ಬೆಳಗಾವಿ: ಅತ್ತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಯಾವುದೇ ಕ್ಷಣಗದಲ್ಲೂ ನದಿಗೆ ಅಪಾರ ಪ್ರಮಾಣದ ನೀರು ಬಿಡುವ ಸಾಧ್ಯತೆಗಳಿವೆ.
ಇತ್ತ ಕರ್ನಾಟಕದಲ್ಲಿ ಮಾತ್ರ ಪ್ರವಾಹದ ಭೀತಿಯೇ ಇಲ್ಲದೇ ಉತ್ತರ ಕರ್ನಾಟಕದ ಗ್ರಾಮಸ್ಥರು ಪ್ರವಾಹದ ನದಿ ನೀರಿನಲ್ಲೇ ಈಜಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮತ್ತೊಂದೆಡೆ ಚಿಕ್ಕೋಡಿ, ಬೆಳಗಾವಿ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಮಹಿಳೆಯರು ನದಿ ತಟದಲ್ಲೇ ಬಟ್ಟೆ ಒಗೆಯುತ್ತಿದ್ದಾರೆ. ಅತ್ತ ಅಧಿಕಾರಿಗಳು ಭೀಕರ ಪ್ರವಾಹದ ಕುರಿತು ಮುನ್ನೆಚ್ಚರಿಕೆ ನೀಡಿ ನದಿ ಪಾತ್ರದ ಪ್ರದೇಶಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡುತ್ತಿದ್ದರೆ ಇತ್ತ ಗ್ರಾಮಸ್ಥರು ಮಾತ್ರ ಅಲ್ಲೇ ಈಜಾಡುತ್ತಿದ್ದಾರೆ. ಮತ್ತೆ ಕೆಲವರು ನೀರಿನಲ್ಲಿಯೇ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದಾರೆ.
ಒಂದು ವೇಳೆ ಮಹಾರಾಷ್ಟ್ರ ಜಲಾಶಯಗಳಿಂದ ಒಮ್ಮೆಲೆ ನೀರು ಬಿಡಗಡೆಯಾದರೆ ಖಂಡಿತಾ ಈ ಭಾಗದ ಪ್ರದೇಶಗಳು ಜಲಾವೃತ್ತವಾಗುವುದಷ್ಟೇ ಅಲ್ಲದೇ ಗ್ರಾಮಗಳು ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವಿದೆ. ಹೀಗಿದ್ದೂ ಇಲ್ಲಿನ ಜನರು ಮಾತ್ರ ಪ್ರವಾಹ ಪೀಡಿತ ಕೃಷ್ಣ ಮತ್ತು ಗೋದಾವರಿ ನದಿಗಳಲ್ಲಿ ಈಜಾಡುವ ಮೂಲಕ ಅಧಿಕಾರಿಗಳಿಗೆ ತಲೆನೋವು ತಂದಿತ್ತಾದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಪ್ರವಾಹ ಪೀಡಿತ ಗ್ರಾಮಗಳನ್ನು ತಾತ್ಕಾಲಿಕವಾಗಿ ತೊರೆಯುವಂತೆಯೂ ಮತ್ತು ಯಾವುದೇ ಕಾರಣಕ್ಕೂ ಪ್ರವಾಹ ಪೀಡಿತ ನದಿಗೆ ಇಳಿಯದಂತೆ ಮನವಿ ಮಾಡಿದ್ದಾರೆ.