಯಶವಂತಪುರ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 11 ಸ್ಥಾನವನ್ನು ಪಡೆದುಕೊಂಡಿದ್ದು, ವಾಸ್ಕೋಡ ಗಾಮಾ ರೈಲ್ವೇ ನಿಲ್ದಾಣಕ್ಕೆ ಮೊದಲನೇ ಸ್ಥಾನ, ಪಶ್ಚಿಮ ರೈಲ್ವೆ ವಿಭಾಗ ಸೂರತ್ ಮತ್ತು ರಾಜ್ಕೋಟ್ 2ನೇ ಸ್ಥಾನ ಪಡೆದುಕೊಂಡಿದೆ. ಬಿಲಾಸ್ಪುರ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಸಿಟಿ ರೈಲ್ವೇ ನಿಲ್ಧಾಣ 14ನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಪುಣೆ ನಿಲ್ಧಾಣ ಕಳಪೆ ಮಟ್ಟದ ಅಂಕವನ್ನು ಪಡೆದುಕೊಂಡಿದೆ.

ಎ ವಿಭಾಗಕ್ಕೆ ಬರುವ ದಕ್ಷಿಣ ನೈಋತ್ಯ ರೈಲ್ವೆ ವಲಯ ನಿಲ್ದಾಣಗಳು ಪಡೆದುಕೊಂಡಿರುವ ಸ್ಥಾನಗಳ ಪಟ್ಟಿ ಈ ಕೆಳಗಿನಂತಿದೆ.

  • ಹಂತ 2: ಮೈಸೂರು-33, ಕೆಂಗೇರಿ 38, ಹುಬ್ಬಳ್ಳಿ 47, ದಾವಣಗೆರೆ 72
  • ಹಂತ 3: ಹೊಸಪೇಟೆ 84, ಎಸ್ಎಸ್ ಪಿ ನಿಲಾಯಮ್ 85, ಕೃಷ್ಣರಾಜಪುರಂ 97, ಬೆಂಗಳೂರು ಕಂಟೋನ್ಮೆಂಟ್ 101, ಶಿವಮೊಗ್ಗ ಟೌನ್ 124, ಬಳ್ಳಾರಿ 152, ಬೆಳಗಾವಿ 186
  • ಹಂತ 4: ವಿಜಯಪುರ 302
  • ಹಂತ 5: ಧಾರವಾಡ 3014.
SCROLL FOR NEXT