ಅರಬಿಕೊತನೂರು ಗ್ರಾಮಸ್ಥರು ಬಾವಿಯಿಂದ ನೀರು ಸೇದುತ್ತಿರುವುದು. 
ರಾಜ್ಯ

ಕೋಲಾರದ ಈ ಗ್ರಾಮಸ್ಥರಿಗೆ ಬಾವಿ ನೀರು ವರದಾನ

ಪ್ರತಿವರ್ಷ ಬರಗಾಲ ಎದುರಿಸುವ ಕೋಲಾರ ಜಿಲ್ಲೆಯ ಅರಬಿಕೊತನೂರು ಗ್ರಾಮಸ್ಥರು ಎಂದಿಗೂ ಬಾಟಲ್ ನೀರನ್ನು ಅವಲಂಬಿಸಿಲ್ಲ...

ಅರಬಿಕೊತನೂರು(ಕೋಲಾರ): ಪ್ರತಿವರ್ಷ ಬರಗಾಲ ಎದುರಿಸುವ  ಜಿಲ್ಲೆಗಳಲ್ಲಿ ಕೋಲಾರವೂ ಒಂದು. ಆದರೆ ಜಿಲ್ಲೆಯ ಅರಬಿಕೊತನೂರು ಗ್ರಾಮಸ್ಥರು ಎಂದಿಗೂ ಬಾಟಲ್ ಅಥವಾ ಟ್ಯಾಂಕರ್ ನೀರನ್ನು ಅವಲಂಬಿಸಬೇಕಾಗಿ ಬಂದಿಲ್ಲ. ಇದಕ್ಕೆ ಕಾರಣ ಗ್ರಾಮದಲ್ಲಿರುವ ಎರಡು ಬಾವಿಗಳಲ್ಲಿ ಸಿಗುತ್ತಿರುವ ನೀರು.

ಕೋಲಾರದಿಂದ ಬೆಂಗಳೂರು ಕಡೆಗೆ 6 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮ ಅರಬಿಕೊತನೂರು. ಇಲ್ಲಿ ಸುಮಾರು 2,500 ಗ್ರಾಮಸ್ಥರು ವಾಸಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳು, ಪೋಸ್ಟ್ ಆಫೀಸ್, ಗ್ರಾಮ ಪಂಚಾಯತ್ ಗಳಿವೆ. ಗ್ರಾಮದ ಹಿಂದುಗಡೆ ಸುಂದರವಾದ ಬೆಟ್ಟವಿದೆ. ಇಲ್ಲಿರುವ ಎರಡು ಬಾವಿಗಳೇ ಇಲ್ಲಿನ ಜನರ ಕುಡಿಯುವ ನೀರಿಗೆ ಆಧಾರ. ನೀರು ತುಂಬಾ ರುಚಿಯಾಗಿದ್ದು, ಶುದ್ಧೀಕರಿಸುವ ಅಗತ್ಯವೇ ಬರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಈ ಬಾವಿಗಳು ಎಂದಿಗೂ ಬತ್ತಿ ಹೋಗುವುದಿಲ್ಲ ಎಂದು ನನ್ನ ತಂದೆ ಹೇಳುತ್ತಿದ್ದರು. ಅದು ನಿಜವೆನಿಸುತ್ತದೆ. ಈ ವರ್ಷದ ಇಂತಹ ಬಿಸಿಲ ಮಧ್ಯೆಯೂ ಎಲ್ಲೆಡೆ ತೀವ್ರ ಬರಗಾಲವಿದ್ದರೂ ಕೂಡ ನಮಗೆ ನೀರಿಗೆ ತೊಂದರೆಯಾಗಿಲ್ಲ ಎನ್ನುತ್ತಾರೆ ಗ್ರಾಮದ 80 ವರ್ಷದ ರೈತ ಬಿ.ಉತ್ತಪ್ಪ.

ಮುನಿಲಕ್ಷ್ಮಯ್ಯ ಎಂಬ ಇನ್ನೊಬ್ಬ ಗ್ರಾಮಸ್ಥ ಹೇಳುವ ಪ್ರಕಾರ, ಮಳೆಗಾಲದಲ್ಲಿ ಬಾವಿಯಲ್ಲಿ ಮೇಲಿನವರೆಗೆ ನೀರು ಬರುತ್ತದೆ. ಆಗ ಹಗ್ಗದ ಸಹಾಯವಿಲ್ಲದೆ ಬಾವಿಯಿಂದ ನೀರು ತೆಗೆಯಬಹುದು.

ಬೆಳಗ್ಗೆ 7 ಗಂಟೆಯಾಗುವುದರ ಮೊದಲು ಮಹಿಳೆಯರು ಬಾವಿಯ ಹತ್ತಿರ ಹೋಗಿ ತಮಗೆ ಬೇಕಾದಷ್ಟು ನೀರು ತರುತ್ತಾರೆ. ಅದರಲ್ಲಿ ಕುಡಿಯಲು, ಅಡುಗೆಗೆ ಬಳಸುತ್ತಾರೆ. ಸಾಯಂಕಾಲ ಮತ್ತೆ ಹೋಗಿ ನೀರು ತರುತ್ತಾರೆ.

ಬೋರ್ ವೆಲ್ ಗಳಲ್ಲಿ ಬೇಸಿಗೆಯ ಬರಗಾಲದಲ್ಲಿಯೂ ನೀರು ಸಿಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಪೂರ್ವಜರು ತೋಡಿದ ಈ ಬಾವಿಯಲ್ಲಿ ಬಿಸಿಲಿನಲ್ಲಿಯೂ 25ರಿಂದ 35 ಅಡಿ ಆಳದಲ್ಲಿಯೂ ನೀರು ಇರುತ್ತದೆ ಎನ್ನುತ್ತಾರೆ ಮತ್ತೊಬ್ಬ ರೈತ ನಾಗಪ್ಪ.
ಜಿಲ್ಲಾಡಳಿತ ಗ್ರಾಮಕ್ಕೆ 4 ಬೋರ್ ವೆಲ್ ಗಳನ್ನು ಮಂಜೂರು ಮಾಡಿದೆ. ಆದರೆ ಗ್ರಾಮಸ್ಥರು ಅದನ್ನು ಸ್ನಾನಕ್ಕೆ, ಬಟ್ಟೆ, ಪಾತ್ರೆ ತೊಳೆಯಲು ಬಳಸುತ್ತಾರೆ. ಹೀಗೆ ಅರಬಿಕೊತನೂರು ಗ್ರಾಮಸ್ಥರ ಪ್ರತಿ ಮನೆಗಳಲ್ಲಿ ಒಂದು ಹಗ್ಗವಿರುತ್ತದೆ. ತಮಗೆ ನೀರು ಬೇಕೆಂದಾಗ ಹಗ್ಗ ತೆಗೆದುಕೊಂಡು ಹೋಗಿ ನೀರು ಸೇದಿ ಬರುತ್ತಾರೆ.ಕೋಲಾರ ಉಪ ಆಯುಕ್ತ ಕೆ.ವಿ.ತ್ರಿಲೋಕ್ ಚಂದ್ರ ಅವರ ಆದೇಶದ ಮೇರೆಗೆ ಗ್ರಾಮದ ಯುವಕರು ಪ್ರತಿ ಎರಡು ತಿಂಗಳಿಗೊಮ್ಮೆ ಬಾವಿಯ ಬದಿಭಾಗಗಳನ್ನು ಸ್ವಚ್ಛಗೊಳಿಸುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!