ರಾಜ್ಯ

ಆಂಬುಲೆನ್ಸ್ ಗೆ ದಾರಿ ಬಿಡದಿದ್ದರೇ 10 ಸಾವಿರ ರು.ದಂಡ

Shilpa D

ಬೆಂಗಳೂರು: ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆ ವಾಹನಗಳಿಗೆ ದಾರಿ ಕೊಡದ ಮೋಟಾರು ವಾಹನಗಳಿಗೆ ಅತ್ಯಧಿಕ ದಂಡ ವಿಧಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

2016ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸಿರುವಂತೆ ತುರ್ತಾಗಿ ಸಾಗಬೇಕಿರುವ ವಾಹನಗಳಿಗೆ ಅದರೆ, ಅಂಬುಲೆನ್ಸ್, ಫೈರ್ ಎಂಜಿನ್ಸ್, ಪೊಲೀಸ್ ಕಂಟ್ರೋಲ್ ರೂಂ ವಾಹನಗಳಿಗೆ ದಾರಿ ಬಿಡದೆ ಮುಂದೆ ನುಗ್ಗುವ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ 10 ಸಾವಿ ರು ದಂಡ ವಿಧಿಸಲು ಪ್ರಸ್ತಾವನೆ ಮಾಡಲಾಗಿದೆ.

ತುರ್ತು ಸೇವೆ ವಾಹನಗಳಿಗೆ ದಾರಿ ಬಿಡದ ವಾಹನಗಳ ವಿರುದ್ಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಹೊಸ ಅವಕಾಶವಾಗಿದ್ದು ತುರ್ತುಸೇವೆ ವಾಹನಗಳಿಗೆ ಈ ಮಸೂದೆಯಿಂದ ಸಹಾಯವಾಗಲಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ.

ತುರ್ತು ಸೇವೆ ವಾಹನಗಳಿಗೆ ದಾರಿ ಬಿಡದ ಚಾಲಕರ ಪರವಾನಗಿ ರದ್ದು ಮಾಡುವಂತೆ ಕಳೆದ ವರ್ಷ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅಪಾಯದ ಅಂಚಿನಲ್ಲಿರುವ ರೋಗಿಗಳನ್ನು ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸುವುದು ಕಷ್ಟದ ಕೆಲಸ ಎಂದು ಆಂಬುಲೆನ್ಸ್ ಡ್ರೈವರ್ ಗಳು ತಮ್ಮ ಅಳಲು ತೋಡಿಕೊಂಡಿದ್ದರು.

ಹಲವು ವಾಹನಗಳು ಅದರಲ್ಲೂ ಹೆಚ್ಚಾಗಿ ದ್ವಿಚಕ್ರ ವಾಹನಗಳು ಓವರ್ ಟೇಕ್ ಮಾಡಿ ರಸ್ತೆಯನ್ನು ಬ್ಲಾಕ್ ಮಾಡುತ್ತಾರೆ ಎಂದು ಆಂಬುಲೆನ್ಸ್ ಚಾಲಕರೊಬ್ಬರು ತಿಳಿಸಿದ್ದಾರೆ.

2010 ರಲ್ಲಿ  ದೆಹಲಿ ಪೊಲೀಸರು ಡಮ್ಮಿ ಆಂಬುಲೆನ್ಸ್ ಗಳನ್ನು ರಸ್ತೆಗಿಳಿಸಿ ಪ್ರಯೋಗ ನಡೆಸಿದ್ದರು. ಆಂಬುಲೆನ್ಸ್ ಗೆ ದಾರಿ ಬಿಡದ ಸಂಬಂಧ ಕೇವಲ 1 ಗಂಟೆಯಲ್ಲೇ 365 ಕೇಸ್ ಗಳನ್ನು ದಾಖಲಿಸಿದ್ದರು.

ತುರ್ತು ಸೇವೆಗಳಿಗೆ ದಾರಿ ಬಿಡದ ಚಾಲಕರ ವಿರುದ್ಧ 10 ಸಾವಿರ ದಂಡ ವಿಧಿಸಲು ಮಾಡಿರುವ ಪ್ರಸ್ತಾವನೆ ಒಳ್ಳೆಯದೇ, ಆದರೇ, ಸಿಗ್ನಲ್ ನಲ್ಲಿ  ನಿಂತಿರುವ ವಾಹನಗಳ ಸವಾರರು ಆಂಬುಲೆನ್ಸ್ ಗೆ ದಾರಿ ಬಿಡಲು ಸಿಗ್ನಲ್ ದಾಟ ಬಹುದೇ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ವಾಹನ ಸವಾರರೊಬ್ಬರು ತಿಳಿಸಿದ್ದಾರೆ.

ಇನ್ನೂ ರಸ್ತೆ ನಿಯಮ ಉಲ್ಲಂಘಿಸಿ ಚಾಲನೆ ಮಾಡುವ  ಕ್ಯಾಬ್ ಡ್ರೈವರ್ ಗಳಿಗೆ ಸುಮಾರು 25 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸುವ ಹೊಸ ಕಾನೂನು ಸಹ ಜಾರಿಗೆ ಬರುವ ಸಾಧ್ಯತೆ.

SCROLL FOR NEXT