ಮಾಜಿ ಲೋಕಾಯುಕ್ತ ನ್ಯಾ.ವೈ ಭಾಸ್ಕರ ರಾವ್
ಬೆಂಗಳೂರು: ನಿವೃತ್ತಿ ನಂತರ ನೀಡುವ ಸೌಲಭ್ಯಗಳನ್ನು ಕೋರಿ ಮಾಜಿ ಲೋಕಾಯುಕ್ತ ವೈ ಭಾಸ್ಕರ ರಾವ್ ಅವರು ಲೋಕಾಯುಕ್ತ ಉಸ್ತುವಾರಿ ರಿಜಿಸ್ಟ್ರಾರ್ ಗೆ ಪತ್ರ ಬರೆದಿದ್ದಾರೆ.
ನಿವೃತ್ತಿಯ ನಂತರದ ಸವಲತ್ತುಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿ ನ್ಯಾ.ವೈ ಭಾಸ್ಕರ ರಾವ್ ಅವರು ಏಪ್ರಿಲ್ 1 ರಂದು ಲೋಕಾಯುಕ್ತ ಉಸ್ತುವಾರಿ ರಿಜಿಸ್ಟ್ರಾರ್ ಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಲೋಕಾಯ್ಕುತ ಕಾಯ್ದೆ 6(1) ಪ್ರಕಾರ ಪಿಂಚಣಿ, ತುಟ್ಟಿಭತ್ಯೆ ಮಾತ್ರವಲ್ಲದೆ, ಭಾರತದ ಮುಖ್ಯ ನ್ಯಾಯಾಮೂರ್ತಿಗೆ ಅನ್ವಯವಾಗುವ ಎಲ್ಲಾ ನಿಯಮಗಳು ಅನ್ವಯಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ರಿಜಿಸ್ಟ್ರಾರ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಕೆಗೆ ಕಳುಹಿಸಿದ್ದಾರೆ.
2013 ಫೆಬ್ರವರಿ 14ರಂದು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಭಾಸ್ಕರ್ ರಾವ್ ಅವರು ಎರಡು ವರ್ಷ 10 ತಿಂಗಳು ಸೇವೆ ಸಲ್ಲಿಸಿ, 2015 ಡಿಸೆಂಬರ್ 7ರಂದು ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಪುತ್ರ ಅಶ್ವಿನ್ ರಾವ್ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಿದ್ದರು.