ಚಾಮರಾಜನಗರದ ಹಾಡಿ ಗ್ರಾಮದಲ್ಲಿ ಬೀಗ ಜಡಿದಿರುವ ಮನೆಗಳು 
ರಾಜ್ಯ

ಚಾಮರಾಜನಗರ: ಹೊಟ್ಟೆಪಾಡಿಗಾಗಿ ಕೇರಳ, ತಮಿಳುನಾಡಿಗೆ ಹಳ್ಳಿಗರ ವಲಸೆ

ಇಲ್ಲಿನ ಬುಡಕಟ್ಟು ಜನಾಂಗದವರು ವಾಸವಾಗಿದ್ದ ಹಳ್ಳಿಗಳಿಗೆ ಭೇಟಿ ನೀಡಿದಾಗ ಕಾಣುವುದು ಖಾಲಿ ಖಾಲಿ ಮನೆಗಳು...

ಚಾಮರಾಜನಗರ: ಇಲ್ಲಿನ ಬುಡಕಟ್ಟು ಜನಾಂಗದವರು ವಾಸವಾಗಿದ್ದ ಹಳ್ಳಿಗಳಿಗೆ ಭೇಟಿ ನೀಡಿದಾಗ ಕಾಣುವುದು ಖಾಲಿ ಖಾಲಿ ಮನೆಗಳು, ಜಡಿದ ಬೀಗಗಳು.
ಬರ ಪೀಡಿತದಿಂದಾಗಿ ಚಾಮರಾಜನಗರದ ಹಳ್ಳಿ ಜನರು ಹುಟ್ಟೂರನ್ನು ತೊರೆದು ತಮಿಳುನಾಡು ಮತ್ತು ಕೇರಳಗಳಿಗೆ ವಲಸೆ ಹೋಗಿದ್ದಾರೆ. ಬಾನವಾಡಿ, ಗೊರೆಮೊಡು, ಎತ್ತೇಗೌಡನಪುರ ಮತ್ತು ಹೊಸಪೊಡು ಹಳ್ಳಿಯ ನಿವಾಸಿಗಳು ಕೆಲಸವನ್ನರಿಸಿ ತಮಿಳುನಾಡು ಮತ್ತು ಕೇರಳಗಳಿಗೆ ವಲಸೆ ಹೋಗಿದ್ದಾರೆ. 
ಕೆಲವರು ಮಡಿಕೇರಿ ಕಾಫಿ ಎಸ್ಟೇಟ್ ಮತ್ತು ಕೇರಳದ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಮಹಿಳೆಯರು ಬಿಳಿಗಿರಿ ರಂಗನಾಥ್ ವನ್ಯಜೀವಿ ಅಭಯಾರಣ್ಯದಲ್ಲಿರುವ ಟೀ ಎಸ್ಟೇಟ್ ನಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಗಡಿಭಾಗವಾದ ಹಾನುರ್ ಮತ್ತು ಕೊಳ್ಳಗಾಲದ ನಿವಾಸಿಗಳು ತಿರುಪುರ್ ಮತ್ತು ಸೇಲಂ ನಲ್ಲಿರುವ ಟೆಕ್ಸ್ ಟೈಲ್ ಕೈಗಾರಿಕೆಗಳಿಗಲ್ಲಿ ಕೆಲಸ ಮಾಡುತ್ತಿದ್ದಾರೆ. 
ಹಳ್ಳಿಯಲ್ಲಿ ಒಂದೆರಡು ಮನೆ ಬಾಗಿಲುಗಳು ತೆರೆದಿದ್ದು, ಅಲ್ಲಿ ವೃದ್ಧೆಯರು ವಾಸವಾಗಿದ್ದಾರೆ. ನಾನೊಬ್ಬಳೆ ಮನೆಯಲ್ಲಿದ್ದು, ಮೊಮ್ಮಕ್ಕಳನ್ನು ನೋಡಿಕೊಳ್ಳಬೇಕಿದೆ. ನನ್ನ ಮಕ್ಕಳು ಕೆಲಸವನ್ನರಸಿ ಕೇರಳಕ್ಕೆ ತೆರಳಿದ್ದಾರೆ. ಮಳೆಯಾದರೆ ಮಾತ್ರ ಅವರು ಮತ್ತೆ ಹಳ್ಳಿಗೆ ವಾಪಸ್ಸಾಗುತ್ತಾರೆ ಎಂದು ಹೊಸಪೊಡು ನಿವಾಸಿ ವೃದ್ಧೆ ಮಾದಮ್ಮ ತಿಳಿಸಿದ್ದಾರೆ. 
