ಬಸವಕಲ್ಯಾಣ: ತನ್ನ ಮಕ್ಕಳನ್ನು ಪೋಷಿಸಲಾಗದ ತಾಯಿ ಅವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಚಿಕ್ಕನಾಂಗಾವ್ ತಾಂಡಾದಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಿಕ್ಕನಾಂಗಾವ್ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಾದ 11 ವರ್ಷದ ಹೆಣ್ಣುಮಗು ಪಾಯನ್, 8 ವರ್ಷದ ಶಿಲ್ಪಾ ಹಾಗೂ 6 ವರ್ಷದ ಶಾಲಿನಿಯನ್ನು ಕತ್ತು ಹಿಸುಕಿ ಕೊಂದು 32 ವರ್ಷದ ಶೀಲಾಬಾಯಿ ಚೌಹಾಣ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಪತಿ ರಾಮ್ ಚೌಹಾಣ್ ನಿಧನ ಹೊಂದಿದ್ದರಿಂದ ಮಕ್ಕಳನ್ನು ಪೋಷಿಸಲಾಗದೆ ಶೀಲಾಬಾಯಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮುಡಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.