ಮಾಣಿಕ್ ಶಾ ಪರೇಡ್ ಗ್ರೌಂಡ್ 
ರಾಜ್ಯ

ಬೆಂಗಳೂರು: 70ನೇ ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಭದ್ರತೆ, ಪೊಲೀಸ್ ಸರ್ಪಗಾವಲು

ಸೋಮವಾರ ನಡೆಯಲಿರುವ 70 ನೇ ಸ್ವಾತಂತ್ರ್ಯ ದಿನಾಚರಣೆಗೆ ಫೀಲ್ಡ್‌ ಮಾರ್ಷಲ್‌ ಮಾಣೆಕ್ ಷಾ ಪರೇಡ್‌ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರು: ಸೋಮವಾರ ನಡೆಯಲಿರುವ 70 ನೇ  ಸ್ವಾತಂತ್ರ್ಯ ದಿನಾಚರಣೆಗೆ ಫೀಲ್ಡ್‌ ಮಾರ್ಷಲ್‌ ಮಾಣೆಕ್ ಷಾ ಪರೇಡ್‌ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಾರ್ಯಕ್ರಮ ನಡೆಯುವ ಮಾಣೆಕ್ ಷಾ ಪರೇಡ್‌ ಮೈದಾನ ಸೇರಿದಂತೆ ನಗರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಗರುಡಾ ಕಮಾಂಡೊ  ಪಡೆಯೂ ಹದ್ದಿನ ಕಣ್ಣಿಡಲಿದೆ. ಪರೇಡ್‌ ಮೈದಾನದ ಸುತ್ತಲೂ 40 ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭಾರತೀಯ ಭೂಸೇನೆಯ ‘ಮೈನ್‌ ಡಿಟೆಕ್ಷನ್‌’ (ನೆಲಬಾಂಬ್‌ ಪತ್ತೆ) ದಳವನ್ನು ಈ ಬಾರಿ ನಿಯೋಜನೆ ಮಾಡಲಾಗಿದೆ. ಅದರೊಟ್ಟಿಗೆ ಬಾಂಬ್‌ ನಿಷ್ಕ್ರಿಯ ದಳದ ಎರಡು ತಂಡ, ಎರಡು ಗುಂಡು ನಿರೋಧಕ ವಾಹನಗಳು ಹಾಗೂ ಸ್ಕೈ ಸೆಂಟ್ರಿಗಳು ಇರಲಿದ್ದಾರೆನಗರ ಪೊಲೀಸ್ ಆಯುಕ್ತ ಎನ್ ಮೆಘರಿಕ್ ತಿಳಿಸಿದ್ದಾರೆ.

ಪೊಲೀಸ್‌ ಭದ್ರತೆಯ ಜೊತೆಗೆ 16 ಆಂಬುಲೆನ್ಸ್‌ಗಳು, 20 ವೈದ್ಯರು, 30 ಜನ  ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಹಾಗೂ 10 ಹಾಸಿಗೆಗಳನ್ನು ಒಳಗೊಂಡ ವೈದ್ಯಕೀಯ ವ್ಯವಸ್ಥೆಯೂ ಮೈದಾನದಲ್ಲಿ ಇರಲಿದೆ. 25 ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ  8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿಯೂ ಇರಲಿದ್ದಾರೆ. 12 ಡಿಸಿಪಿಗಳು, 22 ಎಸಿಪಿಗಳು, 55 ಪೊಲೀಸ್ ಇನ್ಸ್ ಪೆಕ್ಟರ್ ಗಳು, 105 ಸಬ್ ಇನ್ಸ್ ಪೆಕ್ಟರ್ ಗಳು, 40 ಕೆಎಸ್ ಆರ್ ಪಿ ತುಕಡಿ, ನಿಯೋಜಿಸಲಾಗಿದೆ.

ಬೆದರಿಕೆ ಇರುವ ಕುರಿತು ಕೇಂದ್ರೀಯ ಭದ್ರತಾ ಸಂಸ್ಥೆಗಳಿಂದ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಭದ್ರತಾ ದೃಷ್ಟಿಯಿಂದ ನಗರದಲ್ಲಿ ಆಗಸ್ಟ್ 13ರಿಂದ ಆಗಸ್ಟ್ 15ರ ತನಕ ಡ್ರೋನ್‌, ಬಲೂನ್‌ ಸೇರಿದಂತೆ ದೂರ ನಿಯಂತ್ರಿತ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT