ಬೆಂಗಳೂರು: ಸಿಐಡಿ ಕಚೇರಿಯಲ್ಲಿ ಉಂಟಾದ ಜಡೆ ಜಗಳ ಡಿಐಜಿ ಸೋನಿಯಾ ನಾರಂಗ್ ಅವರ ವರ್ಗಾವಣೆಯಲ್ಲಿ ಅಂತ್ಯಕಂಡಿದೆ.
ಸಿಐಡಿ ಡಿಐಜಿಯಾಗಿ ದ್ವಿತೀಯ ಪಿಯು ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವರ್ಗಾವಣೆ ಮಾಡಲಾಗಿದೆ.
ನಾಲ್ಕು ವರ್ಷ ಕೇಂದ್ರ ಸರ್ಕಾರಕ್ಕೆ ಎರವಲು ಸೇವೆ ಮೇಲೆ ತೆರಳುತ್ತಿರುವುದಾಗಿ ಸೋನಿಯಾ ನಾರಂಗ್ ತಿಳಿಸಿದರು. ರಾಷ್ಟ್ರೀಯ ತನಿಖಾ ದಳದಲ್ಲಿ ಎಸ್ಪಿ ಹುದ್ದೆ ಹೊಣೆ ವಹಿಸಿಕೊಳ್ಳಲಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಬಯಲಿಗೆಳೆದಿದ್ದ ಸೋನಿಯಾ ನಾರಂಗ್ ಅವರು, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖಾ ನಡೆಸುತ್ತಿದ್ದಾರೆ. ಈ ತನಿಖೆ ಕಾರ್ಯವನ್ನು ಪೂರ್ಣಗೊಳಿಸಿದ ನಂತರವೇ ಅವರು ರಾಜ್ಯ ಸೇವೆಯಿಂದ ಬಿಡುಗಡೆ ಹೊಂದಲು ನಿರ್ಧರಿಸಿದ್ದಾರೆ.