ಬುಡಕಟ್ಟು ಜನರು ವಲಸೆ ಹೋಗುತ್ತಿರುವುದಕ್ಕೆ ಅರಣ್ಯಾಧಿಕಾರಿಗಳೇ ಕಾರಣ. ಅರಣ್ಯದಲ್ಲಿ ಬೆಳೆಯುತ್ತಿದ್ದ ಬೆಟ್ಟದ ನೆಲ್ಲಿಕಾಯಿ, ಜೇನು ಸೇರಿದಂತೆ ಇತರೆ ಬೆಳೆಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸಲಾಗುತ್ತಿತ್ತು. ಆದರೆ ಅರಣ್ಯ ಅಧಿಕಾರಿಗಳು ಕಳೆದ ಎರಡು ವರ್ಷದಿಂದ ಅದನ್ನು ನಿಷೇಧಗೊಳಿಸಿದ್ದಾರೆ. 
ಅರಣ್ಯ ಉತ್ಪನ್ನಗಳನ್ನು ಮಾರಿ ಬುಡಕಟ್ಟು ನಿವಾಸಿಗಳು ದಿನಕ್ಕೆ ರು.400ರಿಂದ ರು.500 ಸಂಗ್ರಹಿಸುತ್ತಿದ್ದರು. ಆದರೆ, ಅದಕ್ಕೆ ನಿಷೇಧವೇರಲಾಗಿದೆ. ಸರ್ಕಾರ ಕೊಡುವ ಪಡಿತರ ಭತ್ಯೆ ಯಾವುದಕ್ಕೂ ಸಾಲುವುದಿಲ್ಲ. ಪ್ರತಿಯೊಂದನ್ನು ನಾವು ಹೊರಗಿನಿಂದ ಕೊಳ್ಳಬೇಕಿದೆ. ಆದರೆ ಅದಕ್ಕೆ ಹೆಚ್ಚು ಹಣ ಬೇಕಿದೆ. ಮಳೆ ಬಾರದೆ ಭೂಮಿ ಬರಡಾಗಿದೆ. ಹೀಗಿರಬೇಕಾದರೆ, ಹೊಟ್ಟೆಪಾಡಿಗಾಗಿ ನಮ್ಮವರು ವಲಸೆ ಹೋಗಿದ್ದಾರೆಂದು ಮುನೇಶ್ವರ ಕಾಲೋನಿಯ ಶಿವರಾಮೆ ಗೌಡ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 
1ರಿಂದ 2 ಎಕರೆ ರಾಗಿ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಕೊಳವಿ ಬಾವಿ ಮತ್ತು ಇತರೆ ಯಾವುದೇ ನೀರಿನ ಸೌಲಭ್ಯವಿಲ್ಲ. ಮಳೆಯಿಂದ ಮಾತ್ರ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಈಗ ಅದು ಸಾಧ್ಯವಾಗಿಲ್ಲ. ಹಾಗಾಗಿ, ಆ ಜಮೀನನ್ನು ಕೇರಳ ಮತ್ತು ತಮಿಳುನಾಡು ಜನರಿಗೆ ಶುಂಠಿ ಮತ್ತು ಬಾಳೆಹಣ್ಣು ಬೆಳೆಯಲು ಗುತ್ತಿಗೆ ನೀಡಲಾಗಿದ್ದು, ಇದರಿಂದ ವರ್ಷಕ್ಕೆ ಒಂದು ಎಕರೆಗೆ ರು.15,000 ಸಿಗುತ್ತದೆ. ಆದರೆ, ಶುಂಠಿ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹಾಳುಹೋಗುತ್ತದೆ ಎಂಬುದರ ಬಗ್ಗೆ ಇವರಿಗೆ ಅರಿವಿಲ್ಲ. ಇದರ ಬಗ್ಗೆ ಅರಣ್ಯಾಧಿಕಾರಿಗಳು ಕೂಡ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್