ಹಾಸನದಲ್ಲಿ ನೀರಿಗೆ ತತ್ವಾರ: ಖಾಸಗಿ ಬೋರ್ ವೆಲ್ ಗಳ ಮೊರೆ ಹೋದ ಜಿಲ್ಲಾಡಳಿತ
ಹಾಸನದ ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್ ಮಾಲೀಕರುಗಳ ಮೊರೆ ಹೋಗಿದೆ..
ಹಾಸನ: ಹಾಸನದ ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್ ಮಾಲೀಕರುಗಳ ಮೊರೆ ಹೋಗಿದೆ.
ಪ್ರತಿದಿನ ನೀರು ಪೂರೈಸುವಂತೆ ಖಾಸಗಿ ಬೋರ್ ವೆಲ್ ಗಳ ಮಾಲೀಕರ ಮುಂದೆ ಜಿಲ್ಲಾಡಳಿತ ಬೇಡಿಕೆಯನ್ನಿಟ್ಟಿದೆ. ನೀರು ಪೂರೈಸಿದರೇ ನಿರಂತರ ಭಾಗ್ಯ ಜ್ಯೋತಿ ಅಡಿಯಲ್ಲಿ ಮೋಟಾರ್ ಗಳಿಗೆ ಉಚಿತ ವಿದ್ಯುತ್, ಹಾಗೂ ಪ್ರತಿ ತಿಂಗಳು 4-6 ಸಾವಿರ ರೂ ಪಾವತಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ ಎನ್ನಲಾಗಿದೆ.
ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ,
ಪ್ರತಿ ತಾಲೂಕಿನಲ್ಲೂ ಖಾಸಗಿ ಬೋರ್ ವೆಲ್ ಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಶ್ಯಕತೆಯಿರುವ ಪ್ರದೇಶಗಳಿಗೆ ದಿನದಲ್ಲಿ ಒಂದು ಬಾರಿ ನೀರು ಪೂರೈಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.