ಯದುವೀರ್ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಸಿಂಗ್ 
ರಾಜ್ಯ

ಜೂನ್ 28ಕ್ಕೆ ಮೈಸೂರು ದೊರೆ ಯದುವೀರ್ ಒಡೆಯರ್ ವಿವಾಹ

ರಾಜ್ಯದ ಜನತೆ ಹಲವು ದಿನಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮೈಸೂರು ರಾಜ ಮನೆತನದ ಅರಸ ಯದುವೀರ್ ಚಾಮರಾಜ ಒಡೆಯರ್ ಅವರ ವಿವಾಹ ..

ಮೈಸೂರು: ರಾಜ್ಯದ ಜನತೆ ಹಲವು ದಿನಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮೈಸೂರು ರಾಜ ಮನೆತನದ ಅರಸ ಯದುವೀರ್ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಜೂನ್ 27 ಮತ್ತು 28 ಕ್ಕೆ ನೆರವೇರಲಿದೆ.

ರಾಜಸ್ತಾನದ ದುಂಗಾರ್ಪುರ ರಾಜಮನೆತನದ ರಾಜಕುಮಾರಿ ತ್ರಿಷಿಕಾ ಮತ್ತು ಯದುವೀರ್ ವಿವಾಹಕ್ಕೆ ಮೈಸೂರಿನ ಅಂಬಾ ವಿಲಾಸ ಅರಮನೆ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ.

ಸಂಪ್ರದಾಯಬದ್ಧ ವಿವಾಹಕ್ಕೆ ಮೈಸೂರು ಅರಮನೆ ಸಾಕ್ಷಿಯಾಗಲಿದೆ. ಈ ಅದ್ಧೂರಿ ವಿವಾಹಕ್ಕೆ ರಾಜ ಮನೆತನದ ಸದಸ್ಯರು ಮತ್ತು ಗಣ್ಯರು ಹಾಗೂ ಅತೀ ಗಣ್ಯರು ಪಾಲ್ಗೋಳ್ಳಲಿದ್ದಾರೆ.

ಇನ್ನೂ ಅರಮನೆಯ ಒಳಭಾಗದಲ್ಲಿರುವ ಗಣೇಶ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಅರಮನೆ ಪೂಜಾರಿಗಳೇ ವಿವಾಹದ ಎಲ್ಲಾ ವಿಧಿವಿಧಾನಗಳನ್ನ ನೇರವೇರಿಸಲಿದ್ದಾರೆ. ತ್ರಿಷಿಕಾ ಪೋಷಕರು ಕೂಡ ಈ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.  40 ವರ್ಷಗಳ ನಂತರ ಅರಮನೆಯಲ್ಲಿ ನಡೆಯುತ್ತಿರುವ ವಿವಾಹ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್