ರಾಜ್ಯ

ಬಿಎಂಟಿಸಿ ಟ್ರಾನ್ಸಿಟ್ ನಿರ್ವಹಣಾ ಕೇಂದ್ರಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ

Srinivas Rao BV

ಬೆಂಗಳೂರು: ವಿದ್ಯುತ್ ಶಕ್ತಿಗಾಗಿ ಬೆಸ್ಕಾಂ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಲು ಬಿಎಂಟಿಸಿ ತನ್ನ ಸಂಚಾರ ಮತ್ತು ಟ್ರಾನ್ಸಿಟ್ ನಿರ್ವಹಣಾ ಕೇಂದ್ರಗಳ ಮೇಲೆ ಸೋಲಾರ್ ಪ್ಯಾನಲ್ ನ್ನು ಅಳವಡಿಸಲು ಯೋಜನೆ ರೂಪಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್ ರೂಪ್ ಕೌರ್, ಬಿಎಂಟಿಸಿಯ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುತ್ತದೆ ಒಪ್ಪಿಗೆಯಾದರೆ ಟೆಂಡರ್ ಕರೆಯುತ್ತೇವೆ ಎಂದಿದ್ದಾರೆ.
ಯೋಜನೆ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಇಂಥದ್ದೇ ಒಂದು ಪ್ರಸ್ತಾವನೆ ಬಂದಿತ್ತು. ಆದರೆ ಸೋಲಾರ್ ಪ್ಯಾನಲ್ ನಿರ್ವಹಣೆ ಸವಾಲಿನ ಸಂಗತಿಯಾಗಿರುವುದರಿಂದ ಅದನ್ನು ಕೈಬಿಡಲಾಗಿತ್ತು ಎಂದು ತಿಳಿಸಿದ್ದಾರೆ. ಸೋಲಾರ್ ಪ್ಯಾನಲ್ ಗಳನ್ನು ಬಳಸಿ ಸಂಜೆ ವೇಳೆ ಬಿಎಂಟಿಸಿ ನಿರ್ವಹಣಾ ಕೇಂದ್ರಗಳಲ್ಲಿ ವಿದ್ಯುತ್ ಶಕ್ತಿ ಪಡೆಯಬಹುದು ಆದರೆ ರಾತ್ರಿ 10 ಗಂಟೆ ನಂತರ ಸೋಲಾರ್ ಪ್ಯಾನಲ್ ಗಳನ್ನೇ ಕದಿಯುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.   
ಬಿಎಂಟಿಸಿ ಸಂಚಾರ ಮತ್ತು ಟ್ರಾನ್ಸಿಟ್ ನಿರ್ವಹಣಾ ಕೇಂದ್ರಗಳ ರೂಫ್ ಗಳನ್ನು ಬಾಡಿಗೆ ನೀಡಿದರೆ 6 ವರ್ಷಗಳಲ್ಲಿ ಶೇ.30 -40 ರಷ್ಟು ವಿದ್ಯುತ್ ಬೇಡಿಕೆಯನ್ನು ಸೋಲಾರ್ ಪವರ್ ಮೂಲಕ ಪೂರೈಸಬಹುದು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಸಿಸ್ಟಮ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ತಿಳಿಸಿದ್ದಾರೆ.
ಕಳೆದ ವರ್ಷ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಸಹ ಇದೇ ಮಾದರಿಯಲ್ಲಿ ದೆಹಲಿ ಸಾರಿಗೆ ನಿಗಮದಲ್ಲೂ  ಸೋಲಾರ್ ಪ್ಯಾನಲ್ ನ್ನು ಅಳವಡಿಸುವ ಪ್ರಸ್ತಾವನೆ ಹೊಂದಿತ್ತು. ಆದರೆ ಅದು ಇನ್ನೂ ಜಾರಿಗೆ ಬಂದಿಲ್ಲ.

SCROLL FOR NEXT